ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂಗಳ ಬಂಧನ ರಾಜಕೀಯ ಪ್ರೇರಿತ

By Staff
|
Google Oneindia Kannada News

ನವದೆಹಲಿ, ನ. 13 : ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಹಿಂದೂ ಧಾರ್ಮಿಕ ಮುಖಂಡರನ್ನು ಆರೋಪಿಗಳನ್ನಾಗಿಸಿ ಬಂಧಿಸುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಇದು ಯುಪಿಎ ಸರ್ಕಾರದ ರಾಜಕೀಯ ದುರದ್ದೇಶದ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದು ಧಾರ್ಮಿಕ ಮುಖಂಡರನ್ನು ಬಂಧಿಸಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅದರ ಲಾಭ ಪಡೆಯಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದರು. ಮಾಲೇಗಾ೦ವ ಸ್ಪೋಟಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಪುರಾವೆ ಇಲ್ಲದಿದ್ದರೂ ಘಟನೆಗೆ ಸಂಬಂಧ ಕಲ್ಪಿಸಿ ಹಿಂದು ಮುಖಂಡರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದು ಕಾನೂನು ವಿರೋಧಿ ಕೆಲಸ ಎಂದು ರಾಜನಾಥ್ ಸಿಂಗ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಉತ್ತರ ಪ್ರದೇಶದ ಗೋರಖಪುರ ಕ್ಷೇತ್ರದ ಸಂಸದ ಯೋಗಿ ಆದಿತ್ಯನಾಥ್ ಅವರನ್ನು ಬಂಧಿಸಲಾಗಿದೆ. ಆರೋಪಿಗಳ ಪಟ್ಟಿಯಲ್ಲಿ ಇವರ ಹೆಸರು ಕೂಡಾ ದಾಖಲಿಸಲಾಗಿದೆ. ಸರಿಯಾದ ಆಧಾರಗಳಿಲ್ಲದೆ ಹಿಂದೂ ಧಾರ್ಮಿಕ ನಾಯಕರು ಮತ್ತು ಆಶ್ರಮಗಳ ಮೇಲೆ ಪೊಲೀಸರು ನಡೆಸುತ್ತಿರುವ ವಿಚಾರಣೆ ಸರಿಯಲ್ಲ. ಸರಿಯಾದ ಸಾಕ್ಷ್ಯಾಧಾರ ಇದ್ದರೆ ಯಾವುದೇ ತನಿಖೆಗೆ ನಮ್ಮ ವಿರೋಧವಿಲ್ಲ ಆದರೆ ಆಡಳಿತ ಕಾಂಗ್ರೆಸ್ ಇದನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ಖಂಡನಾರ್ಹ ಎಂದು ಕಿಡಿಕಾರಿದರು.

ಹಿಂದೂ ಉಗ್ರಗಾಮಿಗಳು ಎನ್ನುವ ಶಬ್ದ ರಾಜಕೀಯ ಪ್ರೇರಿತವಾಗಿದೆ. ಯೋಗಿ ಆದಿತ್ಯನಾಥ್ ಯಾವುದೇ ಸಮಾಜ ವಿರೋಧ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎನ್ನುವುದು ನಂಬಲು ಅಸಾಧ್ಯ ಎಂದು ಅವರು ಹೇಳಿದರು. ಕೇಂದ್ರ ಸರಕಾರ ಭಯೋತ್ಪಾದನೆ ಮತ್ತು ಮುಸ್ಲಿಂ ಸಮಾಜವನ್ನು ಎರಡು ಬೇರೆ ಬೇರೆ ವಿಷಯವಾಗಿ ನೋಡಬೇಕೋ, ಬೇಡವೋ ಎನ್ನುವ ಗೊಂದಲದಲ್ಲಿದೆ ಎಂದು ರಾಜನಾಥ್ ಸಿಂಗ್ ಲೇವಡಿ ಮಾಡಿದರು.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X