ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖೇಶ್ ಅಂಬಾನಿ ಈಗ ವಿಶ್ವ ಕುಬೇರ

By Staff
|
Google Oneindia Kannada News

ನವದೆಹಲಿ, ನ. 13 : ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮಾಲೀಕ ಮುಖೇಶ್ ಅಂಬಾನಿ, ಅನಿವಾಸಿ ಭಾರತೀಯ ಲಕ್ಷ್ಮಿ ಮಿತ್ತಲ್ ಅವರನ್ನು ಹಿಂದಕ್ಕುವ ಮೂಲಕ ಪ್ರಪಂಚದಲ್ಲೇ ಶ್ರೀಮಂತ ಭಾರತೀಯರಾಗಿ ಹೊಮ್ಮಿದ್ದಾರೆ. ಫೋರ್ಬ್ಸ್ ತನ್ನ ವಾರ್ಷಿಕ ಪಟ್ಟಿಯನ್ನು ಪ್ರಕಟಿಸಿದ್ದು, ಅಂಬಾನಿ ಅವರ ಆಸ್ತಿ ಸುಮಾರು 20.8 ಬಿಲಿಯನ್ ಅಮೆರಿಕನ್ ಡಾಲರ್ ಹೊಂದಿ ಪ್ರಥಮ ಸ್ಥಾನ ಗಳಿಸಿದರೆ, ಉಕ್ಕಿನ ದೊರೆ ಲಕ್ಷ್ಮಿ ಮಿತ್ತಲ್ 20.5 ಬಿಲಿಯನ್ ಅಮೆರಿಕನ್ ಡಾಲರ್ ನಿಂದ ಎರಡನೇ ತೃಪ್ತಪಡಿಬೇಕಾಯಿತು.

ಮುಖೇಶ್ ಸಹೋದರ ಅನಿಲ್ ಅಂಬಾನಿ ಅವರ ಅಸ್ತಿ ಸುಮಾರು 12.5, ಭಾರತಿ ಸಂಸ್ಥೆ ಮಾಲೀಕ ಸುನಿಲ್ ಮಿತ್ತಲ್ 7.9, ಡಿ ಎಲ್ ಎಫ್ ಮುಖ್ಯಸ್ಥ ಕೆ ಪಿ ಸಿಂಗ್ 7.8 ಬಿಲಿಯನ್ ಅಮೆರಿಕನ್ ಡಾಲರ್ ಆಗಿದ್ದು ಕ್ರಮವಾಗಿ ಮೂರು, ನಾಲ್ಕು ಹಾಗು ಐದನೇ ಸ್ಥಾನದಲ್ಲಿದ್ದಾರೆ. ಆದರೆ ಭಾರತದ 40 ಶ್ರೀಮಂತರ ಒಟ್ಟು ಆದಾಯ ಷೇರು ಮಾರುಕಟ್ಟೆಯ ಪತನದಿಂದಾಗಿ ಶೇ.60 ರಷ್ಟು ಇಳಿದಿದೆ ಎಂದು ಫೊರ್ಬ್ಸ್ ಪ್ರಕಟಿಸಿದೆ. ರಿಯಾ ಸಹೋದರರು ಮತ್ತು ವಿಪ್ರೊ ಮಾಲಿಕ ಅಜೇಮ ಪ್ರೇಮ್ಜಿ 7.6 ಮತ್ತು 7.0 ಬಿಲಿಯನ್ ಅಮೆರಿಕನ್ ಡಾಲರ್ ನೊಂದಿಗೆ ಆರನೇ ಮತ್ತು ಏಳನೇ ಸ್ಥಾನದಲ್ಲಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X