• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಾಂಧೀನಗರದ ದೇವಸ್ಥಾನಗಳು ಗೋವಿಂದ

By Staff
|

ಗಾಂಧೀನಗರ,( ಗುಜರಾತ್) ನ. 13: ಅಕ್ಟೋಬರ್ 13 ರಿಂದ ಈವರೆಗೆ ಗುಜರಾತ್ ನ ರಾಜಧಾನಿ ಗಾ೦ಧಿನಗರ ಪ್ರದೇಶದಲ್ಲಿ ಸುಮಾರು 80 ದೇವಸ್ಥಾನಗಳು ಅಥವಾ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗಗಳನ್ನು ನೆಲಸಮಮಾಡಲಾಗಿದೆ. ಅಕ್ರಮ ಒತ್ತುವರಿ ಮಾಡಿಕೊಂಡಿರುವ ಎಲ್ಲಾ ದೇವಾಲಯಗಳನ್ನು ಯಾವುದೇ ಮುಲಾಜು ಇಲ್ಲದೆ ಸ್ಥಳೀಯ ಅಧಿಕಾರಿಗಳು ಕೆಡವಿಹಾಕುತ್ತಿದ್ದಾರೆ.

ಅಹಮದಾಬಾದ್ ಮತ್ತು ಗಾಂಧಿನಗರ ಈ ಎರಡೂ ಅವಳಿ ನಗರಗಳಿಗೆ ಸಂಚಾರಕ್ಕೆ ತೊಂದರೆ ಆಗುವ ಎಲ್ಲಾ ಅಕ್ರಮ ಕಟ್ಟಡ / ಪೂಜಾಸ್ಥಳ ಗಳನ್ನೂ ತೆರವು ಗೊಳಿಸಬೇಕೆಂದು ರಾಜ್ಯ ಹೈಕೋರ್ಟ್ ಆದೇಶ ನೀಡಿದೆ. ಆದರೆ, ಅಹಮದಾಬಾದ್ ಮಹಾನಗರ ಪಾಲಿಕೆ ಅಧಿಕಾರಿಗಳು ಮಾತ್ರ ಈ ಆದೇಶವನ್ನು ಪಾಲಿಸಲು ವಿಫಲರಾಗಿದ್ದಾರೆ.

ವಿಶ್ವ ಹಿಂದೂ ಪರಿಷತ್ತಿನ ಅಶ್ವಿನ್ ಪಟೇಲ್ ನೇತೃತ್ವದಲ್ಲಿ ಮಹಾ ಗುಜರಾತ್ ಜನತಾ ಪಕ್ಷದ ಬೆಂಬಲದೊಂದಿಗೆ ದೇವಸ್ಥಾನ ನೆಲಸಮ ಕಾರ್ಯಾಚರಣೆ ವಿರುದ್ಧ ಪ್ರತಿಭಟನೆ ನಡೆದರೂ ದಿಟ್ಟ ಅಧಿಕಾರಿಗಳ ಮುಂದೆ ಏನೂ ಪ್ರಯೋಜನವಾಗಲಿಲ್ಲ. ಚಳವಳಿಗೆ ಅಣಿಯಾಗಿದ್ದ ಅಶ್ವಿನ್ ಪಟೇಲ್ ಅವರನ್ನು ಈ ಸಂಬಂಧ ಬಂಧಿಸಲಾಗಿದೆ ಎಂದು ಕೇಳಿಬಂದಿತ್ತು . ಆದರೆ ಇತ್ತೀಚಿಗೆ ಅಶ್ವಿನ್ ಪಟೇಲ್, ಮೋದಿ ವಿರುದ್ದ ನಡೆದ ಎಸ್ ಎಂ ಎಸ್ ಚಳುವಳಿಗೆ ಪ್ರಮುಖ ಕಾರಣರಾಗಿದ್ದರು. ಆದಕಾರಣ ಅವರನ್ನ ಬಂದಿಸಲಾಗಿದೆಯಷ್ಟೆ ಎಂದು ವಿ ಎಚ್ ಪಿ ಹೇಳುತ್ತಿದೆ.

'ಅಕ್ರಮವಾಗಿ ನಿರ್ಮಿಸಿರುವ ಯಾವುದೇ ಕಟ್ಟಡವನ್ನು ದಯ ದಾಕ್ಷಿಣ್ಯ ಇಲ್ಲದೆ ನೆಲಸಮ ಮಾಡಲಾಗುವುದು. ಈ ಕಾರ್ಯ ಇದೀಗ ಆರಂಭವಾಗಿದೆ ಮಾತ್ರ' ಎಂದಿದ್ದಾರೆ ಗಾಂಧೀನಗರದ ಜಿಲ್ಲಾಧಿಕಾರಿ ಸಂಜೀವ್ ಕುಮಾರ್

ನೆಲಕಚ್ಚಿದ ಗಾಂಧೀನಗರದ ಕೆಲವು ಪ್ರಮುಖ ದೇವಸ್ಥಾನಗಳು ಇಂತಿವೆ:

ಪಂಚಮುಖಿ ಹನುಮಾನ್ ದೇವಸ್ಥಾನ- ಕೆಎಚ್ ರಸ್ತೆ

ರಾಜರಾಜೇಶ್ವರಿ ಮೆಲ್ದಿ ದೇವಸ್ಥಾನ- ಮಧುರ ಡೇರಿ ಸಮೀಪ

ಘೋಜ ಬಾಬಾ ದೇವಸ್ಥಾನ- ಗುಕಾಲ್ ಪುರ

ಮಾ ಅಂಬಾಜಿ ದೇವಸ್ಥಾನ ಗುಕಾಲ್ಪುರ

ಚೆಹರ್ ಮಾತಾ ದೇಗುಳ- ಕೆಎಚ್ ರಸ್ತೆ.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more