ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರನಿಂದ ಕೂಗಳತೆ ದೂರದಲ್ಲಿ ಚಂದ್ರನೌಕೆ

By Staff
|
Google Oneindia Kannada News

ಬೆಂಗಳೂರು, ನ. 13 : ಭಾರತದ ಮಹತ್ವಾಕಾಂಕ್ಷೆಯ ಮಾನವ ರಹಿತ ಚಂದ್ರಯಾನ -1 ಉಪಗ್ರಹ ಯಶಸ್ವಿಯಾಗಿ ಚಂದ್ರನನ್ನು ತಲುಪುವ ಕೊನೆಯ ಕಕ್ಷೆಯನ್ನು ಸೇರಿದೆ. ಚಂದ್ರನಿಂದ ಅನತಿ ದೂರದಲ್ಲಿರುವ ಭಾರತೀಯ ನೌಕೆ ಯಾವುದೇ ಕ್ಷಣ ಚಂದ್ರಮಂಚದ ಮೇಲೆ ವಿರಮಿಸುವ ಸೂಚನೆಗಳು ಲಭ್ಯವಾಗಿವೆ.

ಚಂದ್ರನಿಂದ 102 ಕಿಮೀ ಸಮೀಪವಿರುವ ಚಂದ್ರಯಾನ-1 ಉಪಗ್ರಹ ಮುಂದಿನ ಎರಡು ವರ್ಷಗಳ ಅವಧಿಯ ಚಂದ್ರನ ಅಂಗಳದಲ್ಲಿ ನಡೆಯುವ ಕಾರುಬಾರುಗಳನ್ನು ಭರತಖಂಡದ ವಿಜ್ಞಾನಿಗಳಿಗೆ ವರದಿ ಮಾಡುತ್ತದೆ. ಹಾಗೆಂದು ಇಂದು ಇಸ್ರೋ ಸ್ಪಷ್ಟಪಡಿಸಿದೆ.

ಕಳೆದ ತಿಂಗಳ 22 ರಂದು ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರ ಉಡಾವಣೆಗೊಳಿಸಲಾಗಿದ್ದ ಚಂದ್ರಯಾನ-1 ಉಪಗ್ರಹ ನಿರೀಕ್ಷಿಸಿದಂತೆ ಚಂದ್ರನ ಅಂಗಳಕ್ಕೆ ಕಾಲಿಟ್ಟಂತಾಗಿದೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಅಲ್ಲಿನ ಸಮಗ್ರ ವರದಿಯೂ ವಿಜ್ಞಾನಿಗಳಿಗೆ ಸಿಗಲಿದೆ. ಮಾನವ ರಹಿತ ಉಪಗ್ರಹ ಚಂದ್ರಯಾನ-1 ಇದೀಗ ಚಂದ್ರನ ಕಕ್ಷೆಯಿಂದ 102 ಕಿಮೀ ಅಂತರದಲ್ಲಿದೆ. ಚಂದ್ರನಿಂದ 255 ಕಿಮೀ ದೂರದಲ್ಲಿರುವ ಅಪೋಸಿಲಿನ್ ಕಕ್ಷೆಯಿಂದ, 102 ಕಿಮೀ ಸಮೀಪವಿರುವ ಪೆರಿಸಿಲಿನ್ ಕಕ್ಷೆಗೆ ಯಶಸ್ವಿಯಾಗಿ ಬಂದು ತಲಪಿದ ಸ್ಪಷ್ಟ ಸಂದೇಶಗಳು ಬೆಂಗಳೂರಿನ ಬ್ಯಾಲಾಳುವಿನಲ್ಲಿರುವ ಬಾಹ್ಯಾಕಾಶಕ್ಕೆ ಬಂದು ತಲುಪಿವೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.

ಉದ್ದೇಶಿತ ಚಂದ್ರಯಾನ-1 ಉಪಗ್ರಹ ಚಂದ್ರನ ಮೇಲೆ ನ. 14 ಇಲ್ಲವೆ 15 ರಂದು ಅಧಿಕೃತವಾಗಿ ಪ್ರವೇಶಿಸಲಿದೆ. ಈ ಮೂಲಕ ಭಾರತದ ತ್ರಿವರ್ಣ ಧ್ವಜ ಚಂದ್ರನ ಮೇಲೆ ಹಾರಾಡಲಿದೆ ಎಂದು ವಿಜ್ಞಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಚಂದ್ರಯಾನದ ಎಲ್ಲ ಪ್ರಕ್ರಿಯೆಗಳು ಬ್ಯಾಲಾಳು ಬಾಹ್ಯಾಕಾಶ ಕೇಂದ್ರದಲ್ಲಿ ದಾಖಲಾಗಲಿವೆ.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X