ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟಿಷ್ ಟೆಲಿಕಾಂನಿಂದ 10ಸಾವಿರ ನೌಕರರು ಮನೆಗೆ

By Staff
|
Google Oneindia Kannada News

ಲಂಡನ್, ನ. 13 : ಭಾರತದಲ್ಲಿ ಹೆಚ್ಚಿನ ಕಾರ್ಯ ಚಟುವಟಿಕೆ ಹೊಂದಿರುವ ಬ್ರಿಟಿಷ್ ಟೆಲಿಕಾಂ 2009ರ ಮಾರ್ಚ್ ಒಳಗಡೆ ಜಗತ್ತಿನಾದ್ಯಂತ 10 ಸಾವಿರ ಕಾರ್ಮಿಕರನ್ನು ಮನೆಗೆ ಕಳಿಸಲು ನಿರ್ಧರಿಸಿದೆ. ಹೆಚ್ಚಿನ ಕೊಡಲಿಯೇಟು ಭಾರತದಲ್ಲಿರುವ ನೌಕರರ ಮೇಲೆ ಬೀಳಲಿದೆ.

ಪ್ರಸ್ತುತ ಹಣಕಾಸು ವರ್ಷದ ಮೊದಲ ಆರು ತಿಂಗಳ ತೆರಿಗೆಪೂರ್ವ ಲಾಭ ಶೇ. 11ರಷ್ಟು ಕುಸಿದಿದೆ. ಇದರ ಪರಿಣಾಮ ಏಜೆನ್ಸಿಗಳು, ಕಾಂಟ್ರಾಕ್ಟ್ ಉದ್ಯೋಗಿಗಳು ಮತ್ತು ಸಾಗರೋತ್ತರ ಕೆಲಸಗಾರರ ಮೇಲೆ ಆಗಲಿದೆ ಎಂದು ಕಂಪನಿ ತಿಳಿಸಿದೆ. ಉಪಗುತ್ತಿಗೆದಾರರು ಮತ್ತು ಪರೋಕ್ಷ ಕೆಲಸಗಾರರೂ ನೌಕರಿ ಕಳೆದುಕೊಳ್ಳಲಿದ್ದಾರೆ. ಬ್ರಿಟಿಷ್ ಟೆಲಿಕಾಂನಲ್ಲಿ ಜಾಗತಿಕವಾಗಿ 1,60,000 ನೌಕರು ಕೆಲಸ ಮಾಡುತ್ತಿದ್ದಾರೆ.

ಸಲಹೆಗಾರರು ಮತ್ತು ಗುತ್ತಿಗೆದಾರರ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ ಎಂದು ಕಂಪನಿ ತಿಳಿಸಿದೆ. ಬ್ರಿಟಿಷ್ ಟೆಲಿಕಾಂನ ಕಾರ್ಯನಿರ್ವಹಣೆ ನಿರಾಶಾದಾಯಕವಾಗಿದೆ ಎಂದು ಹತಾಶೆ ವ್ಯಕ್ತಪಡಿಸಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X