ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ಸೇರಲು ರಜಿನಿ ಸ್ಪಷ್ಟ ನಕಾರ

By Staff
|
Google Oneindia Kannada News

ಚೆನ್ನೈ, ನ. 13 : ಕನ್ನಡಿಗ ಹಾಗೂ ತಮಿಳು ಚಿತ್ರರಂಗದ ಆರಾಧ್ಯ ದೈವ ಸ್ಟೈಲ್ ಕಿಂಗ್ ರಜನಿಕಾಂತ್ ಅವರನ್ನು ಇಂದು ಮುಂದಿನ ಪ್ರಧಾನ ಮಂತ್ರಿ ಹುದ್ದೆಯ ಅಭ್ಯರ್ಥಿ ಎಂದೇ ಬಿಂಬಿತರಾಗಿರುವ ಭಾರತೀಯ ಜನತಾ ಪಕ್ಷದ ಸರ್ವೋಚ್ಛ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಭೇಟಿ ರಾಷ್ಟ್ರ ರಾಜಕಾರಣ ಕುರಿತು ಚರ್ಚೆ ನಡೆಸಿದರು. ಇದು ತಮಿಳುನಾಡಿನಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಕಳೆದ ಅನೇಕ ದಿನಗಳಿಂದ ರಜನಿಕಾಂತ್ ರಾಜಕೀಯ ಸೇರುತ್ತಾರೆ ಎನ್ನುವ ಸುದ್ದಿಗೆ ಈ ಭೇಟಿ ಮತ್ತಷ್ಟು ಪುಷ್ಟಿ ನೀಡಿದೆ.

ಇಂದು ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಅವರು ರಜಿನಿಕಾಂತ್ ಅವರ ನಿವಾಸಕ್ಕೆ ಭೇಟಿ ಮಾತುಕತೆ ನಡೆಸಿರುವುದು ವಿಶೇಷವಾಗಿದೆ. ಈ ಭೇಟಿಯಲ್ಲಿ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಎಲ್.ಗಣೇಶನ್ ಹಾಗೂ ಅಡ್ವಾಣಿ ಆಪ್ತರೆನ್ನಲಾದ ಕೇಂದ್ರ ಮಾಜಿ ಸಚಿವ ಚೋ. ರಾಮಸ್ವಾಮಿ ಅಡ್ವಾಣಿ ಜತೆಗಿದ್ದರು. ಇತ್ತೀಚೆಗೆ ತಮಿಳಿನಾಡಿನಲ್ಲಿ ರಜಿನಿ ಅಭಿಮಾನಿಗಳು ರಾಜಕೀಯಕ್ಕೆ ಸೇರುವಂತೆ ಭಾರಿ ಒತ್ತಡ ತಂದಿದ್ದರು. ಅಭಿಮಾನಿಗಳ ಆಶಯಕ್ಕೆ ಮುಂದಿನ ದಿನಗಳಲ್ಲಿ ಉತ್ತರ ದೊರೆಯಲಿದೆ ಎಂದು ರಜಿನಿ ಹೇಳಿ ಜಾಣತನದಿಂದ ಜಾರಿಕೊಂಡಿದ್ದರು.

ಸುಮಾರು ಎರಡು ಗಂಟೆ ಅಧಿಕ ಸಮಯ ರಜಿನಿಕಾಂತ್ ಮತ್ತು ಅಡ್ವಾಣಿ ಚರ್ಚೆ ನಡೆಸಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ರಜನಿಕಾಂತ್ ಅವರಿಗೆ ಆಡ್ವಾಣಿ ಮನವಿ ಮಾಡಿಕೊಂಡರು ಎನ್ನಲಾಗಿದೆ. ಆದರೆ ರಜಿನಿಕಾಂತ್ ಅಡ್ವಾಣಿ ಮನವಿಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಯಾವುದೇ ಒಂದು ಪಕ್ಷದ ಜತೆಗೆ ಗುರುತಿಸಿಕೊಳ್ಳವುದು ನನಗೆ ಇಷ್ಟವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು ಎನ್ನಲಾಗಿದೆ. ರಜಿನಿಕಾಂತ್ ಸಮೀಪವರ್ತಿಗಳು ಈ ಕುರಿತು ತುಟಿಪಿಟ್ಟೆನ್ನುತ್ತಿಲ್ಲ.

ತಮ್ಮ ಜೀವನ ಚರಿತ್ರೆ ಕುರಿತಾದ 'ಮೈ ಕಂಟ್ರಿ ಮೈ ಲೈಫ್' ಪುಸ್ತಕದ ತಮಿಳು ಆವೃತ್ತಿ ಬಿಡುಗಡೆಗೆ ಅಡ್ವಾಣಿ ಇಲ್ಲಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ರಜಿನಿಕಾಂತ್ ನಿವಾಸಕ್ಕೆ ಭೇಟಿ ಮಾಡಿ ಮಾತುಕತೆ ನಡೆಸಿದರು. ರಜಿನಿಕಾಂತ್ ಆಪ್ತ ಸ್ನೇಹಿತ ಎನ್ನಲಾದ ಬಾಲಿವುಡ್ ನಟ ಹಾಗೂ ಕೇಂದ್ರದ ಮಾಜಿ ಸಚಿವ ಶತೃಘ್ನ ಸಿನ್ಹಾ ಇತ್ತೀಚೆಗೆ ರಜಿನಿಕಾಂತ್ ಅವರನ್ನು ಭೇಟಿ ಮಾತುಕತೆ ನಡೆಸಿದ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಶೀಘ್ರದಲ್ಲಿ ರಜಿನಿ ಅಭಿಮಾನಿಗಳು ಸೇರಿದಂತೆ ತಮಿಳುನಾಡಿನ ಜನರಿಗೆ ಸಿಹಿ ಸುದ್ದಿಯೊಂದು ಹೊರಬೀಳಲಿದೆ ಎಂದು ಹೇಳಿಕೆ ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ತೆಲುಗು ಸೂಪರ್ ಸ್ಟಾರ್ ಹಾಗೂ ಪ್ರಜಾರಾಜ್ಯಂ ಪಕ್ಷದ ಮುಖಂಡ ಚಿರಂಜೀವಿ ಕೂಡಾ ರಜಿನಿಕಾಂತ್ ರಾಜಕೀಯ ಸೇರ್ಪಡೆಯಾಗಬೇಕು ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X