ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಣಿ ಬಾಂಬ್ ಸ್ಫೋಟದಲ್ಲಿ ಭಜರಂಗಳ ಕೈವಾಡ ?

By Staff
|
Google Oneindia Kannada News

ನವದೆಹಲಿ. ನ. 13 : ಕೋಮುಗಲಭೆಗಳಿಗೆ ಕಾರಣವಾಗುತ್ತಿರುವ ಭಜರಂಗದಳ ದೇಶದಲ್ಲಿ ಇತ್ತೀಚೆಗೆ ನಡೆದ ಬಾಂಬ್ ಸ್ಫೋಟಗಳಲ್ಲಿ ಕೈವಾಡವಿರಬಹುದು ಎಂದು ಕೇಂದ್ರ ಸರ್ಕಾರ ಶಂಕೆ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಿಗೂ ಸ್ಪಷ್ಟ ನಿರ್ದೇಶನ ನೀಡಿರುವ ಕೇಂದ್ರ ಸರ್ಕಾರ ಭಜರಂಗದಳ ಸಂಘಟನೆ ಮೇಲೆ ದಾಖಲಾಗಿರುವ ಪ್ರಕರಣಗಳ ಸಮಗ್ರ ವರದಿಯನ್ನು ಕೇಂದ್ರ ಗೃಹ ಇಲಾಖೆಗೆ ನೀಡುವಂತೆ ಪತ್ರ ಬರೆದಿದೆ.

ಹಿಂದು ಸಂಘಟನೆಗಳು ದೇಶ ದ್ರೋಹಿ ಕೃತ್ಯದಲ್ಲಿ ತೊಡಗಿರುವುದರಿಂದ ರಾಷ್ಟ್ರದ ಸಾರ್ವಭೌಮತೆಗೆ ತೀವ್ರ ದಕ್ಕೆ ಉಂಟಾಗಿದೆ. ಆದ್ದರಿಂದ ಭಜರಂಗದಳ ಈ ಕೃತ್ಯದಲ್ಲಿ ಭಾಗಿಯಾಗಿದೆ ಎನ್ನುವ ಸಾಕ್ಷ್ಯಧಾರಗಳು ಲಭ್ಯವಾಗತೊಡಗಿವೆ. ಆ ಕಾರಣಕ್ಕಾಗಿ ಭಜರಂಗದಳದ ಕಾರ್ಯಕರ್ತರ ಮೇಲೆ ತೀವ್ರ ನಿಗಾ ವಹಿಸಿ, ಅವರ ಚಟುವಟಿಕೆಗಳ ಬಗ್ಗೆ ಕಣ್ಗಾವಲು ನಿಯೋಜಿಸಬೇಕು. ಹಾಗೆಯೇ ಈ ವರೆಗೊ ಭಜರಂಗದಳದ ಮೇಲೆ ದಾಖಲಾಗಿರುವ ಪ್ರಕರಣ, ನಡೆಸಿದ ಕೋಮುವಾದಿ ಗಲಭೆಗಳು ಜತೆಗೆ ಆರೋಪಿಗಳ ಸಂಪೂರ್ಣ ಮಾಹಿತಿಯನ್ನು ಕೂಡಲೇ ನೀಡುವಂತೆ ಕೇಂದ್ರ ಗೃಹ ಇಲಾಖೆ ಆಯಾ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದೆ.

ಹಿಂದು ಸಂಘಟನೆಗಳು ಬಾಂಬ್ ಸ್ಫೋಟ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಭಯೋತ್ಪಾದನೆ ನಿಗ್ರಹ ಕಾಯ್ದೆಯ ಅಂಗೀಕರಾರಕ್ಕೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಉಗ್ರರ ಉಪಟಳ ಹತ್ತಿಕ್ಕಲು ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿ ಭಯೋತ್ಪಾದನೆ ನಿಗ್ರಹ ಕಾನೂನು ಅಂಗೀಕರಿಸುವಂತೆ ರಾಷ್ಟ್ರಪತಿಯವರಿಗೆ ಮನವಿ ಮಾಡಿದ್ದರು.

ಮಹಾರಾಷ್ಟ್ರ ಎಟಿಎಸ್ ನಡೆಸಿದ ಕಾರ್ಯಾಚರಣೆಯಿಂದ ಮಾಲೇಗಾಂವ್ ಸ್ಫೋಟದಲ್ಲಿ ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಿಲಾಗಿದೆ, ಅಸೀಮಾನಂದ ಸ್ವಾಮೀಜಿ ಹಾಗೂ ದಯಾನಂದ ಪಾಂಡೆ ಸಿಕ್ಕಿಬಿದ್ದರುವ ಇನ್ನಿಬ್ಬರು ಸ್ವಾಮೀಜಿಗಳಾಗಿದ್ದಾರೆ. ಕರ್ನಾಟಕದಲ್ಲಿ ನಡೆದ ಚರ್ಚ್ ದಾಳಿಗೆ ಭಜರಂಗ ನೇಕ ಕಾರಣವಾಗಿರುವುದರಿಂದ ಈ ಸಂಘಟನೆಯನ್ನು ನಿಷೇಧಿಸಬೇಕು ಎಂದು ಭಾರಿ ಒತ್ತಡ ಬಂದಿತ್ತು.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X