ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಅಭಿವೃದ್ಧಿಗೆ 6 ಸಾವಿರ ಕೋಟಿ

By Staff
|
Google Oneindia Kannada News

ಬೆಂಗಳೂರು, ನ. 9 : ಮುಂದಿನ 2 ವರ್ಷದಲ್ಲಿ ಬೃಹತ್ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 6 ಸಾವಿರ ಕೋಟಿ ರುಪಾಯಿಗಳ ಖರ್ಚು ಮಾಡಲಿದೆ. ಬಿಬಿಎಂಪಿ ಹಳೆಯ ಹಾಗೂ ಹೊಸ ಬಡಾವಣೆಗಳಿಗೆ ಕುಡಿಯುವ ನೀರು, ರಸ್ತೆ, ಒಳಚರಂಡಿ ಸೌಕರ್ಯ ಒದಗಿಸುವುದು ಇದರಲ್ಲಿ ಪ್ರಮುಖವಾಗಿದೆ.

ನೀರು ಪೂರೈಕೆಗೆ 3 ಸಾವಿರ ಕೋಟಿ, ಕೊಳೆಚೆ ನೀರು ಶುದ್ಧಿಗೆ 2 ಕೋಟಿ, 1048 ಕೆರೆ ಅಭಿವೃದ್ಧಿ, ಹೊಸ ಪ್ರದೇಶಗಳ ಅಭಿವೃದ್ಧಿಗೆ 1 ಸಾವಿರ ಕೋಟಿ ರುಪಾಯಿಗಳನ್ನು ಖರ್ಚು ಮಾಡಲಾಗುವುದೆಂದು ಸರ್ಕಾರ ತಿಳಿಸಿದೆ. ಕೊಳೆಚೆ ನೀರು ಶುದ್ಧೀಕರಣಕ್ಕೆ 2 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದು, ಅದರಲ್ಲಿ ಕೊಳೆಚೆ ನೀರು ಘಟಕ ಸ್ಥಾಪಿಸಲಾಗುವುದು. ಕಾರ್ಖಾನೆಗಳು ಮತ್ತು ಗೃಹೇತರ ಬಳಕೆಗೆ ಈ ನೀರು ಬಳಸಲಾಗುವುದು. ಈ ಘಟಕ ಸ್ಥಾಪನೆಗೆ ಟೆಂಡರ್ ಕರೆಯಲಾಗಿದೆ.

ಬಿಬಿಎಂಪಿ ವ್ಯಾಪ್ತಿಗೆ ಸೇರಿದ 7 ನಗರಸಭೆ, 1 ಪುರಸಭೆ ಮತ್ತು 110 ಗ್ರಾಮಗಳಿಗೆ ಕಾವೇರಿ ನೀರು ಪೂರೈಸಲು 1000 ಸಾವಿರ ಕೋಟಿ ವೆಚ್ಚದ ಕಾಮಗಾರಿಯನ್ನು ಬೆಂಗಳೂರು ಜಲಮಂಡಳಿ ಕೈಗೆತ್ತಿಕೊಂಡಿದೆ. ಬೆಂಗಳೂರಿನಾದ್ಯಂತ ಒಂದೂವರೆ ವರ್ಷದಲ್ಲಿ ಹಳೆಯ ಕುಡಿಯುವ ನೀರಿನ ಪೈಪುಗಳನ್ನು ಅಳವಡಿಸಿಲಾಗುವುದು ಎಂದು ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ತಿಳಿಸಿದರು.

ಕಾಕತಿಯ ನಗರಕ್ಕೆ ಕುಡಿಯುವ ನೀರು ಒದಗಿಸಲು 2 ಕೋಟಿ ವೆಚ್ಚದಲ್ಲಿ 2ದ ಕಿಮೀ ಉದ್ದ ಕುಡಿಯುವ ನೀರು ಪೈಪ್ ಅಳವಡಿಕೆ ಕಾಮಗಾರಿ, ಜೊತೆಗೆ 8 ಕಿಮೀ ಉದ್ದದ ಒಳಚರಂಡಿ ವ್ಯವಸ್ಥೆ ಕಲ್ಪಸಲು 80 ಲಕ್ಷ ರುಪಾಯಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗುವುದು. ಪ್ರಸಕ್ತ ವರ್ಷ ಯಡಿಯೂರು ವಾರ್ಡ್ ಸೇರಿದಂತೆ ಆರು ಬೆಂಗಳೂರಿನಲ್ಲಿ ಮಾದರಿ ವಾರ್ಡಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕೆ 10 ಕೋಟಿ ವೆಚ್ಚ ಮಾಡಲಾಗುವುದು ಎಂದು ಸಚಿವ ಕಟ್ಟಾ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X