• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾಗ್ಯಲಕ್ಷಿ ಯೋಜನೆ ಫಲಾನುಭವಿಗೆ ಒಂದು ಲಕ್ಷ

By Staff
|

ಹುಣಸೂರು, ನ. 3: ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಭಾಗ್ಯಲಕ್ಷೀ ಯೋಜನೆಯಲ್ಲಿ ಇದೀಗ ಫಲಾನುಭವಿ ಹೆಣ್ಣುಮಗುವಿನ ಹೆಸರಲ್ಲಿ ಜೀವವಿಮಾ ನಿಗಮದಲ್ಲಿ ರು.20000ಗಳ ಠೇವಣಿ ಇಡಲಾಗುತ್ತಿದ್ದು , ಹೆಣ್ಣುಮಗು 18 ವರ್ಷ ವಯಸ್ಸಿಗೆ ಬಂದಾಗ ಆ ಮಗುವಿಗೆ ಒಂದು ಲಕ್ಷ ರುಪಾಯಿ ದೊರೆಯಲಿದೆ ಎಂದು ಹುಣಸೂರು ತಾಲ್ಲೂಕು ಬಾಲವಿಕಾಸ ಯೋಜನಾಧಿಕಾರಿ ಕೆ ಮುನಿರಾಜು ಅವರು ತಿಳಿಸಿದ್ದಾರೆ.

ಅವರು ಇತ್ತೀಚೆಗೆ ಮೈಸೂರು ವಾರ್ತಾ ಇಲಾಖೆ, ಮತ್ತು ಹುಣಸೂರು ಚೈತನ್ಯ ಸೇವಾ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಹುಣಸೂರಿನಲ್ಲಿ ಏರ್ಪಡಿಸಿದ್ದ ಭಾಗ್ಯಲಕ್ಷಿ ಯೋಜನೆ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಹಿಂದೆ 14.4.2006 ರಿಂದೀಚೆಗೆ ಬಿಪಿಎಲ್ ಕುಟುಂಬದಲ್ಲಿ ಜನಿಸಿದ ಹೆಣ್ಣುಮಗುವಿಗೆ (ಮೊದಲ ಎರಡು) ಸರ್ಕಾರ ಜೀವವಿಮಾ ನಿಗಮದಲ್ಲಿ ರು.10000 ಠೇವಣಿ ಇಡುವ ಮೂಲಕ ಆ ಮಗು 18 ವರ್ಷ ತುಂಬಿದಾಗ ಆಕೆಗೆ ರು.42000 ದೊರೆಯುತ್ತಿತ್ತು. ಆದರೆ 1.8.2008ರಿಂದೀಚೆಗೆ ಜನಿಸಿದ ಮಗುವಿನ ಹೆಸರಲ್ಲಿ ಸರ್ಕಾರ ರು.20000 ಠೇವಣಿ ಇಡಲು ಮುಂದಾಗಿರುವುದರಿಂದ ಮಗು ಪ್ರಾಪ್ತ ವಯಸ್ಸು 18ಕ್ಕೆ ಕಾಲಿಟ್ಟಾಗ ಆಕೆಗೆ ರೂ. ಒಂದು ಲಕ್ಷ ದೊರಕಲಿದೆ.

ಮಗುವನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರಿಸಬೇಕು. 1-3ನೇ ತರಗತಿಯಲ್ಲಿ ಮಗುವಿಗೆ ವಾರ್ಷಿಕ ರು.300, 4-5ನೇ ತರಗತಿಗೆ ಬಂದಾಗ ವಾರ್ಷಿಕ ರು.500, 6 ರಿಂದ 7ನೇ ತರಗತಿ ರು.700, 8ನೇ ತರಗತಿಯಲ್ಲಿ ರು.800,9 ರಿಂದ 10ನೇ ತರಗತಿಯಲ್ಲಿ ರು.1000 ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ.ಯಲ್ಲಿ ರು.1200 ಶಿಷ್ಯ ವೇತನ ದೊರೆಯಲಿದೆ ಎಂದು ಬಾಲವಿಕಾಸ ಯೋಜನಾಧಿಕಾರಿಗಳು ತಿಳಿಸಿದ್ದಾರೆ.

ಭಾಗ್ಯಲಕ್ಷಿ ಯೋಜನೆ ಬಾಂಡ್ ತಲುಪದಿದ್ದಲ್ಲಿ ಮಗು ಶಾಲೆಗೆ ಸೇರಿದ ಕೂಡಲೇ ಶಿಷ್ಯ ವೇತನ ಬರಲಾರಂಭಿಸುತ್ತದೆ.ಸಮಾರಂಭದಲ್ಲಿ ಉಪಸ್ಥಿತರಿದ್ದ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಚೌಡೇಗೌಡರು ತಮ್ಮ ಇಲಾಖೆ ವತಿಯಿಂದ ದೊರಕುವ ಸೌಲಭ್ಯಗಳನ್ನು ಸದುಪಯೋಗಪಡಿಸುವ ಮೂಲಕ ಮಕ್ಕಳನ್ನು ವಿದ್ಯಾವಂತರನ್ನಾಗಿಸುವಂತೆ ಕಿವಿಮಾತು ಹೇಳಿದರು.

ವಿಚಾರ ಸಂಕಿರಣವನ್ನು ಹುಣಸೂರು ಪುರಸಭೆ ಅಧ್ಯಕ್ಷೆ ಶ್ರೀಮತಿ ಸರೋಜಾಬಾಯಿ ಪಾಂಡುರಂಗರಾವ್ ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪುರಸಭೆ ಸದಸ್ಯೆ ಶ್ರೀಮತಿ ಪ್ರೇಮಕುಮಾರಿ ನಂಜಪ್ಪ ಅವರು ವಹಿಸಿದ್ದರು. ಪುರಸಭೆ ಸದಸ್ಯೆ ಶ್ರೀಮತಿ ಸೌಮ್ಯ ಹಾಜರಿದ್ದರು. ವಿಚಾರ ಸಂಕಿರಣ ಕುರಿತು ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಟಿ ಸಿ ಮಂಜುನಾಥಬಾಬು ಪ್ರಾಸ್ತಾವಿಕವಾಗಿ ಮಾತನಾಡಿದರು. ಇಲಾಖೆಯ ಗ್ರಂಥಪಾಲಕ ಬಿ ಆರ್ ಚಂದ್ರಶೇಖರ ಆಜಾದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಚೈತನ್ಯ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಟಿ ಎ ಹನುಮಯ್ಯ ವಂದಿಸಿದರು.

(ದಟ್ಸ್ ಕನ್ನಡವಾರ್ತೆ)

ಹೆಣ್ಣು ಭ್ರೂಣ ಹತ್ಯೆ ತಡೆಗೆ ಚಳವಳಿ: ಶೋಭಾ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more