• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಂಪಿ ಉತ್ಸವ, ಹೆಬ್ಬಂಡೆಗಳಿಗೆ ಜೀವ ಸ್ಪರ್ಶ

By Staff
|

advani innaugurates hampi utsavಹಂಪಿ, ನ.4: ಹಂಪಿ ಉತ್ಸವವನ್ನು ಹಿಂದೆಂದಿಗಿಂತಲೂ ಅದ್ದೂರಿಯಾಗಿ ಆಚರಿಸಲು ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ ಎಂದು ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅವರು ತಿಳಿಸಿದರು.

ಹಂಪಿ ಉತ್ಸವದ ಕೊನೆ ಕ್ಷಣದ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವರ್ಷ ಸರ್ಕಾರ ಹಂಪಿ ಉತ್ಸವಕ್ಕಾಗಿ ಮೂರು ಕೋಟಿ ರೂಪಾಯಿ ಒದಗಿಸಿದ್ದು, ಇನ್ನೂ ಒಂದು ಕೋಟಿ ರೂಪಾಯಿ ಒದಗಿಸುವ ಭರವಸೆ ನೀಡಿದೆ ಎಂದರು. ಇದಲ್ಲದೆ ಸ್ಥಳೀಯ ಉದ್ಯಮಿಗಳೂ ಸ್ವಯಂ ಪ್ರೇರಣೆಯಿಂದ ಆರ್ಥಿಕ ನೆರವು ನೀಡಿದ್ದು, ಅದನ್ನು ಸದ್ವಿನಿಯೋಗ ಮಾಡಿಕೊಂಡು ವಿಜಯನಗರದ ವೈಭವದ ಮರುಸೃಷ್ಟಿ ಮಾಡಲು ಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಈ ವರ್ಷದ ಹಂಪಿ ಉತ್ಸವದ ವಿಶೇಷತೆಗಳನ್ನು ವಿವರಿಸಿದ ಅವರು ಉತ್ಸವದಲ್ಲಿ ತರಬೇತಿ ಹೊಂದಿದ 9 ಆನೆಗಳು ಹಾಗೂ 100ಕ್ಕೂ ಹೆಚ್ಚು ಕುದುರೆಗಳನ್ನು ಬಳಸಲಾಗುತ್ತಿದ್ದು ಎಂದರು. ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ಎಲ್.ಕೆ. ಆದ್ವಾನಿ ಅವರನ್ನು ವಿರೂಪಾಕ್ಷ ದೇವಾಲಯದಿಂದ ಕೃಷ್ಣ ದೇವರಾಯ ವೇದಿಕೆಯವರೆಗೆ ಅಲಂಕೃತ ರಥದಲ್ಲಿ ಕರೆತರಲಾಯಿತು. ಈ ವೈಶಿಷ್ಟ್ಯಪೂರ್ಣ ಶೋಭಾಯಾತ್ರೆಯಲ್ಲಿ ವಿಜಯನಗರ ಸಾಮ್ರಾಜ್ಯದ ವೈಭವ ಬಿಂಬಿಸುವ 300ಕ್ಕೂ ಹೆಚ್ಚು ಸೈನಿಕರು, ಅಶ್ವ, ಗಜದಳಗಳು ಪಾಲ್ಗೊಂಡವು.

ಬಂಗಾರವನ್ನು ಬಳ್ಳ (ಸೇರು)ದಿಂದ ಅಳೆದ ವಿಜಯನಗರದ ಸಿರಿವಂತಿಕೆಯನ್ನು ನೆನಪಿಸುವ ಸಂಕೇತವಾಗಿ ಬಂಗಾರದ ನಾಣ್ಯ ನೀಡಿ ಮುತ್ತುರತ್ನಗಳನ್ನು ಕೊಳ್ಳುವ ಸನ್ನಿವೇಶವನ್ನು ಸೃಷ್ಟಿಸಲಾಗುವುದು ಎಂದು ಸಚಿವರು ತಿಳಿಸಿದರು.ಹಂಪಿಯ 38 ಚದರ ಕಿ.ಮೀ. ವ್ಯಾಪ್ತಿಯಲ್ಲಿರುವ ದೇವಾಲಯಗಳು, ಹೆಬ್ಬಂಡೆಗಳು ಹಾಗೂ ಉತ್ಖನನದ ಸ್ಥಳಗಳಿಗೆ ವಿಶೇಷ ದೀಪಾಲಂಕಾರ ಮಾಡಿದ್ದು, ಹಂಪಿಯ ವೈಭವದ ದಿನಗಳನ್ನು ನೆನಪಿಗೆ ತರಲಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಕಾರ್ಯದರ್ಶಿ ಜಯರಾಮರಾಜೇ ಅರಸ್ ಅವರು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿಯೂ ಈ ಬಾರಿಯ ಹಂಪಿ ಉತ್ಸವ ವಿಶಿಷ್ಟವಾಗಿದ್ದು, ದೇಶದ ವಿವಿಧ ಸಾಂಸ್ಕೃತಿಕ ಕೇಂದ್ರಗಳ 1200 ಕಲಾವಿದರು ತಮ್ಮ ಕಲಾ ಪ್ರದರ್ಶನ ನೀಡುವರು. ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿಯೇ ಈ ಬಾರಿ 1.55 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಲಾವಿದರಿಗೆ ಹಾಗೂ ಪ್ರವಾಸಿಗರಿಗೆ ಸುವ್ಯವಸ್ಥಿತ ವಸತಿ ಸೌಲಭ್ಯ ಒದಗಿಸಲು ಪ್ರವಾಸೋದ್ಯಮ ಸಚಿವರು 1500 ಟೆಂಟ್‌ಗಳನ್ನು ನಿರ್ಮಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು.

ಸುಸಜ್ಜಿತ ಮಾಧ್ಯಮ ಕೇಂದ್ರವನ್ನು ಮಾಧ್ಯಮ ಪ್ರತಿನಿಧಿಗಳಿಗಾಗಿ ಕೃಷ್ಣದೇವರಾಯ ವೇದಿಕೆಯ ಸಮೀಪದಲ್ಲಿ ಸ್ಥಾಪಿಸಲಾಗಿದ್ದು, ಇಲ್ಲಿ ಕಂಪ್ಯೂಟರ್, ಇಂಟರ್‌ನೆಟ್ ಮತ್ತಿತರ ಅತ್ಯಾಧುನಿಕ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ವಾರ್ತಾ ಇಲಾಖೆ ನಿರ್ದೇಶಕ ಶ್ರೀ ಎನ್.ಆರ್. ವಿಶುಕುಮಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಶ್ರೀ ಮನು ಬಳಿಗಾರ್ ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ವಾರ್ತೆ)

ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ ಹಂಪಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more