• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈಶ್ವರಪ್ಪ ಜತೆ ಜೆಡಿಎಸ್ ನ ನಾಯಕರ ಚರ್ಚೆ

By Staff
|

ರಾಯಚೂರು, ನ. 4 : ಜೆಡಿಎಸ್ ಪಕ್ಷದೊಳಗೆ ಕೋಲಾಹಲ ಸೃಷ್ಟಿಸುವ ಬೆಳವಣಿಗೆಯೊಂದು ನಡೆದಿದೆ. ನಗರದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವರಾದ ಚೆಲುವರಾಯಸ್ವಾಮಿ, ಇಕ್ಬಾಲ್ ಅನ್ಸಾರಿ ಮತ್ತು ಆಲ್ಕೋಡ್ ಹನುಮಂತಪ್ಪ ಅವರು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಗುಪ್ತ ಸಮಾಲೋಚನೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ನ.10 ರಂದು ಜೆಡಿಎಸ್ ನಿಯೋಜಿತ ಅಧ್ಯಕ್ಷ ಕುಮಾರಸ್ವಾಮಿ ಅವರ ಪದಗ್ರಹಣ ಕಾರ್ಯಕ್ರಮ ನಡೆಯಬೇಕಿದೆ. ಇದರ ಬೆನ್ನಲ್ಲೇ ಇಂತಹ ಘಟನೆ ನಡೆದಿರುವುದು ಜೆಡಿಎಸ್ ಮುಖಂಡರನ್ನು ನಿದ್ದೆಗೆಡಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿರುವುದು ಒಂದೆಡೆಯಾದರೆ, ಪಕ್ಷದಲ್ಲಿ ಅನೇಕ ಹಿರಿಯ ಮುಖಂಡರಿದ್ದರೂ ಅಧ್ಯಕ್ಷಗಿರಿಯನ್ನು ಮತ್ತೆ ತಮ್ಮ ಪುತ್ರನಿಗೆ ನೀಡಿರುವುದು ಜೆಡಿಎಸ್ ಎರಡನೇ ಪಂಕ್ತಿಯ ನಾಯಕರಲ್ಲಿ ಅಸಮಾಧಾನ ಮನೆ ಮಾಡಿದೆ.

ಮೆರಾಜುದ್ದೀನ್ ಪಟೇಲ್ ನಿಧನದ ನಂತರ ಖಾಲಿಯಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿ ಇತ್ತು. ಪಕ್ಷದ ಮಾಜಿ ಶಾಸಕರಾದ ಬಸವರಾಜ ಹೊರಟ್ಟಿ, ಇಕ್ಬಾಲ್ ಅನ್ಸಾರಿ, ಬಂಡೆಪ್ಪ ಕಾಶೆಂಪೂರ್, ಚೆಲುವರಾಯಸ್ವಾಮಿ, ಆಲ್ಕೋಡ್ ಹನುಮಂತಪ್ಪ ಸೇರಿ ಅನೇಕ ಹಿರಿಯ ನಾಯಕರು ಅಧ್ಯಕ್ಷ ಸ್ಥಾನಕ್ಕಾಗಿ ಬಕಪಕ್ಷಿಯಂತೆ ಕಾದು ಕುಳಿತಿದ್ದರು.

ಆದರೆ ಈ ನಾಯಕರ ಕನಸನ್ನು ಭಗ್ನಗೊಳಿಸಿದ ದೇವೇಗೌಡರು, ಪಕ್ಷದ ಕೇಂದ್ರ ಅಧಿಕಾರದ ಕೈ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಅಂದು ಸೇರಿದ್ದ ಸಭೆಯಲ್ಲಿ ಎಲ್ಲರೂ ದೇವೇಗೌಡರ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿದ್ದರು. ವಿರೋಧಿಸಿದರೆ ಪಕ್ಷದಲ್ಲಿ ಸ್ಥಾನವಿಲ್ಲ ಎನ್ನುವುದನ್ನು ಅರಿತಿದ್ದಎರಡನೇ ಪಂಕ್ತಿಯ ನಾಯಕರು ವರಿಷ್ಠರ ನಿರ್ಧಾರಕ್ಕೆ ಜೈಕಾರ ಹಾಕಿದ್ದರು. ಗೌಡರ ವಿರುದ್ಧದ ಅಸಮಾಧಾನ ಇದೀಗ ಸ್ಫೋಟಗೊಂಡಿದ್ದು, ಇಂದು ಚೆಲುವರಾಯಸ್ವಾಮಿ, ಇಕ್ಬಾಲ್ ಅನ್ಸಾರಿ ಮತ್ತಿತರ ನಾಯಕರು ಈಶ್ವರಪ್ಪ ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಕೆರಳಿಸಿದೆ.

(ದಟ್ಸ್ ಕನ್ನಡ ವಾರ್ತೆ)

ದೇಶಪಾಂಡೆ ದಿಢೀರಾಗಿ ದೆಹಲಿಗೆ ಭೇಟಿ

ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ಆಯ್ಕೆ

ವಿಧಾನ ಪರಿಷತ್ ಚುನಾವಣೆ ಫಲಿತಾಂಶಕ್ಕೆ ಹರ್ಷ

ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more