• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಬಾಮಾಗೆ ಪ್ರಥಮ ಗೆಲುವಿನ ಚುಂಬನ

By Staff
|

People queue up in Reston Virginia to vote for American presidentನ್ಯೂಹ್ಯಾಂಪಶೈರ್, ನ. 4 : ಅಮೆರಿಕದ ಮುಂದಿನ ಅಧ್ಯಕ್ಷ ಎಂದೇ ಬಿಂಬಿತರಾಗಿರುವ ಡೆಮಾಕ್ರಟಿಕ್ ಪಕ್ಷದ ಬರಾಕ್ ಒಬಾಮಾ ಅವರು ಅಂತಿಮ ಸುತ್ತಿನ ಮತದಾನದ ಮೊದಲ ಹಂತದಲ್ಲಿ ಜಯ ದಾಖಲಿಸಿದ್ದಾರೆ. ನ್ಯೂಹ್ಯಾಂಪ್ ಶೈರ್ ನ ಡಿಕ್ಸಿವಿಲ್ಲಿ ನಾಚ್ ಪಟ್ಟಣದಲ್ಲಿ ನಡೆದ ಮತದಾನದಲ್ಲಿ ಬರಾಕ್ ಒಬಾಮಾ ಅತ್ಯಧಿಕ ಅಂದರೆ 21 ಮತಗಳಲ್ಲಿ 15 ಮತಗಳನ್ನು ಪಡೆಯುವ ಮೂಲಕ ಭರ್ಜರಿಯಾಗಿ ತಮ್ಮ ಗೆಲುವಿನ ಅಭಿಯಾನವನ್ನು ಆರಂಭಿಸಿದರು.

ತಮ್ಮ ಪ್ರತಿಸ್ಪರ್ಧಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಜಾನ್ ಮೆಕೇನ್ ಕೇವಲ 5 ಮತಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಒಂದು ವಿಶೇಷತೆಯೆಂದರೆ, 1968 ರಿಂದ ಡಿಕ್ಸಿವಿಲ್ಲಿ ನಾಚ್ ಪಟ್ಟಣ ರಿಪಬ್ಲಿಕನ್ ಪಕ್ಷದ ತವರೂರೆಂದೇ ಖ್ಯಾತಿಯಾಗಿತ್ತು. ಆದರೆ ಈ ಸಲದ ಚುನಾವಣೆಯಲ್ಲಿ ಬರಾಕ್ ಒಬಾಮಾ ಅವರ ಚಾಣಕ್ಷತನದಿಂದ ಡಿಕ್ಸಿವಿಲ್ಲಿ ನಾಚ್ ನಲ್ಲಿರುವ ಅಧಿಕ ಮತಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ಗೆಲುವಿನ ನೆಗೆ ಬೀರಿದರು.

ಕಳೆದ ಎರಡು ಅವಧಿಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದ ಪ್ರಸ್ತುತ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ನ್ಯೂಹ್ಯಾಂಪಶೈರ್ ನಲ್ಲಿ ಅಧಿಕ ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ನ್ಯೂಹ್ಯಾಂಪಶೈರ್ ನಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು ಅಧ್ಯಕ್ಷರಾಗಿರುವ ಅನೇಕ ಉದಾಹರಣೆಗಳಿವೆ.

(ದಟ್ಸ್ ಕನ್ನಡ ವಾರ್ತೆ)

ಅಮೆರಿಕದ ಪೀಠಾಧಿಪತಿ ಯಾರಾಗುತ್ತಾರೆ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more