ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂ ಸ್ಫೋಟ ಶಂಕಿತನ ರೇಖಾಚಿತ್ರ ಬಿಡುಗಡೆ

By Staff
|
Google Oneindia Kannada News

ಗೌಹಾತಿ, ನ. 4 : ಇತ್ತೀಚೆಗೆ ಅಸ್ಸಾಂನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಗೌಹಾತಿ ಪೊಲೀಸ್ ಶಂಕಿತನ ರೇಖಾಚಿತ್ರ ಬಿಡುಗಡೆ ಮಾಡಿದ್ದಾರೆ. ವಿಡಿಯೋ ಚಿತ್ರಗಳ ವೀಕ್ಷಣೆ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಆಧಾರದ ಮೇಲೆ ಆರೋಪಿಯ ರೇಖಾಚಿತ್ರ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಫೋಟದಲ್ಲಿ ಕೈವಾಡವಿರುವ ವ್ಯಕ್ತಿ ಸ್ಫೋಟದ ದಿನದಂದು ಪೈಜಾಮ ಜುಬ್ಬಾ ಧರಿಸಿದ್ದು, ಕಡ್ಡಿ ಮೀಸೆಯ ಹಾಗೂ ಗಿಡ್ಡನೆಯ ಕೂದಲು ಹೊಂದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಸ್ಫೋಟ ಘಟನೆಯ ವಿಡಿಯೋ ಚಿತ್ರವೀಕ್ಷಣೆಯಿಂದ ಕೂಡಾ ನಮಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿದೆ. ಈ ಎಲ್ಲ ಆಧಾರಗಳನ್ನು ಇಟ್ಟುಕೊಂಡು ಶಂಕಿತ ಭಯೋತ್ಪಾದಕನ ರೇಖಾಚಿತ್ರವನ್ನು ಬಿಡುಗಡೆ ಮಾಡಲಾಗಿದೆ ಎಂದು ಗೌಹಾತಿಯ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅ. 30 ರಂದು ಗೌಹಾತಿ ನಗರ ಸೇರಿ ಒಟ್ಟು 11 ಸರಣಿ ಸ್ಫೋಟಗಳು ಸಂಭವಿಸಿದ್ದವು. ಘಟನೆಯಲ್ಲಿ 81 ಮಂದಿ ಮೃತಪಟ್ಟಿದ್ದು, 200 ಹೆಚ್ಚು ಜನ ಗಾಯಗೊಂಡಿದ್ದರು. ಬಾಂಗ್ಲಾದೇಶ ಮೂಲದ ಹುಜಿ ಸಂಘಟನೆ, ಉಲ್ಫಾ ಉಗ್ರಗಾಮಿ ಸಂಘಟನೆ, ಇಂಡಿಯನ್ ಮುಜಾಹಿದೀನ್ ಸಂಘಟನೆಗಳು ಕೃತ್ಯ ಎಸಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಹೈದರಾಬಾದ್, ಬೆಂಗಳೂರು, ಅಹಮದಾಬಾದ್, ದೆಹಲಿ, ತ್ರಿಪುರಾ ಸ್ಫೋಟದ ನಂತರ ಅಸ್ಸಾಂನಲ್ಲಿ ಕೂಡಾ ಉಗ್ರರು ಸರಣಿ ಸ್ಫೋಟ ನಡೆಸಿ ಅಟ್ಟಹಾಸ ಮೆರೆದಿದ್ದರು.

(ದಟ್ಸ್ ಕನ್ನಡ ವಾರ್ತೆ)

ಅಗರ್ತಲಾದಲ್ಲಿ ಸರಣಿ ಸ್ಫೋಟ, ನಾಲ್ಕು ಸಾವು
ರಾಷ್ಟ್ರರಾಜಧಾನಿಯನ್ನು ತಲ್ಲಣಿಸಿದ ಸರಣಿ ಸ್ಫೋಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X