ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲಾರದಲ್ಲಿ ಸೇನಾ ನೇಮಕಾತಿ ಪ್ರಕ್ರಿಯೆ

By Staff
|
Google Oneindia Kannada News

ಕೋಲಾರ, ನ.4:ಇಲ್ಲಿನ ಸರ್. ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನವೆಂಬರ್ 5 ರಿಂದ 8 ದಿನಗಳ ಕಾಲ ಭಾರತೀಯ ಸೇನಾ ಪಡೆಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಸೈನಿಕರು(ಸಾಮಾನ್ಯ ಕರ್ತವ್ಯ), ಸೈನಿಕರು(ಸಾಮಾನ್ಯ ಕರ್ತವ್ಯ ನಾನ್ ಮೆಟ್ರಿಕ್) ಗುಮಾಸ್ತರು, ಉಗ್ರಾಣಪಾಲಕರು, ತಾಂತ್ರಿಕ ಸಹಾಯಕರು, ನರ್ಸಿಂಗ್ ಸಹಾಯಕರು,ಟ್ರೇಡ್ಸ್‌ಮನ್ ಮುಂತಾದ ಸೈನಿಕ ಹುದ್ದೆಗಳಿಗೆ ಹಾಗೂನಿವೃತ್ತ ಯೋಧರ ಪುನರ್ ನೇಮಕಾತಿ(ಡಿ.ಎಸ್.ಸಿ.ಗೆ) ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ನಾನ್‌ಮೆಟ್ರಿಕ್ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ. ಹಾಗೂ ಅದಕ್ಕಿಂತ ಕಡಿಮೆವಿದ್ಯಾರ್ಹತೆ ಇರುವವರು ಹಾಗೂ ಇನ್ನಿತರ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ/ಪಿಯುಸಿ ತೇರ್ಗಡೆ ಹೊಂದಿದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ , ಚಿಕ್ಕಬಳ್ಳಾಪುರ, ಚಾಮರಾಜನಗರ, ರಾಮನಗರ, ಮೈಸೂರು, ತುಮಕೂರು, ಮಂಡ್ಯ ಜಿಲ್ಲೆಗೆ ಸೇರಿದ ಅಭ್ಯರ್ಥಿಗಳುನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ನೇಮಕಾತಿ ಕಛೇರಿ, ಕೇಂದ್ರ ನೇಮಕಾತಿ ವಲಯ, 148, ಫೀಲ್ಡ್ ಮಾರ್ಷಲ್ ಕಾರ್ಯಾಪ್ಪ ರಸ್ತೆ, ಬೆಂಗಳೂರು -25 ದೂರವಾಣಿ 080-4123 2202/9500 6569 ಮೂಲಕ ಸಂಪರ್ಕಿಸಬಹುದಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಕೊಡಗಿನ ಸೈನಿಕ ಶಾಲೆ ಸೇರಲು ಅವಕಾಶ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X