ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಪೀಠಾಧಿಪತಿ ಯಾರಾಗುತ್ತಾರೆ?

By Staff
|
Google Oneindia Kannada News

ನ್ಯೂಯಾರ್ಕ್, ನ. 4 : ಜಗತ್ತಿನ ಅತ್ಯಂತ ಪ್ರಭಾವಿ ಹುದ್ದೆಯಾಗಿರುವ ಅಮೆರಿಕದ ಅಧ್ಯಕ್ಷ ಸ್ಥಾನದ ಕೊನೆಯ ಸುತ್ತಿನ ಪ್ರಚಾರ ಕೊನೆಗೊಂಡಿದೆ. ಅಂತಿಮ ಸುತ್ತಿನ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಳೆದ ಒಂದು ವರ್ಷದಿಂದ ಮಡುಗಟ್ಟಿರುವ ಕುತೂಹಲ, ಕಾತರ, ತೀವ್ರ ಸ್ಪರ್ಧೆ, ಪ್ರಚಾರಗಳಿಗೆ ತೆರೆ ಬೀಳಲು ಇನ್ನೊಂದು ದಿನ ಬಾಕಿ ಉಳಿದಿದೆ.

ಗೆಲ್ಲುವ ಕುದುರೆ ಎಂದೇ ಬಿಂಬಿತರಾಗಿರುವ ಡೆಮಾಕ್ರಟಿಕ್ ಅಭ್ಯರ್ಥಿ ಬರಾಕ್ ಒಬಾಮ ಹಾಗೂ ಕೊನೆಯ ಕ್ಷಣದವರೆಗೂ ಗೆಲ್ಲುವ ಆಸೆ ಜೀವಂತವಾಗಿರಿಸಿಕೊಂಡಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಜಾನ್ ಮೇಕೆನ್ ಇಬ್ಬರಿಗೂ ಅಗ್ನಿಪರೀಕ್ಷೆ ಎನ್ನಲಾಗಿದೆ. ಆಫ್ರೀಕಾ ಮೂಲದ ಕಪ್ಪು ಜನಾಂಗಕ್ಕೆ ಸೇರಿದ ಒಬಾಮ ಆಯ್ಕೆಯಾದಲ್ಲಿ ಜಗತ್ತಿನ ಅತಿ ಹಳೆಯ ಪ್ರಜಾಪ್ರಭುತ್ವವಾದಿ ದೇಶ ಅಮೆರಿಕದ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ.

ಕಳೆದ ಅನೇಕ ದಿನಗಳ ಪ್ರಚಾರದಲ್ಲಿ ಒಬಾಮಗೆ ಹೆಚ್ಚು ಬೆಂಬಲ ವ್ಯಕ್ತವಾಗಿತ್ತು. ಆದರೆ, ಇತ್ತೀಚೆಗೆ ರಿಪಬ್ಲಿಕನ್ ಅಭ್ಯರ್ಥಿ ಮೇಕೆನ್ ಗೆ ವ್ಯಾಪಕ ಬೆಂಬಲ ದೊರೆಯತೊಡಗಿದೆ. ಇದರೊಂದಿಗೆ ಸ್ಪರ್ಧೆಯ ಕಾವು ಮತ್ತಷ್ಟು ಹೆಚ್ಚಿದೆ. ವಾಲ್ ಸ್ಟ್ರೀಟ್ ಪತ್ರಿಕೆ ಬಿಡುಗಡೆ ಮಾಡಿದ ಜನಾಭಿಪ್ರಾಯದ ಪ್ರಕಾರ ಒಬಾಮ ಮೇಕೆನ್ ಗಿಂತ 8 ಪಾಯಿಂಟ್ ಮುಂದಿದ್ದಾರೆ. ಕಳೆದ ವಾರ ಒಬಾಮ 10 ಪಾಯಿಂಟ್ ಮುನ್ನಡೆ ಸಾಧಿಸಿದ್ದರು. ಚುನಾವಣೆ ಹತ್ತಿರವಾಗುತ್ತಿರುವ ಈ ವೇಳೆಯಲ್ಲಿ ಇಬ್ಬರ ನಡುವಿನ ಸ್ಪರ್ಧೆಯ ಅಂತರ ಕಡಿಮೆಯಾದಂತೆ ಬಾಸವಾಗತೊಡಗಿದೆ. ಭಾನುವಾರ ನಡೆಸಿದ ಸಮೀಕ್ಷೆಯ ಪ್ರಕಾರ ಶೇ. 51 ಕ್ಕೊ ಹೆಚ್ಚು ಮತದಾರರು ಒಬಾಮ ಬೆಂಬಲಿಸಿದರೆ, ಶೇ. 43 ರಷ್ಟು ಮಂದಿ ಮೇಕೆನ್ ಮೇಲೆ ಒಲವು ವ್ಯಕ್ತಪಡಿಸಿದ್ದಾರೆ.

ಇಡೀ ಜಗತ್ತಿನ ಕುತೂಹಲ ಕೆರಳಿಸಿರುವ ಅಮೆರಿಕದ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಪಂಚದ ಅತಿ ಕ್ಲಿಷ್ಟ ಚುನಾವಣೆಗಳಲ್ಲಿ ಇದೂ ಒಂದು. ಸಂವಿಧಾನದ ಪ್ರಕಾರ ಅಮೆರಿಕದ ಅಧ್ಯಕ್ಷರನ್ನು ಜನರೇ ನೇರವಾಗಿ ಆಯ್ಕೆ ಮಾಡುತ್ತಾರೆ ಎಂದಿದ್ದರೂ, ಇಲ್ಲೂ ಪರೋಕ್ಷವಾಗಿಯೇ ಆಯ್ಕೆ ನಡೆಯುತ್ತದೆ. ಜನರು ಸಾರ್ವತ್ರಿಕ ಮತದಾನದ ಮಾಡಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಆ ಪ್ರತಿನಿಧಿಗಳು ಅಂತಿಮವಾಗಿ ಅಧ್ಯಕ್ಷರು, ಉಪಾಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಒಟ್ಟು 538 ಚುನಾವಣಾ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮತದಾನ ಇಂದು ನಡೆಯಲಿದೆ. ಜನವರಿ 6ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X