ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಮತ್ತಷ್ಟು ನೌಕರರಿಗೆ ಪಿಂಕ್ ಸ್ಲಿಪ್ ರೆಡಿ

By Staff
|
Google Oneindia Kannada News

ನವದೆಹಲಿ, ಅ. 29 : ಅಮೆರಿಕದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರುಪಾಯಿ ಬೆಲೆ ಅಪಮೌಲ್ಯಗೊಳ್ಳುತ್ತಿರುವುದರಿಂದ ಭಾರತೀಯ ಉದ್ಯಮದ ಮೇಲೆ ಭಾರಿ ಪ್ರತಿಕೂಲ ಪರಿಣಾಮ ಬೀರಿದೆ. ಬಟ್ಟೆ ಉತ್ಪಾದನಾ ಕೈಗಾರಿಕೆ(ಗಾರ್ಮೆಂಟ್ಸ್)ಗಳನ್ನು ಹೊರತುಪಡಿಸಿ ಉಳಿದ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಪೈಕಿ ಶೇ.25 ರಷ್ಟು ನೌಕರರು ಮುಂದಿನ 10 ದಿನದೊಳಗೆ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಅಖಿಲ ಭಾರತ ಕೈಗಾರಿಕೆ ಹಾಗೂ ವಾಣಿಜ್ಯ ಉದ್ಯಮಿದಾರರ ಸಂಘದ (Assocham) ಮೂಲಗಳು ತಿಳಿಸಿವೆ.

ಜಾಗತಿಕ ಮಟ್ಟದಲ್ಲಿ ಆರ್ಥಿಕ ಕುಸಿತದ ಭೀತಿ ಜಗತ್ತಿನ ಎಲ್ಲ ಮಾರುಕಟ್ಟೆಗೂ ಹಬ್ಬಿದ್ದು, ಈಗಾಗಲೇ ಭಾರತದ ಷೇರು ಮಾರುಕಟ್ಟೆ ಪಾತಾಳ ಕಂಡು ಅನೇಕರು ಕೋಟ್ಯಂತರ ರುಪಾಯಿಗಳನ್ನು ಕಳೆದುಕೊಂಡಿದ್ದಾರೆ. ಆರ್ಥಿಕ ಕುಸಿತ ಎಲ್ಲ ರಂಗಕ್ಕೂ ಬಿಸಿ ಮುಟ್ಟಿಸಿದ್ದು, ವಿವಿಧ ಕಂಪನಿಯಲ್ಲಿ ಕಾರ್ಯ ನಿರ್ವಹಿಸುವ ಅನೇಕ ನೌಕರರು ಕೆಲಸ ಕಳೆದುಕೊಂಡಿದ್ದಾರೆ. ಮುಂದಿನ ಹತ್ತು ದಿನದಲ್ಲಿ ಇನ್ನು ಶೇ. 25 ರಷ್ಟು ನೌಕರರು ಕೆಲಸದಿಂದ ವಂಚಿತರಾಗುತ್ತಾರೆ ಎನ್ನಲಾಗಿದೆ.

ಆರ್ಥಿಕ ಬಿಕ್ಕಟ್ಟಿನ ಬಿಸಿ ಮುಖ್ಯವಾಗಿ ಸಾಫ್ಟವೇರ್ ಕಂಪನಿಗಳು, ಸ್ಟೀಲ್ ಉದ್ಯಮ, ಸಿಮೆಂಟ್ ಕಂಪನಿ, ಡೆವಲಪರ್ಸ್, ರಿಯಲ್ ಎಸ್ಟೇಟ್, ವೈಮಾನಿಕ ಹಾಗೂ ಬ್ಯಾಕಿಂಗ್ ಕ್ಷೇತ್ರದಲ್ಲಿ ಪ್ರಭಾವ ಬೀರಿದ್ದು, ಅಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳು ಕೆಲಸ ಕೆಳದುಕೊಳ್ಳುವ ಸಾಧ್ಯತೆಗಳಿವೆ ಎಂದು ಸಂಘ ಮುನ್ನೆಚ್ಚರಿಕೆ ನೀಡಿದೆ. ಆರ್ಥಿಕ ಕುಸಿತದಿಂದ ಉದ್ಯೋಗಿಗಳ ಕೆಲಸಕ್ಕೆ ಅನಿವಾರ್ಯ ಕುತ್ತು ತರಬೇಕಿದೆ. ಅರ್ಹ ಎನಿಸದ ಉದ್ಯೋಗಿಗಳು ಖಂಡತವಾಗಿಯೂ ಕೆಲಸ ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಸಂಘ ಭವಿಷ್ಯ ನುಡಿದಿದೆ.

ಜಾಗತಿಕ ಮಾರಕಟ್ಟೆ ಉಂಟಾಗಿರುವ ಭಾರತೀಯ ಉದ್ಯಮದ ಮೇಲೆ ಬೀರಿರುವ ಪ್ರತಿಕೂಲ ಪರಿಣಾಮವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸಾಕಷ್ಟು ಪ್ರಯತ್ನ ನಡೆಸಿದೆ. ಪ್ರತಿ ಗಂಟೆ ಗಂಟೆಗೂ ಆರ್ಥಿಕ ಕ್ಷೇತ್ರದ ಮೇಲೆ ಆಗುತ್ತಿರುವ ಹೊಡೆತದಿಂದ ಭಾರತೀಯ ರಿಸರ್ವ ಬ್ಯಾಂಕ್ ಹಾಗೂ ಕೇಂದ್ರ ಸರ್ಕಾರ ಕೈಕಟ್ಟಿ ಕುಳಿತಿವೆ. ಈಗಾಗಲೇ ವೈಮಾನಿಕ ಉದ್ಯಮದ ಮೇಲೆ ಭಾರಿ ಪರಿಣಾಮ ಬೀರಿದ್ದು, ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಕಿಂಗ್ ಫಿಶರ್, ಜೆಟ್ ಏರವೇಸ್ ಸೇರಿ ಅನೇಕ ಖಾಸಗಿ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿ ಮನೆ ಕಳಿಸಿರುವ ಕಹಿ ಅನುಭವ ಇನ್ನು ಮಾಸಿಲ್ಲ. ಆಗಲೇ ಇನ್ನಷ್ಟು ಜನರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವುದು ಭಾರಿ ಕಳವಳಕಾರಿ ಸಂಗತಿಯಾಗಿದೆ.

ಗಾರ್ಮೆಂಟ್ಸ್ ಉದ್ಯಮಕ್ಕೆ ಅನ್ವಯವಿಲ್ಲ
ಆರ್ಥಿಕ ಬಿಕ್ಕಟ್ಟಿನಿಂದ ಎಲ್ಲಾ ಕೈಗಾರಿಕೆಗಳು ನಷ್ಟ ಅನುಭವಿಸಿ ಕೈಗಾರಿಕೋದ್ಯಮಿಗಳು ತಲೆ ಮೇಲೆ ಕೈಹೊತ್ತು ಕುಳಿತರೆ, ಇತ್ತ ಉತ್ಪಾದನಾ ಕ್ಷೇತ್ರದ ಮೇಲೆ ಆರ್ಥಿಕ ಕುಸಿತ ಅಷ್ಟಾಗಿ ಪರಿಣಾಮ ಬೀರಿಲ್ಲ. ಮುಖ್ಯವಾಗಿ ಗಾರ್ಮೆಂಟ್ಸ್ ಕ್ಷೇತ್ರ ಉದ್ಯಮ ಲಾಭದಲ್ಲಿದೆ. ಅಲ್ಲಿರುವ ಉದ್ಯೋಗಿಗಳು ನೌಕರಿ ಕಳೆದುಕೊಳ್ಳುವ ಯಾವ ಭಯವೂ ಇಲ್ಲ ಎಂದು ಸಂಘ ಅಭಿಪ್ರಾಯ ವ್ಯಕ್ತಪಡಿಸಿದೆ. ಮೊದಲಿನ ಲಾಭ ಗಳಿಕೆಯಲ್ಲಿ ಕೊಂಚ ಕಡಿಮೆಯಾಗಿದೆಯೇ ವಿನಃ ತನ್ನ ಕಂಪನಿಯಲ್ಲಿ ಕೆಲಸ ನಿರ್ವಹಿಸುವ ನೌಕರರ ಅನ್ನಕ್ಕೆ ಕೈಹಾಕುವ ಕೆಲಸವನ್ನು ಗಾರ್ಮೆಂಟ್ಸ್ ಉದ್ಯಮ ಮಾಡಲಾರದು ಎಂದು ಸಂಘ ತಿಳಿಸಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X