ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ ನಗರಸಭೆಗೆ ಸಿಸಿಟಿವಿ ಅಳವಡಿಕೆ

By Staff
|
Google Oneindia Kannada News

ಉಡುಪಿ, ಅ. 28 : ಇತ್ತೀಚಿನ ದಿನಗಳಲ್ಲಿ ಕರಾವಳಿ ಪ್ರದೇಶದಲ್ಲಿ ಭಯೋತ್ಪಾದನೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಗರದ ನಗರಸಭೆಗೆ ಮೆಟಲ್ ಡಿಟೆಕ್ಟರ್(ಲೋಹಶೋಧಕ)ಹಾಗೂ ಸಿಸಿ ಟಿವಿಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ನಗರಸಭೆಯ ಪ್ರಭಾರಿ ಆಯಕ್ತ ಗೋಕುಲ್ ದಾಸ್ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಸಭೆಗೆ ಭೇಟಿ ನೀಡುವ ಜನರ ಮೇಲೆ ನಿಗಾ ಇರಿಸಲು ಈ ವಿನೂತನ ವ್ಯವಸ್ಥೆಗೆ ಮುಂದಾಗಿರುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ಕರಾವಳಿಯ ಮಂಗಳೂರು, ಉಡುಪಿಯಲ್ಲಿ ಉಗ್ರರು ಜಾಲ ಬೇರುಬಿಟ್ಟಿರುವ ಹಿನ್ನೆಲೆಯಲ್ಲಿ ಪ್ರಸಿದ್ಧ ಕೃಷ್ಣ ದೇವಾಲಯದ ಮೇಲೆ ಭಯೋತ್ಪಾದಕರ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಕೇಂದ್ರ ಗುಪ್ತಚರ ಇಲಾಖೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು.

ಈ ಎಲ್ಲ ಬೆಳವಣಿಗೆಯನ್ನು ಗಮನಿಸಿ ನಗರಸಭೆಗೆ ಪ್ರವೇಶ ಬಾಗಿಲಲ್ಲಿ ಮೆಟಲ್ ಡಿಟೆಕ್ಟರ್ ಹಾಗೂ ಆಯ್ದ ಮುಖ್ಯ ಸ್ಥಳಗಳಲ್ಲಿ 16 ಸಿಸಿಟಿವಿಗಳನ್ನು ಅಳವಡಿಸಲಾಗುವುದು. ಕಚೇರಿಗೆ ಭೇಟಿ ನೀಡಿದ ಸಾರ್ವಜನಿಕರ ದಾಖಲೆ ಮಾಡಿಕೊಳ್ಳಲಾಗುವುದು. ಅದು ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ ಎಂದು ಗೋಕಲ್ ದಾಸ್ ಅಭಿಪ್ರಾಯಪಟ್ಟರು. ಮೆಟಲ್ ಡಿಟೆಕ್ಟರ್ ಹಾಗೂ ಸಿಸಿಟಿವಿಗಳಿಗೆ 45 ಸಾವಿರ ರುಪಾಯಿಗಳ ವೆಟ್ಟ ತಗುಲಲಿದೆ ಎಂದು ಅವರು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ಉಗ್ರರನ್ನು ಹತ್ತಿಕ್ಕಲು ಕ್ರಮ : ಯಡಿಯೂರಪ್ಪ
ದಿಲ್ಲಿ ಸ್ಫೋಟ : ಮಣಿಪಾಲ್ ನಲ್ಲಿ 3 ಜನ ಸೆರೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X