ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.6 ರಿಂದ ಬೆಂಗಳೂರಿನಲ್ಲಿ ಐಟಿ ಮೇಳ

By Staff
|
Google Oneindia Kannada News

ಬೆಂಗಳೂರು, ಅ.22: ವಾರ್ಷಿಕ ಐಟಿ ಮೇಳವು ಈ ಬಾರಿ ನ.6 ರಿಂದ ನ.8 ರವರೆಗೂ ನಗರದ ಅರಮನೆ ಮೈದಾನದಲ್ಲಿ ನಡೆಯಲಿದೆ. ಇದಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳು ಬಹುಪಾಲು ಪೂರ್ಣಗೊಂಡಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ತಿಳಿಸಿದರು. ಐಟಿ, ಬಿಟಿ ಕ್ಷೇತ್ರದಲ್ಲಿ ರಾಜ್ಯದ ಸಾಧನೆಯನ್ನು ಎತ್ತಿ ಹಿಡಿಯುವುದರ ಜೊತೆಗೆ, ಹೊಸ ಹೊಸ ಆವಿಷ್ಕಾರಗಳ ಅನಾವರಣಕ್ಕೆ ಸೂಕ್ತ ವೇದಿಕೆ ಇದಾಗಲಿದೆ ಎಂದು ಸಚಿವರು ಹೇಳಿದರು.

ವಸ್ತು ಪ್ರದರ್ಶನದ ಜತೆಗೆ ಪರಿಸರ ಸ್ನೇಹಿ ಐಟಿ, ಸೋಲಾರ್ ಶಕ್ತಿ ಬಳಕೆ, ಇ- ಗವರ್ನನ್ಸ್, ಗ್ರಾಮೀಣ ಐಟಿ ಕಾಯ್ದೆ, ಸೆಮಿ ಕಂಡಕ್ಟರ್ ನಿಯಮಾವಳಿ, ಇ-ತ್ಯಾಜ್ಯಗಳ ನಿರ್ವಹಣೆ, ಐಟಿ ಉತ್ಪಾದನಾ ಕ್ಷಮತೆ ಹೆಚ್ಚಳ ಕುರಿತು 80ಕ್ಕೂ ವಿವಿಧ ಕಂಪೆನಿಗಳ ಸಿಇಒಗಳು ಮಾತನಾಡಲಿದ್ದಾರೆ. ಇದಲ್ಲದೆ ಈ ಬಾರಿ ಜಾಗತಿಕಆರ್ಥಿಕ ಬಿಕ್ಕಟ್ಟು ವಿಷಯವಾಗಿ ಚರ್ಚೆ ನಡೆಯಲಿದೆಎಂದು ಐಟಿ ಕಾರ್ಯದರ್ಶಿ ಅಶೋಕ್ ಕುಮಾರ್ ಮನೋಲಿ ಹೇಳಿದರು.

ಗ್ರಾಮೀಣ ಐಟಿ ಕ್ವಿಜ್: ಸುಮಾರುಒಂದು ಲಕ್ಷಕ್ಕೂ ಅಧಿಕ ಪ್ರೌಢಶಾಲೆಯ ಮಕ್ಕಳನ್ನು ಸೇರಿಸಿಕೊಂಡು ಐಟಿ ಕ್ವಿಜ್ ನಡೆಸುತ್ತ ಬಂದಿರುವ ಐಟಿ , ಬಿಟಿ ಇಲಾಖೆ, ಈ ಬಾರಿ ಇನ್ನೂ ಹೆಚ್ಚಿನ ಮಕ್ಕಳು ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಲುತ್ತಾರೆ ಎಂಬ ನಿರೀಕ್ಷೆ ಹೊಂದಿದೆ. ನ. 7 ರಂದು ಪೂರ್ವಭಾವಿ ಸುತ್ತು ಆರಂಭವಾಗಲಿದೆ. ಪ್ರಮುಖ ಐಟಿ ಕಂಪೆನಿಗಳ ಪ್ರಾಯೋಜಕತ್ವದಿಂದ ಈ ಕ್ವಿಜ್ ಕಾರ್ಯಕ್ರಮ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸುವಲ್ಲಿ ಸಫಲವಾಗಿದೆ.

ಈ ವರೆಗೂ ಸುಮಾರು 60 ಕ್ಕೂ ಹೆಚ್ಚು ದೊಡ್ಡ ಐಟಿ ಕಂಪೆನಿಗಳು ಐಟಿ ಮೇಳದಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿವೆ. ಇವುಗಳಲ್ಲಿ ಇನ್ಫೋಸಿಸ್,ಟಿಸಿಎಸ್, ವಿಪ್ರೋ, ಒರಾಕಲ್ ಪ್ರಮುಖವಾದವು ಎಂದು ಅಶೋಕ್ ಮನೋಲಿ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X