ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿಯಲ್ಲಿ ಮತ್ತೆ ಇಬ್ಬರು ಶಂಕಿತರ ಬಂಧನ

By Staff
|
Google Oneindia Kannada News

ಬೆಳಗಾವಿ, ಅ. 28 : ಇತ್ತೀಚೆಗೆ ದೇಶದ ವಿವಿಧೆಡೆ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮತ್ತಿಬ್ಬರು ಶಂಕಿತ ಉಗ್ರರನ್ನು ಎಪಿಎಂಸಿ ಪೊಲೀಸರು ಮಂಗಳವಾರ ಮಧ್ಯಾಹ್ನ ಬಂಧಿಸಿದ್ದಾರೆ. ನಗರದ ಅಶೋಕ್ ನಗರದ ನಿವಾಸಿ ನಾಸಿರ್ ರಂಗ್ರೇಜಿ ಹಾಗೂ ಖುಸ್ರೋ ನಗರದ ನಾವಿದ್ ಖಾಜಿ ಎಂಬಿಬ್ಬರು ಬಂಧಿತ ಶಂಕಿತರಾಗಿದ್ದಾರೆ.

ಇತ್ತೀಚೆಗೆ ಹುಬ್ಬಳ್ಳಿ ಹಾಗೂ ಸುತ್ತಿಮುತ್ತಲಿನ ಪ್ರದೇಶದಲ್ಲಿ ತಂಡ ಕಟ್ಟಿ ಸ್ಫೋಟಕ ತಯಾರಿಸುವುದು. ಹಾಗೂ ಗೋಧ್ರಾ ಹತ್ಯಾಕಾಂಡದ ಸಿಡಿಯನ್ನು ಅಮಾಯಕರಿಗೆ ತೋರಿಸಿ ಪ್ರಚೋದನೆ ನೀಡುತ್ತಿದ್ದ ಉಗ್ರ ಲಿಯಾಕತ್ ಅಲಿ ಕಟ್ಟಿದ್ದ ಒಂಬತ್ತು ಮಂದಿ ತಂಡದಲ್ಲಿ ಈ ಇಬ್ಬರು ಸಕ್ರಿಯ ಸದಸ್ಯರಾಗಿದ್ದಾರೆ ಎಂದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಬಂಧಿತ ಶಂಕಿತ ಉಗ್ರರನ್ನು ಇಂದು ನ್ಯಾಯಾಲಯಕ್ಕೆ ಒಪ್ಪಿಸಿದ ನಂತರ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಶಕೀಲ್ ಎಂಬ ಇನ್ನೊಬ್ಬ ಶಂಕಿತ ಉಗ್ರ ಪರಾರಿಯಾಗಿದ್ದು, ಆತನ ಬಂಧನಕ್ಕೆ ವ್ಯಾಪಕ ಜಾಲ ಬೀಸಲಾಗಿದೆ. ಶೀಘ್ರದಲ್ಲಿ ಶಕೀಲ್ ನನ್ನು ಬಂಧಿಸುವುದಾಗಿ ಪೊಲೀಸರು ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಚರ್ಚ್ ದಾಳಿ ಸರ್ಕಾರದ ಕ್ರಮಕ್ಕೆ ಕೇಂದ್ರ ತೃಪ್ತಿ
ಗುಪ್ತಚರ ಇಲಾಖೆ ಬಲವರ್ಧನೆ :ಯಡಿಯೂರಪ್ಪ
ದಿಲ್ಲಿ ಸ್ಫೋಟ : ಮಣಿಪಾಲ್ ನಲ್ಲಿ 3 ಜನ ಸೆರೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X