ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೆಪಿಎಸ್ ಪಿ ತಾಣದಲ್ಲಿ ಎಸ್ ಡಿಎ ಫಲಿತಾಂಶ
ಬೆಂಗಳೂರು ಅ 26: ಕಿರಿಯ ಸಹಾಯಕ, ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಆಯ್ಕೆಗಾಗಿ ಆಯೋಗವು ದಿನಾಂಕ 22.6.2008ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಆಯೋಗದ ವೆಬ್ಸೈಟ್ http://kpsc.kar.nic.in/results.htm ನಲ್ಲಿ ಪ್ರಕಟಿಸಲಾಗಿದೆ.
ಈ ಅಂಕಗಳ ಮರುಎಣಿಕೆಗೆ ಅವಕಾಶವಿಲ್ಲ. ಆದರೂ ಅಂಕಗಳ ಬಗ್ಗೆ ನೈಜವಾದ ಅನುಮಾನವಿದ್ದಲ್ಲಿ ಸೂಕ್ತ ದಾಖಲೆಗಳಲ್ನು ಸಲ್ಲಿಸುವ ಮೂಲಕ ತಮ್ಮ ಮನವಿಯನ್ನು ನವೆಂಬರ್ 7 ರೊಳಗಾಗಿ ಪತ್ರಿಕೆ ಒಂದಕ್ಕೆ 100 ರು ನಂತೆ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ "ಉದ್ಯೋಗ ಸೌಧ" ಬೆಂಗಳೂರು - 560 001 ಇವರೆಗೆ ಸಂದಾಯವಾಗುವಂತೆ ಬ್ಯಾಂಕ್ ಡ್ರಾಪ್ಟ್ ಸಲ್ಲಿಸಬೇಕು.
(ದಟ್ಸ್ ಕನ್ನಡ ವಾರ್ತೆ)
Comments
Story first published: Sunday, October 26, 2008, 10:33 [IST]