ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನದ ಗಗನಯಾನಿಗೆ ನಗರದಲ್ಲಿ ತರಬೇತಿ

By ಚಿತ್ರ, ವರದಿ: ಎಂ.ಎಂ. ಜೋಶಿ
|
Google Oneindia Kannada News

Yeddyurappa visits Byalalu Space centreಬೆಂಗಳೂರು, ಅ.26: ಚಂದ್ರಯಾನದ ಮಾರ್ಗದಲ್ಲಿ ಮೊದಲ ಯಶಸ್ವಿ ಹೆಜ್ಜೆ ಇರಿಸುವ ಮೂಲಕ ಇಡೀ ಜಗತ್ತನ್ನು ಭಾರತದತ್ತ ತಿರುಗಿಸಿ, ಬಾಹ್ಯಾಕಾಶ ವಿಜ್ಞಾನದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದ ಇಸ್ರೋ ಸಂಸ್ಥೆಯು ವಿಜ್ಞಾನಿಗಳ ಅಭಿನಂದನಾರ್ಹರು. ನಮ್ಮನ್ನು ಅತ್ಯಂತ ಹೆಮ್ಮೆಯಿಂದ ತಲೆ ಎತ್ತಿ ನಡೆಯುವಂತೆ ಮಾಡಿದ ಕೀರ್ತಿ ಈ ವಿಜ್ಞಾನಿಗಳಿಗೆ ಸಲ್ಲುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾನುವಾರ ಚಂದ್ರಯಾನ-1 ನಿಯಂತ್ರಣಾ ಕೇಂದ್ರ ಬ್ಯಾಲಾಳುವಿನ ಐಡಿಎಸ್‌ಎನ್ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದರು.

ಚಂದ್ರಯಾನ-1 ಉಡಾವಣೆಯ ಮೂಲಕ ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳ ಸಾಮರ್ಥ್ಯದ ಮಟ್ಟವನ್ನು ಜಗತ್ತಿಗೇ ಸಾರಿದಂತಾಗಿದೆ. ಅಮೆರಿಕ ಅಧ್ಯಕ್ಷಿಯ ಅಭ್ಯರ್ಥಿ ಬರಾಕ್ ಒಬಾಮ 21ನೇ ಶತಮಾನದಲ್ಲಿ ಭಾರತ ಅಮೆರಿಕಾದ ಅಗತ್ಯ ಜೋಡಿಯಾಲಿದೆ ಎಂದಿದ್ದಾರೆ. ಇದು ಅತಿದೊಡ್ಡ ಪ್ರಶಂಸೆಯಾಗಿದೆ. ಚಂದ್ರಯಾನ -1 ತಂಡದಲ್ಲಿರುವ ಎಸ್.ಕೆ, ಶಿವಕುಮಾರ್ ಶ್ರೀನಿವಾಸಹೆಗ್ಡೆ, ಎನ್.ಎಸ್. ಗೋಪಿನಾಥ್, ಅನಂತಕೃಷ್ಣ, ಡಾ. ರಂಗನಾಥ ನವಲಗುಂದ್ ಕರ್ನಾಟಕ ಸಂಜಾತರೆಂಬುದು ಅತೀವ ಸಂತೋಷದ ಸಂಗತಿ ಎಂದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಮಾಧವನ್ ನಾಯರ್ ಅವರು ಮಾತನಾಡಿ ಈವರೆಗೆ ಭಾರತದ ಉಪಗ್ರಹಗಳು ಗರಿಷ್ಟ 36000 ಕಿ.ಮೀ. ನಷ್ಟು ದೂರದವರೆಗೆ ಮಾತ್ರ ಉಡಾಯಿಸಲು ಸಾಧ್ಯವಾಗಿತ್ತು. ಈ ಬಾರಿ 75000 ಕಿ.ಮೀ. ದೂರ ಉಡಾವಣೆ ಮಾಡಲು ವಿಕ್ರಮ ಸಾಧಿಸಲಾಗಿದೆ. ವಿಶ್ವದ 6 ರಾಷ್ಟ್ರಗಳಲ್ಲಿ ಭಾರತವು ಈಗ ಬಾಹ್ಯಾಕಾಶ ಸಾಮರ್ಥ್ಯ ಹೊಂದಿದ ರಾಷ್ಟ್ರವಾಗಿದೆ. ಹಿಂದಿನ ಇಸ್ರೋ ಮುಖ್ಯಸ್ಥ ಕಸ್ತೂರಿ ರಂಗನ್, ಗೋಯಲ್ ಅವರಿಗೆ ಈ ಸಾಧನೆಯ ಕೀರ್ತಿಯ ಪಾಲು ಸಲ್ಲಬೇಕೆಂದರು.

CM felicitates ISRO Scientistsನಗರದಲ್ಲಿ ಗಗನಯಾತ್ರಿಗಳ ತರಬೇತಿ ಕೇಂದ್ರ:
ಬೆಂಗಳೂರಿನಲ್ಲಿ ಗಗನಯಾತ್ರಿಗಳ ತರಬೇತಿ ಕೇಂದ್ರವನ್ನು ಸ್ಥಾಪಿಸುವ ಯೋಜನೆ ಕುರಿತು ತಿಳಿಸುತ್ತಾ ನೂತನ ವಿಮಾನ ನಿಲ್ದಾಣದಿಂದ ಹೊರಗೆ 40 ಎಕರೆ ಪ್ರದೇಶವು ಈಗಾಗಲೇ ಇಸ್ರೋ ಸಂಸ್ಥೆಯಲ್ಲಿ ಇದ್ದು ಇನ್ನೂ 100 ಎಕರೆ ಪ್ರದೇಶವನ್ನು ಇದಕ್ಕಾಗಿ ಪಡೆಯಬೇಕಾಗಿದ್ದು ಮುಖ್ಯಮಂತ್ರಿಗಳು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಸಂತಸದ ವಿಚಾರವೆಂದು ತಿಳಿಸಿದರು. ಮುಖ್ಯಮಂತ್ರಿಗಳು ಚಂದ್ರಯಾನದ ಯಶಸ್ಸಿನ ಕುರಿತು ತೋರಿಸಿರುವ ಹೆಮ್ಮೆ ಗೌರವ, ಆಶಯ, ಅತ್ಯಂತ ಹೃದಯಸ್ಪರ್ಶಿಯಾಗಿದೆಯೆಂದರು.

ಮುಂದಿನ ನಾಲ್ಕು ವರ್ಷಗಳಲ್ಲಿ ಕೈಗೊಳ್ಳುವ ಚಂದ್ರಯಾನ -2 ಕಾರ್ಯಕ್ರಮದ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿದೆ ಅದಕ್ಕಾಗಿ 425 ಕೋಟಿ ರು.ಗಳ ಅನುದಾನ ವ್ಯವಸ್ಥೆಯಾಗಿದೆ ಎಂದು ನಾಯರ್ ಹೇಳಿದರು.

ಮುಖ್ಯಮಂತ್ರಿಗಳು ಡಾ. ಜಿ. ಮಾಧವನ್ ನಾಯರ್, ಡಾ.ಎಸ್. ಕೆ. ಶಿವಕುಮಾರ್, ಡಾ. ಟಿ.ಕೆ. ಅಲೆಕ್ಸ್, ಡಾ: ಭಾಸ್ಕರ್‌ನಾರಾಯಣ್ ಅವರನ್ನು ಒಳಗೊಂಡಂತೆ ಬಾಹ್ಯಾಕಾಶ ವಿಜ್ಞಾನಿಗಳನ್ನು ಸನ್ಮಾನಿಸಿದರು. ಅಲ್ಲದೆ ಇಸ್ರೋ ಸಂಸ್ಥೆಯ ಹಿಂದಿನ ಮುಖ್ಯಸ್ಥರುಗಳಾದ ಡಾ: ಕಸ್ತೂರಿ ರಂಗನ್ , ಡಾ. ಯು.ಆರ್. ರಾವ್ ಅವರನ್ನು ಸಹ ಸನ್ಮಾನಿಸಲಾಯಿತು.

ಅರಂಭದಲ್ಲಿ ಚಂದ್ರಯಾನ ಯೋಜನಾ ನಿರ್ದೇಶಕರಾದ ಅಣ್ಣಾಮಲೈ ಅವರು ಯೋಜನೆಯ ಪೂರ್ಣ ವಿವರ ನೀಡಿದರು. ಮುಂದಿನ 2 ವರ್ಷಗಳಲ್ಲಿ ಚಂದ್ರನಿಗೆ ಸಂಬಂಧಿಸಿದಂತೆ ಬಾಹ್ಯಾಕಾಶದಿಂದ ಮಾಹಿತಿಯನ್ನು ತಡೆಯುವಲ್ಲಿ ಐ.ಡಿಎಸ್‌ಎನ್ ಪ್ರಮುಖ ಪಾತ್ರವಹಿಸಲಿದೆ. ಚಂದ್ರನ ಪೂರ್ಣ ರೂಪದ ನಕ್ಷೆ ,ಚಂದ್ರನ ಮೇಲ್ಮೈಯಲ್ಲಿನ ರಾಸಾಯನಿಕ ಖನಿಜಗಳ ಸಂಬಂಧದ ಮ್ಯಾಪಿಂಗ್, ಹೀಲಿಯಂ-3 ಇರುವ ಸಾಧ್ಯತೆ ಇವುಗಳನ್ನು ಈ ಉಪಗ್ರಹದ ಮೂಲಕ ಪಡೆಯುವ ನಿರೀಕ್ಷೆಯಿದ್ದು ಇವು ಮುಂದೆ ಅನೇಕ ಸಾಧ್ಯತೆಗಳ ಬಾಗಿಲನ್ನೇ ತೆರೆಯಲಿವೆಯೆಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X