ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿತ್ತೂರಲ್ಲಿ ಜನಾರ್ದನ ರೆಡ್ಡಿ ,ಉಗ್ರಪ್ಪ ಕಿತ್ತಾಟ

By Staff
|
Google Oneindia Kannada News

ಕಿತ್ತೂರು, ಅ. 26 : ಐತಿಹಾಸಿಕ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಹಿರಂಗವಾಗಿ ಆರೋಪ ಪ್ರತ್ಯಾರೋಪ ಮಾಡುವ ಮೂಲಕ ಬೀದಿ ರಂಪಾಟ ಮಾಡಿಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಜವಾಬ್ದಾರಿ ಸ್ಥಾನದಲ್ಲಿರುವ ನಾಯಕರು ಗಣ್ಯರು ಉಪಸ್ಥಿತಿಯಿದ್ದ ಮಹತ್ವದ ವೇದಿಕೆಯ ಮೇಲೆ ರೌಡಿಗಳಂತೆ ಏಕವಚನದಲ್ಲಿ ಪ್ರಯೋಗಿಸಿ ಕಿತ್ತಾಡಿಕೊಂಡಿರುವುದು ಎಷ್ಟು ಸರಿ ?

ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ವಿರೋಧಿ ನಾಯಕ ವಿ.ಎಸ್.ಉಗ್ರಪ್ಪ ರಾಣಿ ಚೆನ್ನಮ್ಮಾ ಅವರನ್ನು ನೆನೆಯುತ್ತಾ ಮೈಸೂರು ನಂಥ ಕಾರ್ಯಕ್ರಮಕ್ಕೆ ಅಪಾರ ಹಣ ಖರ್ಚು ಮಾಡುವ ಸರ್ಕಾರ, ಕಿತ್ತೂರು ಉತ್ಸವವನ್ನು ಕಡೆಗಣಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿತ್ತೂರು ಉತ್ಸವದ ಸಮಾರೋಪಕ್ಕೆ ಆಗಮಿಸದೆ ಕಾರ್ಯಕ್ರಮಕ್ಕೆ ಅವಮಾನ ಎಸಗಿದ್ದಾರೆ ಎಂದು ಶರಂಪರ ಟೀಕಾಪ್ರಹಾರ ನಡೆಸಿದ್ದಾರೆ.

ಇದರಿಂದ ಕೆಂಡಾಮಂಡಲರಾದ ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ಅವರು ಉಗ್ರಪ್ಪ ಭಾಷಣಕ್ಕೆ ಅಡ್ಡಪಡಿಸಿದರು. ಈ ಸಮಯದಲ್ಲಿ ಇಬ್ಬರ ನಾಯಕರ ನಡುವೆ ಮಾತಿನ ಚಕಮಕಿ ನಡೆದು, ಕೈಕೈಮಿಲಾಯಿಸುವ ಹಂತಕ್ಕೆ ತಲುಪಿತು. ಉಭಯ ನಾಯಕರ ನಡುವೆ ಏಕವಚನ ಮಾತುಗಳು ನಡೆದು ಹೋದವು. ಕಾರ್ಯಕ್ರಮಕ್ಕೆ ನೆರೆದಿದ್ದ ಸಾವಿರಾರು ಮಂದಿಗೆ ಪುಕ್ಕಟೆ ಮನರಂಜನೆ ದೊರೆಯಿತು. ಇಬ್ಬರು ನಾಯಕರ ವರ್ತನೆಯನ್ನು ಅಲ್ಲಿರುವ ಪ್ರಜ್ಞಾವಂತರು ತೀವ್ರವಾಗಿ ಖಂಡಿಸಿದರು.

ಉಗ್ರಪ್ಪನವರಿಗೆ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಲಿಕ್ಕೆ ಉತ್ಸವದ ವೇದಿಕೆ ಸೂಕ್ತ ಸ್ಥಳವಲ್ಲ. ಸರ್ಕಾರವನ್ನು ತರಾಟೆ ತೆಗೆದುಕೊಳ್ಳಲು ಬೆಂಗಳೂರಿನಿಂದ ಕಿತ್ತೂರಿಗೆ ಬರಬೇಕಿತ್ತೆ ಎಂದು ಉಗ್ರಪ್ಪನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಗುಂಪು ಒಂದಡೆಯಾದರೆ, ಸರ್ಕಾರ ನಡೆಸುವವರಿಗೆ ಸಂಯಮ ಮುಖ್ಯ. ಜನಾರ್ದನರೆಡ್ಡಿ ರೌಡಿಯಂತೆ ಉಗ್ರಪ್ಪನವರ ಮೇಲೆ ಎರಗುವುದು ಅವರ ಘನತೆಗೆ ತಕ್ಕುದಲ್ಲ ಎಂದು ಅನೇಕರು ಕಿಡಿಕಾರಿದ್ದಾರೆ.

ಹಣ ಬಲ, ತೋಲ್ಬಳದ ಜೊತೆಗೆ ಅಧಿಕಾರದ ಮದ ನೆತ್ತಿಗೇರಿದರೆ ಇನ್ನೇನಾಗಲಿದೆ ಎಂದು ಜನಾರ್ದರೆಡ್ಡಿ ಅವರ ವರ್ತನೆಗೆ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಜನರು ಕಟುವಾಗಿ ಟೀಕಿಸಿದ್ದಾರೆ. ಸರ್ಕಾರದ ವಿರುದ್ಧ ಆರೋಪ ಪ್ರತ್ಯಾರೋಪಗಳು ಸಹಜ. ಅದನ್ನು ಸಕರಾತ್ಮಕವಾಗಿ ಸ್ವೀಕರಿಸಬೇಕು. ಅದನ್ನು ಬಿಟ್ಟು ಸಚಿವರೊಬ್ಬರು ಕೈ ಮಿಲಾಯಿಸುವ ಮಟ್ಟಿಗೆ ವರ್ತನೆ ಸರಿಯಲ್ಲ ಸಾರ್ವಜನಿಕರ ಅಭಿಪ್ರಾಯವಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಕರವೇ ಭಜರಂಗಿಗಳ ನಡುವೆ ಮಾರಾಮಾರಿ
'ಕಿತ್ತೂರು ಉತ್ಸವ'ಕ್ಕೆ 1 ಕೋಟಿ ರು. ಅನುದಾನ
ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಜಾರಿಗೆ ಬರಲಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X