ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಾಜಿನಗರ:15 ಕೋ. ರು ಬಿಡಿಎ ಆಸ್ತಿವಶ

By Staff
|
Google Oneindia Kannada News

ಬೆಂಗಳೂರು, ಅ. 26: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಪಶ್ಚಿಮ ಕಾರ್ಡ್ ರಸ್ತೆ 2ನೇ ಹಂತ ನಾಗರೀಕ ಸೌಲಭ್ಯ ನಿವೇಶನದಲ್ಲಿ ಅನಧಿಕೃತವಾಗಿ ನಿರ್ಮಿತವಾಗಿದ್ದ ಶೆಡ್ನ್ನು ತೆರವುಗೊಳಿಸಿ 15 ಕೋಟಿ ರುಪಾಯಿಗಳ ಪ್ರಾಧಿಕಾರದ ಆಸ್ತಿಯನ್ನು ವಶಪಡಿಸಿಕೊಂಡಿದೆ.

ಕೇತಮಾರನಹಳ್ಳಿ ಗ್ರಾಮದ ಸರ್ವೆ ನಂ. 172/1-28 ರಲ್ಲಿಯ, ಪಶ್ಚಿಮ ಕಾರ್ಡ್ ರಸ್ತೆ ೨ನೇ ಹಂತ, ನಂದಿನಿ ಚಿತ್ರಮಂದಿರ ಹಿಂಭಾಗದ ನಾಗರೀಕ ಸೌಲಭ್ಯ ನಿವೇಶನದಲ್ಲಿ ತಲೆ ಎತ್ತಿದ್ದ ಅನಧಿಕೃತ ಶೆಡ್‌ನ್ನು ತೆರವುಗೊಳಿಸಿ, ಒಟ್ಟಾರೆ 1 ಎಕರೆ 7 ಗುಂಟೆ ಪ್ರದೇಶದ ಬೆಲೆಬಾಳುವ ಆಸ್ತಿಯನ್ನು ಪ್ರಾಧಿಕಾರವು ತನ್ನ ವಶಕ್ಕೆ ತೆಗೆದುಕೊಂಡಿದೆ. ವಶಪಡಿಸಿಕೊಂಡಿರುವ ನಿವೇಶನಕ್ಕೆ ತಂತಿ ಬೇಲಿಯನ್ನು ಅಳವಡಿಸಿ ಭದ್ರಪಡಿಸಲಾಗಿದೆ.

ವಶಪಡಿಸಿಕೊಂಡಿರುವ ಆಸ್ತಿಯ ಅಂದಾಜು ಮೌಲ್ಯ 15 ಕೋಟಿ ರೂಪಾಯಿಗಳು.ಈ ಕಾರ್ಯಾಚರಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆರಕ್ಷಕ ಅಧೀಕ್ಷಕರು, ಪಶ್ಚಿಮ ವಿಭಾಗದ ಕಾರ್ಯಪಾಲಕ ಅಭಿಯಂತರರ ಮೇಲ್ವಿಚಾರಣೆಯಲ್ಲಿ ಬಿಡಿಎ ಕಾರ್ಯಪಡೆಯು, ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ನೆರವೇರಿಸಿತು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X