ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.17 ರಿಂದ ಡಿ.24 ರವರೆಗೆ ಜಮ್ಮು ಕಾಶ್ಮೀರ ಚುನಾವಣೆ

By Staff
|
Google Oneindia Kannada News

ನವದೆಹಲಿ, ಅ. 19 : ಜಮ್ಮು ಮತ್ತು ಕಾಶ್ಮೀರದಲ್ಲಿ ನವೆಂಬರ್ 17 ರಿಂದ ಡಿಸೆಂಬರ್ 24ರ ವರೆಗೆ ಏಳು ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಕೇಂದ್ರ ಚುನಾವಣೆ ಆಯೋಗ ನಿರ್ಧರಿಸಿದೆ.

ಮೂದಲನೇ ಹಂತ ನ. 17, ಎರಡನೇ ಹಂತ ನ. 23, ನ. 30 ರಂದು ಮೂರನೇ ಹಂತ, ಡಿ. 7 ನಾಲ್ಕನೇ ಹಂತ, ಐದು ಮತ್ತು ಆರನೇ ಹಂತದ ಚುನಾವಣೆ ಡಿ.13 ಹಾಗೂ ಡಿ.17 ರಂದು ಮತ್ತು ಕೊನೆಯ ಹಾಗೂ ಏಳನೇ ಹಂತದ ಚನಾವಣೆ ಡಿ. 24 ರಂದು ನಡೆಯಲಿದೆ. ಡಿ. 28 ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಕೇಂದ್ರ ಚುನಾವಣೆ ಆಯೋಗದ ಮುಖ್ಯ ಚುನಾವಣಾಧಿಕಾರಿ ಎನ್. ಗೋಪಾಲಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ ವಿಧಾನಸಭೆ ಚುನಾವಣೆಯ ದಿನಾಂಕಗಳನ್ನು ಘೋಷಣೆ ಮಾಡಿದ ಸಂದರ್ಭದಲ್ಲಿ ಜಮ್ಮು ಕಾಶ್ಮೀರ ಚುನಾವಣೆಯ ದಿನಾಂಕಗಳನ್ನು ಕೇಂದ್ರ ಚುನಾವಣೆ ಆಯೋಗ ಗುಪ್ತವಾಗಿರಿಸಿತ್ತು. ಭಯೋತ್ಪಾದನೆ ಹಾವಳಿ ಹಾಗೂ ಅಮರನಾಥ ದೇವಾಲಯ ಭೂವಿವಾದ ಸೇರಿದಂತೆ ಅನೇಕ ಸಮಸ್ಯೆಗಳಿಂದ ಅಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿತ್ತು. ಈ ಎಲ್ಲ ಅಗುಹೋಗುಗಳನ್ನು ಗಮನದಲ್ಲಿರಿಸಿಕೊಂಡಿರುವ ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಪ್ರಕಟಿಸಿರಲಿಲ್ಲ. ಮುಕ್ತ ಹಾಗೂ ನ್ಯಾಯ ಸಮ್ಮತವಾದ ರೀತಿಯಲ್ಲಿ ಚುನಾವಣೆ ನಡೆಸಲು ಏಳು ಹಂತದಲ್ಲಿ ಮತದಾನಕ್ಕೆ ಮುಂದಾಗಿದ್ದು. ಒಟ್ಟು 87 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

(ದಟ್ಸ್ ಕನ್ನಡ ವಾರ್ತೆ)
ಐದು ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X