ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಂಗಳೂರಿನಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ
ಮಂಗಳೂರು, ಅ.18: ಇಬ್ಬ್ಬರು ಶಂಕಿತ ಉಗ್ರರನ್ನು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ. ಶಂಕಿತ ಉಗ್ರರಿಂದ ರೈಫಲ್, ಬಾಂಬ್ ತಯಾರಿ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಟ್ವಾಳ ಬೋಳಂತೂರಿನ ರಫೀಕ್ ಪಡುಬಿದ್ರಿ ಹಾಗೂ ಮೂಳೂರಿನ ಫಕೀರ್ ಬಾವ ಬಂಧಿತರು. ಇಂಡಿಯನ್ ಮುಜಾಹಿದ್ದೀನ್ ಉಗ್ರರ ಜೊತೆ ರಫೀಕ್ 2 ವರ್ಷಗಳ ಕಾಲ ವಾಸವಿದ್ದ. ರಿಯಾಜ್ ಭಟ್ಕಳನಿಗೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ್ದ. ಫಕೀರ್ ಬಾವ 6 ವರ್ಷಗಳಿಂದ ಇಂದೋನೇಷ್ಯಾದಲ್ಲಿ ವಾಸವಾಗಿದ್ದು ಅಲ್ಲಿಂದ ಭಯೋತ್ಪಾದನೆ ಚಟುವಟಿಕೆಗಳಿಗೆ ಹಣ ಸಂಗ್ರಹಿಸುತ್ತಿದ್ದ.ಇತ್ತೀಚೆಗಷ್ಟೆ ಭಾರತಕ್ಕೆ ಆಗಮಿಸಿದ್ದ ಎಂದು ಪಶ್ಚಿಮ ವಲಯದ ಐಜಿಪಿ ಅಶಿತ್ ಮೋಹನ್ ಪ್ರಸಾದ್ ತಿಳಿಸಿದ್ದಾರೆ.
ಬಂಧಿತರು ನೀಡಿದ ಮಾಹಿತಿ ಅನುಸರಿಸಿ ಇನ್ಸ್ ಪೆಕ್ಟರ್ ಎಚ್.ಎನ್.ವೆಂಕಟೇಶ್ ಪ್ರಸನ್ನ ನೇತೃತ್ವದ ಪೊಲೀಸರ ತಂಡ ಗುರುವಾರ ರಾತ್ರಿ ಕೊಪ್ಪ ಬಳಿಯ ವಿಠಲಮಕ್ಕಿ, ಎನ್ ಆರ್ ಪುರ ಸಮೀಪದ ಹಕ್ಕಲ ಮನೆಗಳ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, October 18, 2008, 13:05 [IST]