ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಕೋಚ್ ಕಾರ್ಖಾನೆ ಸ್ಥಾಪನೆಗೆ ಸರ್ಕಾರ ಯತ್ನ

By Staff
|
Google Oneindia Kannada News

ಬೆಂಗಳೂರು, ಅ. 16 : ಉತ್ತರಪ್ರದೇಶದ ರಾಯ್ ಬರೇಲಿಯಲ್ಲಿ ಸ್ಥಾಪಿಸಬೇಕಿರುವ ರೈಲ್ವೆ ಕೋಚ್ ಕಾರ್ಖಾನೆಯ ವಿವಾವದ ಭುಗಿಲೆದ್ದಿರುವ ಬೆನ್ನಲ್ಲೇ ಇದರ ಲಾಭ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ. ರೈಲ್ವೆ ಕೋಚ್ ತಯಾರಿಕಾ ಘಟಕವನ್ನು ರಾಜ್ಯದಲ್ಲಿ ಸ್ಥಾಪಿಸುವುದಾದರೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರದ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರಿಗೆ ಪತ್ರ ಬರೆದಿದ್ದಾರೆ.

ಗಂಡಹೆಂಡಿರ ನಡುವೆ ಕೂಸು ಬಡವಾಯಿತು ಎನ್ನುವ ಮಾತಿನ ಅನ್ವರ್ಥಕ ಎಂಬಂತೆ ಇತ್ತೀಚೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ನಡುವೆ ನಡೆಯುತ್ತಿರುವ ರಾಜಕೀಯ ಸಮರದಿಂದ ರಾಯ್ ಬರೇಲಿಯಲ್ಲಿ ರೈಲ್ವೆ ಕೋಚ್ ಕಾರ್ಖಾನೆಯನ್ನು ಸ್ಥಾಪಿಸಲು ಹಿನ್ನೆಡೆಯುಂಟಾಗುವ ಸಾಧ್ಯತೆಗಳಿವೆ.

ಮಾಯಾವತಿ ಅವರು ಕೇಂದ್ರದ ರೈಲ್ವೆ ಕೋಚ್ ಕಾರ್ಖಾನೆಯ ಸ್ಥಾಪನೆಗೆ ಕುರಿತು ಇಲಾಖೆ ಮಾಡಿಕೊಂಡಿರುವ ಮನವಿಯನ್ನು ತಳ್ಳಿಹಾಕಿದ್ದಾರೆ. ರಾಯ್ ಬರೇಲಿಯಲ್ಲಿ ಕೋಚ್ ಕಾರ್ಖಾನೆ ಸ್ಥಾಪಿಸಲು ಉತ್ತರ ಪ್ರದೇಶದ ಸರ್ಕಾರ ಅಸಹಕಾರ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ಸಚಿವ ಲಾಲು ಪ್ರಸಾದ ಯಾದವ್ ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯದ ಹುಬ್ಬಳ್ಳಿ ಸೇರಿ ಯಾವ ಭಾಗದಲ್ಲಿ ಬೇಕಿದ್ದರೂ ಸ್ಥಾಪಿಸಲು ಮುಂದಾದಲ್ಲಿ ಅಗತ್ಯ ಸ್ಥಳಾವಕಾಶ ನೀಡುವುದರ ಜೊತೆಗೆ ಎಲ್ಲ ರೀತಿಯ ಸಹಕಾರಕ್ಕೂ ಸಿದ್ಧ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಟಾಟಾ ನ್ಯಾನೋ ಕಾರು ಘಟಕ ಕರ್ನಾಟಕದಿಂದ ಕೈತಪ್ಪಿದ್ದು, ರೈಲ್ವೆ ಕಾರ್ಖಾನೆ ರಾಜ್ಯಕ್ಕೆ ತರುವಲ್ಲಿ ಸರ್ಕಾರ ಭಾರಿ ಸಾಹಸ ನಡೆಸಿದೆ.

(ದಟ್ಸ್ ಕನ್ನಡ ವಾರ್ತೆ)
ಸಂಧ್ಯಾ ಸುರಕ್ಷಾ ಲಾಭ ಪಡೆಯಲು ಹಿರೀಕರಿಗೆ ಕರೆ
ಕರ್ನಾಟಕಕ್ಕೆ ಕೇಂದ್ರದಿಂದ ಹೆಚ್ಚುವರಿ ವಿದ್ಯುತ್
ಇದೇ ಪ್ರಥಮ ಬಾರಿಗೆ ಹುಬ್ಬಳ್ಳಿಯಲ್ಲಿ ಐಟಿ ಪ್ರದರ್ಶನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X