ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೆ ಕೇಂದ್ರ ಗ್ರಿಡ್ ನಿಂದ ಹೆಚ್ಚುವರಿ ವಿದ್ಯುತ್

By Staff
|
Google Oneindia Kannada News

ಬೆಂಗಳೂರು, ಅ.16:ಕೇಂದ್ರ ಗ್ರಿಡ್ ನಿಂದ ಹೆಚ್ಚುವರಿಯಾಗಿ ಕರ್ನಾಟಕಕ್ಕೆ 150 ಮೆಗಾ ವ್ಯಾಟ್ ವಿದ್ಯುತ್ ಸರಬರಾಜು ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಇಂಧನ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಒತ್ತಡದ ಅವಧಿಗಳಲ್ಲಿ ರಾಜ್ಯ ವಿದ್ಯುತ್ ಅಭಾವವನ್ನುಎದುರಿಸುತ್ತಿದೆ. ಕೇಂದ್ರದ ಈ ನಿರ್ಧಾರದಿಂದ ವಿದ್ಯುತ್ ಅಭಾವ ಕೊಂಚ ಮಟ್ಟಿಗೆ ಪರಿಹಾರವಾಗಿದೆ. ಕೇಂದ್ರದ ಈ ನಿರ್ಧಾರದ ಜೊತೆಗೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ( ಕೆಪಿಸಿಎಲ್) ಸಹ ಹೆಚ್ಚುವರಿಯಾಗಿ 150 ಮೆಗಾವ್ಯಾಟ್ ವಿದ್ಯುತ್ತನ್ನು ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕದಿಂದ ಸರಬರಾಜು ಮಾಡಲಿದೆ. ಇದರಿಂದ ವಿದ್ಯುತ್ ನ ಬೇಡಿಕೆ ಮತ್ತ್ತಷ್ಟು ಈಡೇರಲಿದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಸಚಿವರು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು. ರಾಯಚೂರು ಹಾಗೂ ಬಳ್ಳಾರಿಯಲ್ಲಿನ ಶಾಖೋತ್ಪನ್ನ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು ಅವು ಕಲ್ಲಿದ್ದಲಿನ ಕೊರತೆಯನ್ನು ಎದುರಿಸುತ್ತಿಲ್ಲ ಎಂದು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾತ್ಕಾಲಿಕ ಲೋಡ್ ಶೆಡ್ಡಿಂಗ್ ಶುರು : ಈಶ್ವರಪ್ಪ
ಸೆ.8ರಂದು ಛತ್ತೀಸ್ ಗಡದ ವಿದ್ಯುತ್ ಗೆ ಚಾಲನೆ
ಕರ್ನಾಟಕದಿ ಹರಿಯಲಿದೆ ಛತ್ತೀಸ್ ಗಢದ ವಿದ್ಯುತ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X