ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಸೇನೆ ನಿಷೇಧಿಸಬೇಕೆಂದ ದೇವೇಗೌಡ

By Staff
|
Google Oneindia Kannada News

ಬೆಂಗಳೂರು, ಅ. 16 : ಇತ್ತೀಚೆಗೆ ರಾಜ್ಯದಲ್ಲಿ ನಡೆದಿರುವ ಚರ್ಚ್ ದಾಳಿಯಲ್ಲಿ ಭಾಗಿಯಾಗಿರುವ ಭಜರಂಗದಳ ಮತ್ತು ರಾಮಸೇನೆ ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕೇಂದ್ರ ಸರ್ಕಾರವನ್ನು ಮತ್ತೊಮ್ಮೆ ಒತ್ತಾಯಿಸಿದರು. ಹಾಗೆಯೇ ಮಠಾಧೀಶರು ಅಡ್ಡಪಲ್ಲಕ್ಕಿಯಲ್ಲಿ ಓಡಾಡುವುದನ್ನು ಬಿಟ್ಟು ದಲಿತರ ಉದ್ಧಾರಕ್ಕಾಗಿ ಹಣ ವಿನಿಯೋಗಿಸಲಿ ಇದರಿಂದ ಮತಾಂತರ ತಡೆಯಲು ಸಾಧ್ಯವಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.

ನಗರದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ನಾನೇನಾದರೂ ಪ್ರಧಾನಮಂತ್ರಿ ಸ್ಥಾನದಲ್ಲಿದ್ದರೆ ಕ್ಷಣ ಕಾಲ ಯೋಚಿಸದೆ ಕರ್ನಾಟಕ ಮತ್ತು ಒರಿಸ್ಸಾ ಸರ್ಕಾರಗಳನ್ನು ವಜಾಗೊಳಿಸಲು ಆದೇಶ ನೀಡುತ್ತಿದ್ದೆ ಎಂದರು. ಕರ್ನಾಟಕ ಮತ್ತು ಒರಿಸ್ಸಾದಲ್ಲಿ ಕೋಮುಗಲಭೆಗಳು ನಡೆಯುತ್ತಿವೆ. ಅಲ್ಪಸಂಖ್ಯಾತರು ಭಯದ ನೆರಳಲ್ಲಿ ಜೀವನ ನಡೆಸಬೇಕಾದ ಸಂದಿಗ್ಧ ವಾತಾವರಣ ನಿರ್ಮಾಣವಾಗಿದೆ. ಇಂಥ ಕ್ಲಿಷ್ಟ ಪರಿಸ್ಥಿತಿ ತೆಲೆದೋರಿದರೂ ನಿರ್ಲಕ್ಷ್ಯ ಧೋರಣೆ ತಾಳಿರುವ ಕೇಂದ್ರ ಸರ್ಕಾರದ ಕ್ರಮವನ್ನು ಅವರು ತೀವ್ರವಾಗಿ ಖಂಡಿಸಿದರು.

ಬಿಜೆಪಿ ಅಧಿಕಾರಿದಲ್ಲಿರುವ ಈ ಎರಡು ರಾಜ್ಯಗಳಲ್ಲಿ ಅಲ್ಪಸಂಖ್ಯಾತರ ಮೇಲೆ ದಿನೆದಿನೇ ದಾಳಿಗಳು ಹೆಚ್ಚುತ್ತಿವೆ. ಇಂಥ ಮನಸ್ಥಿತಿ ಇರುವ ಸರ್ಕಾರಗಳಿಗೆ ಸಂವಿಧಾನದ ಸೆಕ್ಷನ್ 356 ನೋಟಿಸ್ ಜಾರಿ ಮಾಡಿದರೆ ಸಾಲದು. ಸರ್ಕಾರವನ್ನೆ ವಜಾಗೊಳಿಸಿ ಸಾಮರಸ್ಯ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅವರು ಆಕ್ರೋಶವ್ಯಕ್ತಪಡಿಸಿದರು.

ಇತ್ತೀಚೆಗೆ ನವದೆಹಲಿಯಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಭಾವೈಕ್ಯತೆ ಸಭೆಯಲ್ಲಿ ಮುಖ್ಯಮಂತ್ರಿ ನೀಡಿರುವ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಚರ್ಚ್ ಮೇಲೆ ದಾಳಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಉಂಟಾಗಿದ್ದ ಗಲಭೆಯನ್ನು ಸಂಪೂರ್ಣ ಹತೋಟಿ ತರಲಾಗಿದೆ ಸಮರ್ಥಿಸಿಕೊಂಡಿದ್ದಾರೆ, ಆದರೆ ಬೆಂಗಳೂರಿನ ಎಡವನಹಳ್ಳಿಯಲ್ಲಿ(ಚರ್ಚ್ ದಾಳಿ) ನಡೆದಿರುವುದು ಏನು ಎಂದು ಕಿಡಿಕಾರಿದರು. ಭಯೋತ್ಪಾದನಾ ಕೃತ್ಯಗಳ ದೇಶಕ್ಕೆ ಹೊಸದೇನಲ್ಲ. ಚರ್ಚ್ ದಾಳಿಯನ್ನು ಮರೆಮಾಚಿ ಭಯೋತ್ಪಾದನೆ ಕುರಿತು ಯಡಿಯೂರಪ್ಪ ಹೆಚ್ಚು ಮಾಡಿನಾಡಿರುವುದು ನಾಚಿಕೆಗೇಡಿನ ಕೆಲಸ ಎಂದು ಸರ್ಕಾರದ ಮೇಲೆ ತೀವ್ರ ವಾಗ್ಧಾಳಿ ನಡೆಸಿದರು.

ದಾವಣಗೆರೆ, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ನಡೆದಿರುವ ಚರ್ಚ್ ದಾಳಿಗೆ ಸಂಬಂಧಿಸಿದಂತೆ ಹಾಲಿ ಹೈಕೋರ್ಟ್ ನ್ಯಾಯಾಧೀಶರ ಮೂಲಕ ಸಮಗ್ರ ತನಿಖೆ ನಡೆಸಬೇಕು. ಪ್ರಕರಣದಲ್ಲಿ ಗಾಯಗೊಂಡಿರುವ ಅಲ್ಪಸಂಖ್ಯಾತರ ಆಸ್ಪತ್ರೆ ಖರ್ಚು ಭರಿಸಬೇಕು ಹಾಗೂ ನಾಶವಾಗಿರುವ ಚರ್ಚ್ ಗಳ ನಷ್ಟವನ್ನು ತುಂಬಿಕೊಡಬೇಕು ಎಂದು ದೇವೇಗೌಡ ಸರ್ಕಾರವನ್ನು ಆಗ್ರಹಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಸದ್ಯಕ್ಕೆ ಭಜರಂಗದಳದ ನಿಷೇಧವಿಲ್ಲ: ಕೇಂದ್ರ
ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ: ಕುಮಾರಸ್ವಾಮಿ
ಮೈತ್ರಿ ಕುರಿತು ದೇಶಪಾಂಡೆ, ಕುಮಾರಸ್ವಾಮಿ ಚರ್ಚೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X