ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಚೆ ಕಚೇರಿಗಳಲ್ಲಿ ಈಗ ಚಿನ್ನದ ನಾಣ್ಯಗಳು ಲಭ್ಯ

By Staff
|
Google Oneindia Kannada News

ನವದೆಹಲಿ, ಅ.16: ಅಂಚೆ ಕಚೇರಿಗಳಲ್ಲಿ ಈಗ 24 ಕ್ಯಾರಟ್ ಚಿನ್ನದ ನಾಣ್ಯಗಳು ಮಾರಾಟಕ್ಕೆ ಲಭ್ಯವಾಗಲಿವೆ. ಅ.15ರಿಂದ ಚಿನ್ನದ ನಾಣ್ಯಗಳ ಮಾರಾಟ ನವದೆಹಲಿ, ಗುಜರಾತ್, ಮಹಾರಾಷ್ಟ್ರ ಹಾಗೂ ತಮಿಳುನಾಡಿನ 100 ಅಂಚೆ ಕಚೇರಿಗಳಲ್ಲಿ ಪ್ರಾರಂಭವಾಗಿದೆ.

ಅರ್ಧ ಗ್ರಾಂ, ಒಂದು ಗ್ರಾಂ, ಐದು ಗ್ರಾಂ ಹಾಗೂ ಎಂಟು ಗ್ರಾಂ ತೂಕದ ಚಿನ್ನದ ನಾಣ್ಯಗಳನ್ನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ತಿರು ಎ ರಾಜಾ ಚಿನ್ನದ ನಾಣ್ಯಗಳ ಮಾರಾಟಕ್ಕೆ ನವದೆಹಲಿಯಲ್ಲಿ ಚಾಲನೆ ಕೊಟ್ಟ ನಂತರ ಸುದ್ದಿಗಾರರಿಗೆ ವಿವರಗಳನ್ನು ನೀಡಿದರು. ಗ್ರಾಮೀಣ ಅಂಚೆ ಕಚೇರಿಗಳ ಮೂಲಕ ಈ ನಾಣ್ಯಗಳು ಸಾಮಾನ್ಯ ಜನಕ್ಕೂ ಲಭ್ಯವಾಗಬೇಕು ಎಂಬುದೇ ನಮ್ಮ ಆಶಯಎಂದರು.

ಸಾರ್ವಜನಿಕರ ಪ್ರತಿಕ್ರಿಯೆನ್ನು ಆಧರಿಸಿ ಮತ್ತಷ್ಟು ಅಂಚೆ ಕಚೇರಿಗಳಿಗೆ ಈ ಸೇವೆಯನ್ನು ವಿಸ್ತರಿಸುವುದಾಗಿ ಸಚಿವರು ಭರವಸೆ ನೀಡಿದರು. ಎರಡನೇ ಹಂತದ ಯೋಜನೆಯಲ್ಲಿ ಹೊರಬರುವ ಚಿನ್ನದ ನಾಣ್ಯಗಳು ಭಾರತೀಯ ಅಂಚೆಯ ಚಿಹ್ನೆಯನ್ನ್ನು ಹೊಂದಿರುತ್ತ್ತವೆ. ಭಾರತದ ಅಂಚೆ ಕಚೇರಿಗಳು ನಂಬಿಕೆಗೆ, ವಿಶ್ವಾಸಾರ್ಹತೆಗೆ ಹೆಸರಾಗಿದ್ದು ಇವು ಉತ್ತಮ ಗುಣಮಟ್ಟದ ಚಿನ್ನದ ನಾಣ್ಯಗಳ ಮಾರಾಟ ಕೇಂದ್ರಗಳಾಗುವುದರಲ್ಲಿ ಸಂಶಯವಿಲ್ಲ. ಇಲ್ಲಿ ಮಾರಾಟ ಮಾಡುವ ಚಿನ್ನದ ನಾಣ್ಯಗಳು ಸ್ವಿಟ್ಜರ್ ಲ್ಯಾಂಡ್ ನ ಪ್ರಮಾಣ ಪತ್ರವನ್ನು ಪಡೆದಿವೆ ಎಂದು ಸಚಿವರು ವಿವರಿಸಿದರು.

(ಏಜೆನ್ಸೀಸ್)

ಅಂಚೆ ಕಚೇರಿಯಲ್ಲಿ ಟಿಕೆಟ್ ಬುಕಿಂಗ್ ಗೆ ಚಾಲನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X