ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಕ್ಕಿಗಳಿಗೆ ಬೇಕು ಇನ್ ಹೌಸ್ ಕೌನ್ಸ್ ಲಿಂಗ್

By ಮೃತ್ಯುಂಜಯ ಕಲ್ಮಠ
|
Google Oneindia Kannada News

ಬೆಂಗಳೂರು, ಅ. 15 : ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ಮಾಹಿತಿ ತಂತ್ರಜ್ಞಾನದ ನೆಲೆವೀಡು. ಸಾವಿರಾರು ತಂತ್ರಜ್ಞರಿಗೆ ಭವ್ಯವಾದ ಬದುಕನ್ನು ರೂಪಿಸಿಕೊಟ್ಟ ಹೆಗ್ಗಳಿಕೆಗೆ ಗಾರ್ಡನ್ ಸಿಟಿ ಪಾತ್ರವಾಗಿದೆ. ದೇಶದ ವಿವಿಧ ಭಾಗದ ತಂತ್ರಜ್ಞರು ನಗರದಲ್ಲಿ ಉದ್ಯೋಗ ಪಡೆದು ಉತ್ತಮ ಜೀವನ ನಡೆಸುತ್ತಿದ್ದಾರೆ. ಎಲ್ಲವೂ ಸರಿ ಆದರೆ, ಕಳೆದ ಎರಡು ತಿಂಗಳಿನಿಂದ ವಿವಿಧ ಕಾರಣಗಳಿಗಾಗಿ ಟೆಕ್ಕಿಗಳು ಪ್ರಾಣ ಕಳೆದುಕೊಳ್ಳುತ್ತಿರುವುದು ಇಲ್ಲಿ ಏನೋ ಎಡವಟ್ಟಾಗಿದೆ ಎಂಬ ಸೂಚನೆಗಳನ್ನು ಕೊಡುತ್ತಿದೆ.

ಇತ್ತೀಚೆಗೆ ಐಟಿ ವಲಯದ ತಂತ್ರಜ್ಞರು ಮಾನಸಿಕ ಒತ್ತಡವನ್ನು ಸಹಿಸಲಾಗದೇ ಸಾವಿಗೆ ಶರಣಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಮೈಸೂರು ಇನ್ಫಿಯ ಸಾಫ್ಟ್ ವೇರ್ ಉದ್ಯೋಗಿ ಪೂಜಾ ಪಟೇಲ್, ಇದರ ಬೆನ್ನಲ್ಲೇ ಸಾವನ್ನಪ್ಪಿದ ಹೆಚ್ ಪಿ ಕಂಪೆನಿಯ ಉದ್ಯೋಗಿ ಕೃಷ್ಣಬಾಬು, ಹಿರಿಯ ಸಹ ಉದ್ಯೋಗಿಗಗಳ ಕಿರುಕುಳ ತಾಳಲಾರದೆ ನೋಕಿಯಾ ಕಂಪನಿಯ ಸೋನಿ ನೇಣಿಗೆ ಶರಣಾಗಿರುವುದು, ಐಬಿಎಂ ಉದ್ಯೋಗಿ ಮನೋಜ್ ಕುಮಾರ್ ಅವರ ಕೊಲೆ. ಇದೀಗ ಈ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದ್ದು, ನಗರದ ಎಲೆಕ್ಟ್ರಾನಿಕ್ಸ್ ಸಿಟಿಯ ಸತ್ಯಂ ಕಂಪನಿಯ ಉದ್ಯೋಗಿ ಅಭಯಸಿಂಗ್ (25) ಪರಪ್ಪನ ಅಗ್ರಹಾರದ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ. ಅಭಯಸಿಂಗ್ ಜಾರ್ಖಂಡ್ ರಾಜ್ಯಕ್ಕೆ ಸೇರಿದವನಾಗಿದ್ದು, ಅಲ್ಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪುತ್ರ ಎನ್ನಲಾಗಿದೆ.

ಎಲೆಕ್ಟ್ರಾನಿಕ್ ಸಿಟಿ ಎರಡನೇ ಹಂತದಲ್ಲಿ ಮೂವರು ಸ್ನೇಹಿತರ ಜತೆ ಪೇಯಿಂಗ್ ಗೆಸ್ಟ್ ಹೋಂನಲ್ಲಿ ಅಭಯ್ ವಾಸಿಸುತ್ತಿದ್ದ. ಮನೆಯೊಳಗಿನ ಕಬ್ಬಿಣದ ತೊಲೆಗೆ ಎರಡು ಬೆಲ್ಟ್ ಜೋಡಿಸಿ ಆಭಯ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಗೆ ಪ್ರೇಮ ವೈಫಲ್ಯ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪೋಷಕರಲ್ಲಿ ಆತಂಕ

ಉನ್ನತ ವಿದ್ಯಾಭ್ಯಾಸ ಮಾಡಿ ಉತ್ತಮ ಉದ್ಯೋಗ ಹಾಗೂ ಸಂಬಳ ಪಡೆಯುತ್ತಿರುವ ಕಿರಿಯ ವಯಸ್ಸಿನ ಟೆಕ್ಕಿಗಳು ಹೀಗೆ ಅಹ್ಮಹತ್ಯೆ ಮಾಡಿಕೊಳ್ಳುತ್ತಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೆಲಸದಲ್ಲಿನ ಒತ್ತಡ ಆತ್ಮಹತ್ಯೆಗೆ ಪ್ರೇರೇಪಿಸುತ್ತದೆ ಎನ್ನುವುದಾದರೆ ಮಕ್ಕಳಿಗೆ ಸಾಲ ಸೋಲ ಮಾಡಿ ಉನ್ನತ ಶಿಕ್ಷಣ ಕೊಡಿಸಿ ಸಾಫ್ಟವೇರ್ ನಂಥ ಉದ್ಯೋಗದಂಥ ಕೆಲಸ ಏಕೆ ಕೊಡಿಸಬೇಕು ಎನ್ನುತ್ತಾರೆ ಮಡಿವಾಳ ನಿವಾಸಿ ದೊಡ್ಡ ನರಸಯ್ಯ. ಪುತ್ರ ಪುತ್ರಿಯರ ಮೇಲೆ ಅನೇಕ ಆಸೆ ಕನಸುಗಳನ್ನು ಇಟ್ಟಿಕೊಂಡಿರುವ ತಂದೆ ತಾಯಿಗಳು ಈ ಆಘಾತಕಾರಿ ಬೆಳವಣಿಗೆಯಿಂದ ನಿಜಕ್ಕೂ ಚಿಂತಿತರಾಗಿರುವುದು ಸುಳ್ಳಲ್ಲ ಎನ್ನುವುದೂ ಅವರ ಅನಿಸಿಕೆ.

ಟೆಕ್ಕಿಗಳಿಗೆ ಕೆಲಸದ ಜೊತೆಗೆ ಮಾನಸಿಕವಾಗಿ ಸಧೃಡಗೊಳಿಸುವ ಕೆಲಸ ಶೀಘ್ರದಲ್ಲಿ ಆಗಬೇಕಿದೆ. ಕಂಪನಿಯ ಹಿರಿಯ ಅಧಿಕಾರಿಗಳು ಈ ಬಗ್ಗೆ ಕೂಡಲೇ ಗಮನ ಹರಿಸಿಬೇಕು. ಕ್ಷಣ ಕಾಲ ಯೋಚಿಸದೆ ತಂತ್ರಜ್ಞರ ಪ್ರಾಣ ಕಳೆದುಕೊಳ್ಳುತ್ತಿರುವುದು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಖಂಡಿತಾ ಇದೆ. ವಿಪರೀತ ಸಾಲ ಮಾಡಿದ ರೈತ ವಿಷ ಕುಡಿದು ಸಾವನ್ನಪ್ಪುವುದು ಮಾಮೂಲಾದ ಸಂಗತಿಯಾಗಿತ್ತು. ಇದೀಗ ಉನ್ನತ ವ್ಯಾಸಂಗ ಮಾಡಿರುವ ಟೆಕ್ಕಿಗಳು ಜೀವ ಕಳೆದುಕೊಳ್ಳತ್ತಿರುವುದನ್ನು ಕಳವಳಕಾರಿಯಾಗಿದೆ. ಕಂಪನಿಯ ಮಾಲೀಕರು ತಮ್ಮ ಉದ್ಯೋಗಿಗಳ ಕಳವಳದ ಬಗೆಗೆ ಚಿಂತಿಸುವ ಒಂದು ಇನ್ ಹೌಸ್ ವರ್ಕ್ ಶಾಪ್ ಆರಂಭಿಸಿದರೆ ಒಳಿತು.

(ದಟ್ಸ್ ಕನ್ನಡ ವಾರ್ತೆ)

ನಗರದಲ್ಲಿ ಮತ್ತೊಬ್ಬ ವಿರಕ್ತ ಟೆಕ್ಕಿ ಆತ್ಮಹತ್ಯೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X