ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

850 ನೌಕರರಿಗೆ ಪಿಂಕ್ ಸ್ಲಿಪ್ ನೀಡಿದ ಜೆಟ್ ಏರ್

By Staff
|
Google Oneindia Kannada News

ಮುಂಬೈ, ಅ.15: ಭಾರತೀಯ ವಿಮಾನಯಾನ ಕ್ಷೇತ್ರ ಹಿಂದೆಂದೂ ಕಂಡರಿಯದಂತಹ ಸಿಬ್ಬಂದಿ ಕಡಿತಕ್ಕೆ ಕೈಹಾಕಿದೆ. ಬುಧವಾರದಿಂದ (ಅ.15) ಸಿಬ್ಬಂದಿಯನ್ನು ಹೊರ ಕಳುಹಿಸುವ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಜೆಟ್ ಏರ್ ವೇಸ್ ಗೆ ಸೇರಿದ 850 ಮಂದಿ ಕ್ಯಾಬಿನ್ ಸಿಬ್ಬಂದಿಗೆ ಈ ದಿನ ಕರಾಳ ದಿನ. ಏಕೆಂದರೆ ಅಷ್ಟು ಮಂದಿಗೆ ಇಂದು ವಜಾಗೊಂಡ ಪತ್ರ(ಪಿಂಕ್ ಸ್ಲಿಪ್) ಕೈಸೇರಲಿದೆ.

ಜೆಟ್ ಏರ್ ವೇಸ್ ಸಂಸ್ಥೆ ಈಗಾಗಲೇ ತನ್ನ 850 ಕ್ಯಾಬಿನ್ ಸಿಬ್ಬಂದಿಗೆ ಉದ್ಯೋಗದಿಂದ ತೆಗೆಯುತ್ತಿರುವ ಆದೇಶವನ್ನು ಕೊರಿಯರ್ ಮೂಲಕ ರವಾನಿಸಿದೆ. ಮಂಗಳವಾರ ಮುಂಜಾನೆ ಜೆಟ್ ಏರ್ ವೇಸ್ ವಿಮಾನಗಳು ಗಗನಕ್ಕೆ ಚಿಮ್ಮುವ ಮೊದಲೆ ವಿಮಾನಯಾನದ ಬಿಕ್ಕಟ್ಟು ಕ್ಯಾಬಿನ್ ಸಿಬ್ಬಂದಿಯ ಮುಖದಲ್ಲಿ ಆತಂಕ ಹುಟ್ಟಿಸಿತ್ತು.

''ವಿಮಾನಗಳು ಗಗನಕ್ಕೆ ಚಿಮ್ಮುವ 3.30 ಗಂಟೆಗಳ ಮುಂಚೆಯೇ ಸಿಬ್ಬಂದಿಗಳನ್ನು ಕರೆದೊಯ್ಯುವುದಕ್ಕಾಗಿ ಕಚೇರಿಯ ವಾಹನ ಕಳುಹಿಸಲಾಗುತ್ತದೆ. ಆದರೆ ಮಂಗಳವಾರ ಕಚೇರಿ ವಾಹನಕ್ಕಾಗಿ ಕಾದದ್ದೇ ಬಂತು. ಎಷ್ಟು ಹೊತ್ತಾದರೂ ವಾಹನ ಬರದಿದ್ದನ್ನು ಕಂಡು ಕಚೇರಿಗೆ ಫೋನಾಯಿಸಿದೆ. ಅತ್ತಕಡೆಯ ಧ್ವನಿ '' ಮುಂದಿನ ಸೂಚನೆ ಬರುವವರೆಗೂ ನಿಮ್ಮನ್ನು ಕೆಲಸದಿಂದ ತೆಗೆಯಲಾಗಿದೆ'' ಎಂದು ಹೇಳಿ ನಮ್ಮ ಜಂಘಾಬಲವನ್ನೆ ಉಡುಗಿಸಿತು'' ಎಂದು ಸಿಬ್ಬಂದಿಯೊಬ್ಬರು ಅಲವತ್ತುಕೊಂಡರು.

ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿರುವ ಜೆಟ್ ಏರ್ ವೇಸ್ ವಕ್ತಾರರು, ಒಂದಷ್ಟು ಮಂದಿ ಸಿಬ್ಬಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಯಾನ ಸಂಖ್ಯೆಯಲ್ಲಿ ಕಡಿತ ಉಂಟಾಗಿದೆ. ನಮ್ಮ ಬೇಡಿಕೆಗೆ ತಕ್ಕಂತೆ ಸಿಬ್ಬಂದಿಯನ್ನು ಹೊಂದಿಸಿಕೊಳ್ಳಬೇಕಾಗಿದೆ. ಹಾಗಾಗಿ ಕಾಯಂಗೊಂಡಿಲ್ಲದ ನೌಕರರನ್ನು ಕೆಲಸದಿಂದ ತೆಗೆಯುತ್ತ್ತಿರುವುದಾಗಿ ಜೆಟ್ ಏರ್ ವೇಸ್ ನ ವಕ್ತಾರರು ವಿವರಿಸಿದ್ದಾರೆ.

ಜೆಟ್ಏರ್ ವೇಸ್ ನ ಮುಂಬೈ ಶಾಖೆಯಲ್ಲಿ 1,903 ಮಂದಿ ಕ್ಯಾಬಿನ್ ಸಿಬ್ಬಂದಿ ಇದ್ದಾರೆ. ಇವರಲ್ಲಿ 850 ಮಂದಿ ಪ್ರೊಬೇಷನ್ ನಲ್ಲಿರುವವರು. ಕೆಲಸ ಕಳೆದುಕೊಂಡವರಲ್ಲಿ ಶೇ.60ರಷ್ಟು ಮಂದಿ ಹೆಣ್ಣು ಮಕ್ಕಳು.

(ಏಜೆನ್ಸೀಸ್)

ಜಾಗತಿಕ ಐಟಿ ಕ್ಷೇತ್ರದಲ್ಲಿ 'ಪಿಂಕ್ ಸ್ಲಿಪ್ ಮೇಳ'
ಒಂದು ಸಾವಿರ ನೌಕರರಿಗೆ ಗೇಟ್ ಪಾಸ್ ಕೊಟ್ಟ ವಿಪ್ರೊ
ಸಿಇಓ ಯಮಧರ್ಮರಾಯನ ಪಿಂಕ್ ಸ್ಲಿಪ್ ಪುರಾಣ
ಪ್ರಬಂಧ : ಸಂಜೀವನ ಪಿಂಕ್ ಸ್ಲಿಪ್ ಪ್ರಸಂಗ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X