ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ಧಗಂಗಾ ಶ್ರೀಗಳಿಗೆ 'ಭಾರತರತ್ನ' ಪ್ರಶಸ್ತಿ ನೀಡಿ

By Staff
|
Google Oneindia Kannada News

ಮೈಸೂರು, ಅ. 15 : ತ್ರಿವಿಧ ದಾಸೋಹಿಗಳು, ತುಮಕೂರು ಸಿದ್ಧಗಂಗಾ ಮಠಾಧ್ಯಕ್ಷರೂ ಆದ ಕರ್ನಾಟಕ ರತ್ನ ಡಾ. ಶ್ರೀ ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ಬಸವ ಸಂಘ ಬಳಗಗಳು ಹಾಗೂ ವೀರಶೈವ ಸಂಘ ಸಂಸ್ಥೆಗಳು ಒಕ್ಕೂಟ ಶಿವಕುಮಾರ ಸ್ವಾಮಿಗಳಿಗೆ ಹಮ್ಮಿಕೊಂಡಿದ್ದ 'ಗುರುವಂದನಾ' ಕಾರ್ಯಕ್ರಮದಲ್ಲಿ ಅಭಿವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಬಸವಣ್ಣವರ ಆದರ್ಶಗಳನ್ನು 20 ಮತ್ತು 21ನೇ ಶತಮಾನದಲ್ಲಿ ಅನುಷ್ಠಾನಗೊಳಿಸಿದ ಕೀರ್ತಿ ಶಿವಕುಮಾರಸ್ವಾಮಿಗಳಿಗೆ ಸಲ್ಲುತ್ತದೆ. ಇಂಥ ಮಹಾನ್ ಸಾಧಕರೊಂದಿಗೆ ಜೀವಿಸುತ್ತಿರುವ ನಾವುಗಳು ಪುಣ್ಯವಂತರು ಎಂದು ಬಿಗಿದರು. ಇಂಥ ಶ್ರೇಷ್ಠ ಶರಣರಿಗೆ 'ಭಾರತರತ್ನ' ಪ್ರಶಸ್ತಿ ನೀಡುವಂತೆ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಸಿದ್ಧಗಂಗಾ ಮಠದಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಸರ್ಕಾರ 10 ಕೋಟಿ ರುಪಾಯಿ ನೆರವು ನೀಡಿದೆ ಎಂದು ಯಡಿಯೂರಪ್ಪ ಘೋಷಿಸಿದರು.

ಅಮೆರಿಕದಲ್ಲಿ ಉಂಟಾಗಿರುವ ಅರ್ಥಿಕ ದಿವಾಳಿತನ ಭಾರತಕ್ಕೂ ಪ್ರವೇಶಿಸುವ ಸಾಧ್ಯತೆಗಳಿವೆ. ಅಲ್ಲಿನ ಕೋಟ್ಯಾಧಿಪತಿಗಳು ಬೀದಿ ಪಾಲಾಗಿದ್ದಾರೆ. ಬ್ಯಾಂಕುಗಳು ದಿವಾಳಿ ಅಂಚಿನಲ್ಲಿವೆ. ಶ್ರೀಮಂತ ರಾಷ್ಟ್ರದಲ್ಲಿ ಬೀಸುತ್ತಿರುವ ಆರ್ಥಿಕ ದಿವಾಳಿತನದ ಕರ್ನಾಟಕ ಪ್ರವೇಶಿಸದಂತೆ ಆರ್ಥಿಕ ತಜ್ಞರೊಡನೆ ಸಮಾಲೋಚನೆ ಆರಂಭಿಸಿದ್ದೇನೆ ಎಂದು ಅವರು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಮನ್ಸ್ ಜಾರಿ
850 ನೌಕರರಿಗೆ ಪಿಂಕ್ ಸ್ಲಿಪ್ ನೀಡಿದ ಜೆಟ್ ಏರ್
ದಸರಾಕ್ಕೆ ಶೋಭೆ ತಂದ ಉಸ್ತುವಾರಿ ಸಚಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X