ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಯಾಗದಿದ್ದರೂ ಮಹಿಳೆಗೆ ಪತ್ನಿಯ ಸ್ಥಾನ!

By Staff
|
Google Oneindia Kannada News

ಮುಂಬೈ, ಅ.10: ಹೆಣ್ಣು ಗಂಡಿನ ಸಂಬಂಧಗಳಿಗೆ ಕಾನೂನು ಚೌಕಟ್ಟಿನಲ್ಲಿ ಕಂಕಣ ತೊಡಿಸುವ ದಿಶೆಯಲ್ಲಿ ಮಹಾರಾಷ್ಟ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಮದುವೆಯಾಗದೆ ಸ್ತ್ರೀ, ಪುರುಷರು ಜೊತೆಯಾಗಿ ಕೆಲ ಕಾಲ ಸಹಬಾಳ್ವೆ ನಡೆಸಿದರೆ ಅಂತಹ ಸ್ತ್ರೀಯರಿಗೆ ಪತ್ನಿಯ ಸ್ಥಾನಮಾನ ನೀಡಬೇಕೆಂದು ನ್ಯಾಯಮೂರ್ತಿ ಮಳಿಮಠ್ ಸಮಿತಿ ಸಲ್ಲಿಸಿದ ವರದಿಗೆ ಮಹಾರಾಷ್ಟ್ರ ಸರ್ಕಾರ ಹಸಿರು ನಿಶಾನೆ ತೋರಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್ ಮುಖ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಮಾವೇಶದಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಸಿಆರ್ ಪಿಸಿ ಸೆಕ್ಷನ್125ನ್ನು ತಿದ್ದುಪಡಿ ಮಾಡಿ 'ಪುರುಷನೊಂದಿಗೆ ಒಂದು ನಿರ್ದಿಷ್ಟ ಕಾಲದವರೆಗೆ ಜೀವಿಸುವ ಸ್ತ್ರೀಯರಿಗೆ' ಪತ್ನಿಯ ಸ್ಥಾನ ಮಾನ ನೀಡಬೇಕು ಎಂದು ನಿರ್ಧರಿಸಲಾಯಿತು. ಹಾಗೆಯೇ, ಅಂತಹ ಸ್ತ್ರೀಯರಿಗೆ ಪುರುಷನಾದವನು ಜೀವನಾಂಶ ಕೊಡಬೇಕೆಂದು ನಿರ್ಣಯವನ್ನು ಅಂಗೀಕರಿಸಲಾಯಿತು.

ಸಿಆರ್ ಪಿಸಿ ಸೆಕ್ಷನ್ 125ರ ಪ್ರಕಾರ ಪತಿ ಪತ್ನಿಯರಿಗೆ ಸಂಬಂಧಿಸಿದಂತೆ ಕಾನೂನು ರೀತ್ಯಾ ಏನೆಲ್ಲಾ ಸೌಲಭ್ಯಗಳಿವೆಯೋ ಅವೆಲ್ಲವೂ ಮದುವೆಯಾಗದೆ ಕೆಲಕಾಲ ಸಹಬಾಳ್ವೆ ನಡೆಸುವ ಸ್ತ್ರೀ, ಪುರುಷರಿಗೂ ಅನ್ವಯಿಸುವಂತೆ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮಹಾರಾಷ್ಟ್ರ ಸರ್ಕಾರದ ಈ ಪ್ರತಿಪಾದನೆಗೆ ರಾಷ್ಟ್ರಪತಿಗಳ ಒಪ್ಪಿಗೆ ಮಾತ್ರ ಬಾಕಿ ಇದೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಸಮಿತಿಯ ಶಿಫಾರಸನ್ನು ಕಳುಹಿಸಿ ಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X