ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಾರ ತೊಡಲು ಸಕಾಲ, ಕೊಳ್ಳಲು ಕಷ್ಟಕಾಲ

By Staff
|
Google Oneindia Kannada News

Gold price soars and rupee hits lowನವದೆಹಲಿ, ಅ. 10 : ಭಾರತದಲ್ಲಿ ಈಗ ಭರ್ಜರಿ ಮದುವೆ ಸೀಸನ್, ಅದಲ್ಲದೆ ನವರಾತ್ರಿ, ದೀಪಾವಳಿ ಹಬ್ಬಗಳ ಸರಣಿ ಬೇರೆ. ಹಬ್ಬ, ಮದುವೆ, ಮುಂಜಿಗಳಲ್ಲಿ ಹೆಂಗಳೆಯರಿಗೆ ಮಣಭಾರ ಬಂಗಾರ ತೊಟ್ಟು ಮೆರೆಯಲು ಸಕಾಲ. ಆದರೆ, ಕೊಂಡುಕೊಳ್ಳಲು ಕಷ್ಟಕಾಲ, ಮಧ್ಯಮ ವರ್ಗದವರಿಗೆ! ಎಂಥ ವಿಪರ್ಯಾಸ ನೋಡಿ.

ಭಾರತೀಯ ಷೇರುಪೇಟೆಯಲ್ಲಿ ರುಪಾಯಿ ತೀವ್ರ ಕುಸಿತ ಕಂಡಿರುವ ಬೆನ್ನಲ್ಲೇ ಚಿನ್ನ ಕೈಗೆಟುಕದ ಬೆಲೆಗೆ ಏರಿ ಕುಳಿತಿದೆ. ದೆಹಲಿ ಷೇರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ 10ಗ್ರಾಂಗೆ 14 ಸಾವಿರದ ಗಡಿ ದಾಟಿ ದಿನದ ಕೊನೆಗೆ ರು.14,075ಕ್ಕೆ ಬಂದು ನಿಂತಿದೆ. ಹಬ್ಬದ ಸಮಯದಲ್ಲಿ ಚಿನ್ನಕ್ಕಿರುವ ಭಾರೀ ಬೇಡಿಕೆಯೂ ಬಂಗಾರದ ಬೆಲೆ ತೀವ್ರವಾಗಿ ಏರಲು ಕಾರಣವಾಗಿದೆ ಎಂಬುದು ಪಂಡಿತರ ಲೆಕ್ಕಾಚಾರ.

ಚಿನ್ನಕ್ಕೆ ಯಾವತ್ತಿದ್ದರೂ ಬೆಲೆ ಇರುವುದರಿಂದ ಜನರೂ ಚಿನ್ನದ ಬೇಟೆಗೆ ಮುಗಿಬಿದ್ದಿದ್ದಾರೆ. ಮುಂದೆ ಇನ್ನಷ್ಟು ಏರಬಹುದೆಂಬ ಆತಂಕವೂ ಬಂಗಾರವನ್ನು ಮತ್ತಷ್ಟು ಖರೀದಿಸಲು ಜನರನ್ನು ಪ್ರೇರೇಪಿಸುತ್ತಿದೆ. ಪರಿಣಾಮ, ಚಿನ್ನ ಬಡವರ ಕೈಗೆಟುಕದಂತೆ ಮೇಲೇರಿ ಕುಳಿತಿದೆ. ಮಧ್ಯಮ ವರ್ಗದವರು ಕೂಡ ಗತ್ಯಂತರವಿಲ್ಲದೆ ಹೆಚ್ಚು ಹಣ ತೆತ್ತು ಚಿನ್ನ ಕೊಳ್ಳಬೇಕಾಗಿದೆ.

(ಏಜೆನ್ಸೀಸ್)

ಫೂರಕ ಓದಿಗೆ
ಡಾಲರ್ ಎದಿರು ದಾಖಲೆ ಕುಸಿತ ಕಂಡ ರುಪಾಯಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X