ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ಹಿಟ್ ಲಿಸ್ಟ್ ನಲ್ಲಿ ಬಿಜಾಪುರ, ಆಲಮಟ್ಟಿ

By Staff
|
Google Oneindia Kannada News

ಬಿಜಾಪುರ, ಸೆ. 28 : ಅಹಮದಾಬಾದ್ ಬಾಂಬ್ ಸ್ಫೋಟದ ಆರೋಪಿ ಮೊಹ್ಮದ್ ಹಫೀಜ್ ಎಂಬಾತ ಬಿಜಾಪುರದೊಂದಿಗೆ ನಂಟು ಹೊಂದಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಬಾಂಬ್ ಸ್ಫೋಟಕ್ಕೆ ಬಳಸಲು ತಂದಿಡಲಾಗಿತ್ತು ಎನ್ನಲಾದ ಬೈಕ್ ಅನ್ನು ಬೆಂಗಳೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಿಷೇಧಿತ ಸಿಮಿ ಸಂಘಟನೆಯೊಂದಿಗೆ ಒಡನಾಟ ಹೊಂದಿದ ಆರೋಪದ ಮೇಲೆ ಈಗಾಗಲೇ ಬೆಂಗಳೂರು ಪೊಲೀಸರ ವಶದಲ್ಲಿರುವ ನಗರದ ವಿಧ್ಯಾರ್ಥಿ ಈ ಅಚ್ಚರಿದಾಯಕ ಮಾಹಿತಿ ನೀಡಿದ್ದಾನೆ ಎಂದು ಮೂಲಗಳಉ ತಿಳಿಸಿವೆ. ಶುಕ್ರವಾರ ಈ ವಿಧ್ಯಾರ್ಥಿಯನ್ನು ಕರೆದುಕೊಂಡು ಬಿಜಾಪುರಕ್ಕೆ ಆಗಮಿಸಿದ್ದ ಬೆಂಗಳೂರು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿ, ಬಿಜಾಪುರ ಬಸ್ ನಿಲ್ದಾಣದ ದ್ವಿಚಕ್ರ ವಾಹನ ನಿಲುಗಡೆ ಸ್ಥಳದಲ್ಲಿ ಬಜಾಜ್ ಪಲ್ಸರ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಮೊಹ್ಮದ್ ಹಫೀಜ್ ಎಂಬಾತ ನಾಲ್ಕು ತಿಂಗಳ ಹಿಂದೆ ಈ ಬೈಕನ್ನು ಮಹಾರಾಷ್ಟ್ರದಿಂದ ಬಿಜಾಪುರಕ್ಕೆ ತಂದು ಬಿಟ್ಟು ಹೋಗಿದ್ದ ಎಂದು ಈ ವಿಧ್ಯಾರ್ಥಿ ಮಾಹಿತಿ ನೀಡಿದ್ದಾಗಿ ಉನ್ನತ ಮೂಲಗಳು ತಿಳಿಸಿವೆ. ಈ ಬೈಕ್ ಮಹಾರಾಷ್ಟ್ರದ ನೋಂದಣಿ ಸಂಖ್ಯೆಯನ್ನು ತಿರುಚಿ ಕೆಎಂ-29 ಎಂದು ನಕಲಿಯಾಗಿ ಬರೆದಿದ್ದರು. ಬಾಂಬ್ ಸ್ಫೋಟಕ್ಕೆ ಈ ಬೈಕ್ ಬಳಸುವ ಉದ್ದೇಶ ಅವರದ್ದಾಗಿರಬಹುದು ಎಂದು ಶಂಕಿಸಲಾಗಿದ್ದು, ಈ ಉಗ್ರರ ಹಿಟ್ ಲಿಸ್ಟ್ ನಲ್ಲಿ ಬಿಜಾಪುರ ಮತ್ತು ಆಲಮಟ್ಟಿ ಜಲಾಶಯ ಇದ್ದವು ಎನ್ನಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X