ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಸ್ಫೋಟ, ಇಬ್ಬರು ಶಂಕಿತರ ಬಂಧನ

By Staff
|
Google Oneindia Kannada News

ನವದೆಹಲಿ, ಸೆ.28: ದಕ್ಷಿಣ ದೆಹಲಿಯ ಮೆಹ್ರೋಲಿಯಲ್ಲಿ ಶನಿವಾರ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಲ್ಲಿ ನಾನಕ್ ಚಂಚ್ ಎಂಬಾತ ಉತ್ತರ ಪ್ರದೇಶದ ಆಲಿಗರ್ ಗೆ ಸೇರಿದವನಾಗಿದ್ದು ಮತ್ತೊಬ್ಬ ಹರ್ಯಾಣದ ಬಲ್ಲಾಭ್ ಗರ್ ಗೆ ಸೇರಿದವನಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಾಗೆಯೇ ದೆಹಲಿಯ ಸಂಗ್ರಾಮ್ ವಿಹಾರ್ ಪ್ರದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 12 ಮಂದಿ ಬಾಂಗ್ಲಾ ದೇಶೀಯರನ್ನು ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಬಂಧಿತ ಬಾಂಗ್ಲಾ ಮೂಲದವರ ಕೈವಾಡ ಇರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ದೆಹಲಿ ಬಾಂಬ್ ಸ್ಫೋಟಕ್ಕೆ ದ್ವಿಚಕ್ರ ವಾಹನವನ್ನ್ನು ಬಳಸಲಾಗಿತ್ತು. ದ್ವಿಚಕ್ರ ವಾಹನದಲ್ಲಿ ಬಂದ ಆಗಂತುಕರು ಸುಮಾರು 20 ವರ್ಷ ವಯಸ್ಸಿನರಾಗಿದ್ದು ಮೆಹ್ರೋಲಿಯಿಂದ ಎಂಜಿ ರಸ್ತೆ ಕಡೆಗೆ ಓಡಿ ಹೋದರು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಪೊಲೀಸರು ಈ ವಿವರಗಳನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ.

ಇನ್ನೇನು ದೇಶದಲ್ಲಿ ಹಬ್ಬಗಳ ಸಂಭ್ರಮ ಶುರುವಾಗಲಿದ್ದು ಧಾರ್ಮಿಕ ಸ್ಥಳಗಳು ಹಾಗೂ ದೇವಸ್ಥಾನಗಳಿಗೆ ಬಿಗಿ ಭದ್ರತೆಯನ್ನು ಪೊಲೀಸರು ಹೆಚ್ಚಿಸಿದ್ದಾರೆ. ಈ ಬಾರಿ ಪೊಲೀಸರು ಖಾಕಿ ವಸ್ತ್ರಗಳನ್ನು ತೆಗೆದಿಟ್ಟು ಮುಫ್ತಿಯಲ್ಲಿ ಹೊಂಚು ಹಾಕಲಿದ್ದಾರೆ. ಭದ್ರತಾ ಏಜೆನ್ಸೀಗಳು ಸ್ವಯಂಸೇವಕರನ್ನು ನೇಮಿಸಿಕೊಳ್ಳಲು ಚಿಂತಿಸಿವೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X