ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಘಾತಕ್ಕೆ ಚಾಲಕರ ಮಾನಸಿಕ ಒತ್ತಡವೇ ಕಾರಣ

By Staff
|
Google Oneindia Kannada News

ಬೆಂಗಳೂರು, ಸೆ.26: ಬಹಳಷ್ಟು ರಸ್ತೆ ಅಪಘಾತಗಳಿಗೆ ಚಾಲಕರ ಮಾನಸಿಕ ಒತ್ತಡವೂ ಒಂದು ಕಾರಣ ಎಂದು ಕರ್ನಾಟಕ ಉಚ್ಫ ನ್ಯಾಯಾಲಯದ ನ್ಯಾಯಮೂರ್ತಿ ರಾಮಮೋಹನ್ ರೆಡ್ಡಿ ಅಭಿಪ್ರಾಯಪಟ್ಟರು.

ಬೆಂಗಳೂರು ನಗರ ಕಾನೂನು ಸೇವಾ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕೇಂದ್ರ ಕಚೇರಿಯ ಸಹಯೋಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಮೋಟಾರು ವೆಹಿಕಲ್ ಕ್ಲೇಮ್ಸ್ ಕುರಿತ ಎರಡು ದಿನದ ಕಾರ್ಯಾಗಾರವನ್ನು ಉದ್ಫಾಟಿಸಿ ಅವರು ಮಾತನಾಡುತ್ತಿದ್ದರು.ಇಂದಿನ ದಿನಗಳಲ್ಲಿ ಪ್ರತಿಯೊಂದು ಕೆಲಸದಲ್ಲೂ ಒತ್ತಡ ಇರುತ್ತದೆ. ಅಪಘಾತಗಳಿಗೆ ಮಾನಸಿಕ ಒತ್ತಡವೂ ಒಂದು ಕಾರಣವೆಂದು ವೈಜ್ಞಾನಿಕವಾಗಿ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಚಾಲಕರಿಗೆ ಮನೋವೈದ್ಯರಿಂದ ಸಲಹೆ ಸೂಚನೆಗಳನ್ನು ಸಂಸ್ಥೆಯು ಕೊಡಿಸಬೇಕೆಂದು ಸಲಹೆ ಮಾಡಿದರು.

ಮೋಟಾರು ವೆಹಿಕಲ್ ಕ್ಲೇಮ್ಸ್‌ನಲ್ಲಿ ಮೃತರ ಸಂಬಂಧಿಕರು, ಗಾಯಾಳುಗಳು ಹಾಗೂ ಮುಗ್ಥಜನರು ಸೇರಿರುವುದರಿಂದ ಅಧಿಕಾರಿಯಾದವರು ಮಾನವೀಯ ದೃಷ್ಟಿಯಿಂದ ಕೇಸನ್ನು ಕೂಡಲೇ ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಅಭಿಪ್ರಾಯ ಪಟ್ಟರು.ಅಪಘಾತಗಳಾದ ನಂತರ ಕ್ಲೇಮ್ಸ್‌ಗಳಿಗೆ ಹಣ ವ್ಯರ್ಥಮಾಡುವ ಬದಲು ಚಾಲಕರಿಗೆ ಸಾರಿಗೆ ನೀತಿ ನಿಯಮ ಪಾಲನೆಗಳ ಬಗ್ಗೆ ಕಾರ್ಯಾಗಾರವನ್ನು ನಡೆಸುವ ಮೂಲಕ ನಮ್ಮ ಚಾಲಕರನ್ನು ತರಬೇತಿಗೊಳಿಸಿ ಅಪಘಾತಗಳಾಗುವುದನ್ನು ತಡೆಯಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿದೇಶದ ಸಾರಿಗೆ ನೀತಿಯನ್ನು ವಿವರಿಸಿದ ಅವರು ದುಬೈ ಹಾಗೂ ಅಮೆರಿಕಾ ದೇಶದಲ್ಲಿ ಸಾರಿಗೆ ನಿಯಮ ಪಾಲಿಸದವರ ಲೈಸನ್ಸ್ ರದ್ದುಪಡಿಸಲಾಗುತ್ತದೆ. ಅದೇ ರೀತಿಯಲ್ಲಿ ನಮ್ಮ ದೇಶದಲ್ಲೂ ಸಾರಿಗೆ ನೀತಿಯನ್ನು ಕಠಿಣಗೊಳಿಸಬೇಕಾಗಿದೆ ಎಂದರು.ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ನ್ಯಾಯಮೂರ್ತಿ ಹೆಚ್. ಎಸ್. ಕೆಂಪಣ್ಣನವರು ಮಾತನಾಡಿ ನಿರ್ಲಕ್ಷ್ಯದಿಂದ ಅಪಘಾತಗಳು ಸಂಭವಿಸುತ್ತವೆ ಹಾಗಾಗಿ ನಮ್ಮ ಗ್ರಹಿಕೆಯನ್ನು ಉನ್ನತಮಟ್ಟಕ್ಕೆ ಹೆಚ್ಚಿಸಿಕೊಳ್ಳಲು ಇಂತಹ ತರಬೇತಿಗಳು ಪೂರಕ ಎಂದರು.

ಕಾರ್ಯಾಗಾರದ ಅಧ್ಯಕ್ಷತೆವಹಿಸಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಗೌರವ ಗುಪ್ತಾ ಅವರು ಮಾತನಾಡಿ ಕರ್ನಾಟಕದಲ್ಲಿ ಅಪಘಾತಗಳ ಸಂಖ್ಯೆ ಇಳಿಮುಖವಾಗಿದೆ. ದಾಖಲಾದ ಮೊಕದ್ದಮೆಗಳನ್ನು ಪೊಲೀಸರು, ವೈದ್ಯರು, ನ್ಯಾಯಾಧೀಶರಿಂದ ಕೂಲಂಕಷವಾಗಿ ಪರಿಶೀಲಿಸುವ ಮೂಲಕ ಯಾರಿಗೂ ಅನ್ಯಾಯವಾಗದ ಹಾಗೆ ನೋಡಿಕೊಳ್ಳಲಾಗುತ್ತಿದೆ ಹಾಗೂ ಚಾಲಕರುಗಳಿಗೆ ವಿವಿಧ ಹಂತಗಳಲ್ಲಿ ಉತ್ತಮ ರೀತಿಯ ತರಬೇತಿಗಳನ್ನು ನೀಡುತ್ತಿರುವುದಾಗಿ ಅವರು ತಿಳಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಪ್ರಧಾನ ಕಚೇರಿಯ ನಿರ್ದೇಶಕ ಜಿ. ಎಂ. ಹಯಾತ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಹೆಚ್. ವೈ. ವಸಂತಕುಮಾರ್ ಅವರು ಸ್ವಾಗತಿಸಿದರು. ಕೃಷ್ಣಯ್ಯ ಅವರು ವಂದಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X