ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಬ್ಬಿಯಲ್ಲಿ ಚಿದಂಬರ ಪ್ರಶಸ್ತಿ ಪ್ರದಾನ

By ವರದಿ : ಬಿದರೆ ಪ್ರಕಾಶ್
|
Google Oneindia Kannada News

ಗುಬ್ಬಿ, ಸೆ. 23 : ನವಂಬರ್ ಒಂದನೇ ತಾರೀಕಿನೊಳಗೆ ಕನ್ನಡ ಭಾಷೆಗೆ ರಾಷ್ಟ್ರೀಯ ಸ್ಥಾನ ಮಾನ ಸಿಗದೆ ಇದ್ದಲ್ಲಿ ಎಲ್ಲಾ ಮಠಾಧಿಪತಿಗಳೊಂದಿಗೆ ದೆಹಲಿಯಲ್ಲಿ ಧರಣಿ ಸತ್ಯಾಗ್ರಹ ಮಾಡುವುದಾಗಿ ಕೊಳದ ಮಠ ಮಹಾ ಸಂಸ್ಥಾನದ ಡಾ.ಶಾಂತವೀರಮಹಾಸ್ವಾಮಿಗಳು ಎಚ್ಚರಿಸಿದ್ದಾರೆ.

ಪಟ್ಣಣದ ಶ್ರೀ ಚಿದಂಬರ ಆಶ್ರಮದಲ್ಲಿ ನಡೆದ ಶ್ರೀ ಚಿದಂಬರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ತುಮಕೂರು ಜಿಲ್ಲೆಯ ಪಾವಿತ್ರ್ಯತೆಯನ್ನು ಎತ್ತಿಹಿಡಿದ ಕೀರ್ತಿ ಗುಬ್ಬಿ ತಾಲೂಕಿನದು. ಸನಾತನ ಧರ್ಮಕ್ಕೆ ಧಕ್ಕೆ ತರುವಂತ ಪ್ರಸಂಗಗಳು ನಡೆಯುತ್ತಿರುವುದು ವಿಷಾದನೀಯ, ಭಾರತೀಯ ಸನಾತನ ಧರ್ಮದಲ್ಲಿ ಮಿಂದವನು ಬೇರೆ ಯಾವ ಧರ್ಮಕ್ಕೂ ಹೋಗಲಾರ, ಹಿಂದೂ ಸ್ಥಾನದಲ್ಲಿಯೇ ಹಿಂದೂ ಧರ್ಮಕ್ಕೆ ಸ್ಥಾನಮಾನ ಸಿಗದಿರುವುದು ಎಲ್ಲರೂ ಚಿಂತಿಸಲೇಬೇಕಾದ ಸಂಗತಿ ಎಂದು ನುಡಿದರು.

ಶ್ರೀ ಚಿದಂಬರರ ಬಗ್ಗೆ ಉಪನ್ಯಾಸ ನೀಡಿದ ವೇದವಿಧ್ಯವಾರಿಧಿ ಕೆ.ಜೆ.ಸುಬ್ರಾಯಶರ್ಮ ಶ್ರೀ ಚಿದಂಬರರು ಜ್ಞಾನ, ಭಕ್ತಿ ವೈರಾಗ್ಯಗಳ ಸಂಗಮವಾಗಿದ್ದರು, ಜ್ಞಾನದ ಮುಖಾಂತರ ವೇದೋಪನಿಷತ್ತುಗಳನ್ನು ಭೋಧಿಸಿದ ಶ್ರೀ ಚಿದಂಬರರು ಪ್ರಕೃತಿ ಪ್ರಿಯರೂ ಆಗಿದ್ದರು ಎಂದರು.

ಖ್ಯಾತ ನಟ ಶಿವರಾಂ ಮಾತನಾಡಿ ಶರೀರವಿರುವುದೇ ಪರೋಪಕಾರಕ್ಕೆ ಎಂಬುದನ್ನು ಜೀವನದಲ್ಲಿ ಎಲ್ಲರೂ ರೂಢಿಸಿಕೊಳ್ಳಬೇಕು, ಯೋಜನೆಗಳು ಪ್ರಾರಂಭವಾದ ಹಂತದಲ್ಲಿ ಇರುವ ಉತ್ಸಾಹ ಕಡೆಯಗಳಿಗೆಯವರೆಗೂ ಇರಬೇಕು, ಆಶ್ರಮ, ಮಠಗಳಲ್ಲಿ ರಾಜಕೀಯ ಯಾವುದೇ ಕಾರಣದಿಂದ ಪ್ರವೇಶವಾಗಬಾರದು ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಶ್ರೀ ಚಿದಂಬರಾಶ್ರಮ ಟ್ರಸ್ಟ್‌ನ ವಿಶ್ವಸ್ತರಾದ ಡಾ.ಎಸ್.ಎಸ್.ಸಚ್ಚಿದಾನಂದ ಅವರು, ದರಿದ್ರ ನಾರಾಯಣನ ಸೇವೆಯೇ ಆಶ್ರಮದ ಧ್ಯೇಯ ಎಂಬ ಶ್ರೀ ಚಿದಂಬರರ ಆಶಯವನ್ನು ವಿಶ್ವಸ್ತ ಮಂಡಳಿ ಪಾಲಿಸಿಕೊಂಡು ಬರುತ್ತಿದೆ, ಆಶ್ರಮದಲ್ಲಿ ವೇದ ವಿದ್ಯೆಯನ್ನು ಕಲಿತ ಅನೇಕರು ಇಂದು ವಿಶ್ವಮಾನ್ಯರಾಗಿದ್ದಾರೆ, ಆವರೆಲ್ಲರ ಸಹಕಾರ ಹಾಗೂ ಭಕ್ತರ ಸಹಕಾರದಿಂದ ಆಶ್ರಮದಲ್ಲಿ ಇನ್ನೂ ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಶ್ರೀ ಚಿದಂಬರ ಪ್ರಶಸ್ತಿಗೆ ಭಾಜನದ ಆಶ್ರಮದ ಹಳೆಯ ವಿದ್ಯಾರ್ಥಿ ಶ್ರೀ ದೈವಜ್ಞ ಸೋಮಯಾಜಿರವರು ಅವರ ಪಿತೃವಿಯೋಗದ ಕಾರಣ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗೈರು ಹಾಜರಾದ ಕಾರಣ ಅವರ ಪರವಾಗಿ ವೇದ ವಿದ್ಯಾವಾರಿಧಿ ಶ್ರೀ ಸುಬ್ರಾಯ ಶರ್ಮರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶ್ರೀ ಚಿದಂಬರಾಶ್ರಮ ಟ್ರಸ್ಟ್‌ನ ಅಧ್ಯಕ್ಷ ಶಿವಚಿದಂಬರಶರ್ಮ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ನಟಿ ಪವಿತ್ರಲೋಕೇಶ್, ಉದ್ಯಮಿ ಅನಿಲ್‌ಗೋಗಿ, ಅರ್ಚಕ ಮಹಾಸಂಘದ ಅಧ್ಯಕ್ಷ ಶ್ರೀವತ್ಸ ಮತ್ತಿತರರು ಭಾಗವಹಿಸಿದ್ದರು. ಸುಚೇಂದ್ರಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಿಕಾಂತ ವಂದಿಸಿದರು.
ಪೂರಕ ಓದಿಗೆ:
ಸೋಮಯಾಜಿಗಳಿಗೆ ಚಿದಂಬರ ಪ್ರಶಸ್ತಿ ಪ್ರದಾನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X