ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿಗೆ ಶೀಘ್ರದಲ್ಲೇ ವಿವಾಹ ಯೋಗ!

By Staff
|
Google Oneindia Kannada News

Rahul gandhiಭಟಿಂಡಾ, ಸೆ.23: ನೆಹರು ಕುಟುಂಬದ ಕುಡಿ ರಾಹುಲ್ ಗಾಂಧಿಗೆ ವಯಸ್ಸು 38 ದಾಟುತ್ತಿದೆ. ಆದರೆ ಮದುವೆ ಪ್ರಸ್ತಾಪ ಬಂದಾಗಲೆಲ್ಲಾ ಹಾರಿಕೆಯ ಉತ್ತರ ಕೊಟ್ಟು ಜಾರಿಕೊಳ್ಳುತ್ತಿದ್ದರು. ಅವರ ಕೈಹಿಡಿಯುವ ಅದೃಷ್ಟ ಯಾವ ಹುಡುಗಿಗಿದೆ? ಎಂಬುದು ಸಹಜ ಕುತೂಹಲ. ರೋಡ್ ಶೋನಲ್ಲಿ ಭಾಗವಹಿಸಿದ್ದ ಅವರಿಗೆ ನಿಮ್ಮ ಮದುವೆ ಯಾವ್ಯಾಗ? ಎಂಬ ಪ್ರಶ್ನೆ ಬುಲೆಟ್ ನಂತೆ ತೂರಿಬಂತು. ಅದನ್ನು ಖುಷಿಯಾಗಿಯೇ ಸ್ವೀಕರಿಸಿದ ಅವರು, ಶೀಘ್ರದಲ್ಲೇದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದಾಗಿ ಹೇಳಿದರು.

ಮೂರು ದಿನಗಳ ಕಾಲ ಪಂಜಾಬ್ ಪ್ರವಾಸದಲ್ಲಿರುವ ರಾಹುಲ್ ಮಂಗಳವಾರ ಭಟಿಂಡಾಗೆ ಭೇಟಿ ನೀಡಿ ರೋಡ್ ಶೊನಲ್ಲಿ ಭಾಗವಹಿಸಿದ್ದರು. ಮೇ ತಿಂಗಳಲ್ಲಿ ನಡೆದ ಪಂಜಾಬ್ ಪಂಚಾಯತ್ ಚುನಾವಣೆಯಲ್ಲಿ ಕನಿಷ್ಠ ಹತ್ತು ಮಂದಿ ಮೃತಪಟ್ಟು, ಬಹಳಷ್ಟು ಮಂದಿ ಗಾಯಗೊಂಡಿದ್ದರು. ಅವರ ಕುಟುಂಬದವರನ್ನು ಭೇಟಿ ಮಾಡಿ ಸಂತೈಸಿದರು. ಈ ಸಂದರ್ಭದಲ್ಲಿ ಅವರ ಮದುವೆ ಕುರಿತು ಪ್ರಶ್ನಿಸಲಾಯಿತು. ತಕ್ಷಣ ಅವರ ಮುಖದಲ್ಲಿ ನಗೆಯೊಂದು ಮಿಂಚಿ ಮುಖ ಕೆಂಪೇರಿತು. ಇಷ್ಟರಲ್ಲೇ ಮದುವೆ ಆಗಬೇಕೆಂದಿದ್ದೇನೆ ಎಂದಷ್ಟೇ ಹೇಳಿ ಸುಮ್ಮನಾದರು. ಆದರೆ ತಾವು ಮದುವೆ ಆಗಲಿರುವ ಹುಡುಗಿ ಇನ್ನಿತರೆ ವಿವರಗಳ ಬಗ್ಗೆ ರಾಹುಲ್ ತುಟಿ ಬಿಚ್ಚಲಿಲ್ಲ.

ಇದೇ ಸಂದರ್ಭದಲ್ಲಿ ಈಗಿನ ಅಕಾಲಿದಳ-ಬಿಜೆಪಿ ಆಳ್ವಿಕೆಯಲ್ಲಿ ನಡೆದಿರುವ ದೌರ್ಜನ್ಯಗಳ ಬಗೆಗಿನ ದೂರುಗಳನ್ನು ರಾಹುಲ್ ಗಾಂಧಿ ಸ್ವೀಕರಿಸಿದರು. ಭಟಿಂಡಾದ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ವಿರುದ್ಧ ಅಕಾಲಿದಳ-ಬಿಜೆಪಿ ಸರ್ಕಾರ ಕೈಗೊಂಡಿರುವ ಸೇಡಿನ ಕ್ರಮಗಳ ಬಗ್ಗೆಯೂ ದೂರಿದರು. ರೆಡ್ ಕ್ರಾಸ್ ಸಂಸ್ಥೆ ನಡೆಸುತ್ತಿರುವ ಸ್ಥಳೀಯ ಮಾದಕ ವಸ್ತು ವ್ಯಸನಿಗಳ ಪುನರ್ವಸತಿ ಕೇಂದ್ರಕ್ಕೂ ರಾಹುಲ್ ಭೇಟಿ ನೀಡಿದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X