ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಡುಗಡೆ ಭಾಗ್ಯ ಕಾಣದ ಭಜರಂಗಿ ಮಹೇಂದ್ರ

By Staff
|
Google Oneindia Kannada News

ಮಂಗಳೂರು, ಸೆ. 23 : ರಾಜ್ಯದ ವಿವಿಧೆಡೆ ಚರ್ಚ್ ಗಳ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಭಜರಂಗದಳದ ರಾಜ್ಯ ಸಂಚಾಲಕ ಮಹೇಂದ್ರಕುಮಾರ್ ಅವರಿಗೆ ಸೋಮವಾರ ಇಲ್ಲಿನ ನ್ಯಾಯಾಲಯದಲ್ಲಿ ಜಾಮೀನು ದೊರೆತರೂ ಚಿಕ್ಕಮಗಳೂರು ಜಿಲ್ಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದ್ದರಿಂದ ಬಿಡುಗಡೆ ಸಾಧ್ಯವಾಗಲಿಲ್ಲ.

ಸೋಮವಾರ ಮಧ್ಯಾಹ್ನ ಮಂಗಳೂರಿನ ಎರಡನೇ ದರ್ಜೆಯ ಜೆಎಂಎಫ್ ಸಿ ನ್ಯಾಯಾಲಯವು ಷರತ್ತಿನ ಆಧಾರದಲ್ಲಿ ಮಹೇಂದ್ರಕುಮಾರ್ ಅವರಿಗೆ ಜಾಮೀನು ನೀಡಿತ್ತು. ಆದರೆ ಮಂಗಳೂರು ನ್ಯಾಯಾಲಯವು ನೀಡಿದ ಜಾಮೀನು ವಾರೆಂಟ್ ಜೈಲು ತಲುಪುವ ಮೊದಲೇ ಕೊಪ್ಪ ನ್ಯಾಯಾಲಯದಿಂದ ವಾರೆಂಟ್ ತಲುಪಿದ್ದರಿಂದ ಮಂಗಳೂರು ನ್ಯಾಯಾಲಯ ಜಾಮೀನು ನೀಡಿದರೂ ಬಿಡುಗಡೆ ಸಾಧ್ಯವಾಗಲಿಲ್ಲ.

ಚಿಕ್ಕಮಗಳೂರು ಜಿಲ್ಲೆಯ ಜಯಪುರ, ಗೋರಿಗಂಡಿ ಹಾಗೂ ಸಿಂಗಟಗೆರೆ ಚರ್ಚ್ ಗಳ ಮೇಲೆ ದಾಳಿಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಗೆ ಮಹೇಂದ್ರ ಕುಮಾರ್ ಬೇಕಾಗಿದ್ದರು. ಇವರ ವಿರುದ್ಧ ಒಟ್ಟು ಹತ್ತು ಪ್ರಕರಣಗಳನ್ನು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ. ಸದ್ಯ ಇವರು ಮಂಗಳೂರು ಜೈಲಿನಲ್ಲಿದ್ದಾರೆ. ಮಂಗಳೂರಿನಲ್ಲಿ ಚರ್ಚ್ ಮೇಲೆ ದಾಳಿ ನಡೆಸಿರುವುದು ನಾವೇ ಎಂದು ಟಿವಿ ವಾಹಿನಿಯೊಂದಕ್ಕೆ ಮಹೇಂದ್ರಕುಮಾರ್ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ರಾತ್ರಿ ಅವರನ್ನು ಬಂಧಿಸಲಾಗಿತ್ತು.

(ದಟ್ಸ್ ಕನ್ನಡ ವಾರ್ತೆ)

ಭಜರಂಗದಳದ ರಾಜ್ಯ ಸಂಚಾಲಕರ ಬಂಧನ
ಬಿಜೆಪಿ ಸರ್ಕಾರ ವಜಾಕ್ಕೆ ದೇವೇಗೌಡರ ಒತ್ತಾಯ
ಚರ್ಚ್ ಮೇಲೆ ದಾಳಿ : ಪೊಲೀಸರ ಬೆವರಿಳಿಸಿದ ಸಿಎಂ
ಭಜರಂಗದಳಕ್ಕೆ ಪರ್ಯಾಯ ಸಂಘಟನೆ ರಚನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X