ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜಮ್ ಗಢದಲ್ಲಿ ಕೂಂಬಿಂಗ್ ಕಾರ್ಯಚರಣೆ

By Staff
|
Google Oneindia Kannada News

ಲಕ್ನೋ, ಸೆ. 23 : ಇತ್ತೀಚೆಗೆ ನಡೆದ ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಕಾರ್ಯಚರಣೆ ಮುಂದುವರೆದಿದ್ದು, ಕಳೆದ ಶನಿವಾರ ಜಾಮಿಯಾನಗರದಲ್ಲಿ ನಡೆದ ನಂತರ ಬಂಧಿತರಾಗಿರುವ ಶಂಕಿತ ಉಗ್ರರ ಸ್ವಗ್ರಾಮ ಉತ್ತರ ಪ್ರದೇಶದ ಅಜಮ್ ಗಢ ಜಿಲ್ಲೆಯ ಸಂಜಾರಪುರದಲ್ಲಿ ಭಾರಿ ಕಾರ್ಯಚರಣೆ ನಡೆದಿದೆ.

ಇಂದು ಬೆಳಗ್ಗೆ ದೆಹಲಿ ವಿಶೇಷ ಪೊಲೀಸ್ ಪಡೆ, ಭಯೋತ್ಪಾದನಾ ನಿಗ್ರಹ ದಳ ಹಾಗೂ ಲಕ್ನೋ ಪೊಲೀಸ್ ಸೇರಿ ಸುಮಾರು 300 ಜನ ಸಂಜಾರಪುರಕ್ಕೆ ತೆರಳಿದ್ದು, ಗ್ರಾಮವನ್ನು ಸಂಪೂರ್ಣವಾಗಿ ಸುತ್ತವರೆದು ಕೂಂಬಿಂಗ್ ಆಪರೇಷನ್ ನಡೆಸಿದ್ದಾರೆ, ಗ್ರಾಮದಲ್ಲಿರುವ ಪ್ರತಿ ಮನೆಯನ್ನು ಜಾಲಾಡುತ್ತಿರುವ ಪೊಲೀಸರಿಗೆ ಮಹತ್ವದ ಮಾಹಿತಿಗಳು ಲಭ್ಯವಾಗಿವೆ. ಹಾಗೂ ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಒಬ್ಬ ವೈದ್ಯ ಹಾಗೂ ಆತನ ಇಬ್ಬರು ಸಹೋದರರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ಎನ್ ಕೌಂಟರ್ ನಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಮೂಹ್ಮದ್ ಸೈಫ್ ಸಂಜಾರಪುರ ಗ್ರಾಮದ ನಿವಾಸಿಯಾಗಿದ್ದಾನೆ. ಸೈಫ್ ವಿಚಾರಣೆ ನಡೆಸಿದ ನಂತರ ಪೊಲೀಸರು ಇಂದು ಸಂಜಾರಪುರದಲ್ಲಿ ಕಾರ್ಯಚರಣೆ ನಡೆಸಿದ್ದಾರೆ. ಅಜಮ್ ಗಢ್ ಚಿಕ್ಕ ಪಟ್ಟಣವಾಗಿದ್ದು, ಉಗ್ರರನ್ನು ತಯಾರಿಸುವ ಕಾರ್ಖಾನೆ ಎಂದೇ ಹೇಳಲಾಗುತ್ತಿದೆ. ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಯಲ್ಲಿ ಅಜಮ್ ಗಢ್ ಪಟ್ಟಣಕ್ಕೆ ಸಂಬಂಧಿಸಿ ವ್ಯಕ್ತಿಯ ಕೈವಾಡ ಇರಲೇ ಬೇಕು ಎನ್ನುವ ಅಪಖ್ಯಾತಿಗೆ ಈ ಪಟ್ಟಣ ಒಳಗಾಗಿದೆ. ಸ್ಫೋಟ ಸಂಭವಿಸಿದ ಕೂಡಲೇ ಪೊಲೀಸರು ಕಣ್ಣು ಅಜಮ್ ಗಢದತ್ತ ಹೊರಳುವಷ್ಟು ಪ್ರಸಿದ್ಧಿ ಪಡೆದಿದೆ.

(ದಟ್ಸ್ ಕನ್ನಡ ವಾರ್ತೆ)

ದಿಲ್ಲಿ ಸ್ಫೋಟ : ಮಣಿಪಾಲ್ ನಲ್ಲಿ 3 ಜನ ಸೆರೆ
ದೆಹಲಿಯಲ್ಲಿ 20 ಕಡೆ ಸ್ಫೋಟಿಸಲು ಸಂಚು ಬಯಲಿಗೆ
ಸೈಫ್ ನಿಂದ ದೆಹಲಿ ಸ್ಫೋಟದ ಪ್ರಮುಖ ಮಾಹಿತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X