ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಲ್ಲಿ ಸ್ಫೋಟ : ಮಣಿಪಾಲ್ ನಲ್ಲಿ 3 ಜನ ಸೆರೆ

By Staff
|
Google Oneindia Kannada News

ಉಡುಪಿ, ಸೆ. 22 : ಸೆ. 13 ರಂದು ದೆಹಲಿಯಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೋಲೀಸರು ಕಾರ್ಯಚರಣೆ ತೀವ್ರಗೊಳಿಸಿದ್ದಾರೆ. ಭಾನುವಾರ ತಡರಾತ್ರಿ ನಗರಕ್ಕೆ ಆಗಮಿಸಿದ ಆರು ಜನರ ದೆಹಲಿ ಪೊಲೀಸರ ತಂಡ ಶಂಕಿತ ಉಗ್ರರು ಎನ್ನಲಾದ ಒಬ್ಬ ವಿದ್ಯಾರ್ಥಿ, ಒಬ್ಬ ಎಸ್ ಡಿಟಿ ಅಂಗಡಿ ಮಾಲೀಕ ಸೇರಿ ಒಟ್ಟು ಜನರನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.

ದೆಹಲಿ ಸ್ಫೋಟಕ್ಕೆ ಉಗ್ರರು ಕರ್ನಾಟಕದಿಂದ ಸ್ಫೋಟಕಗಳನ್ನು ಸರಬರಾಜು ಮಾಡಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸ್ ಆಯುಕ್ತ ಕರ್ನೈಲ್ ಸಿಂಗ್ ಸ್ಫೋಟದ ನಂತರ ಸ್ಪಷ್ಟಪಡಿಸಿದ್ದರು. ಇದರ ಆಧಾರದ ಮೇಲೆ ಇಂದು ಉಡುಪಿ ಹಾಗೂ ಮಣಿಪಾಲ್ ಸುತ್ತಮುತ್ತ ದೆಹಲಿ ಪೊಲೀಸರು ಶಂಕಿತ ಉಗ್ರರ ಬಂಧನಕ್ಕೆ ವ್ಯಾಪಕ ಜಾಲ ಬೀಸಿದ್ದಾರೆ. ಸ್ಫೋಟ ನಡೆದ ನಂತರ ದೆಹಲಿಗೆ ಮಣಿಪಾಲ್ ನ ಎಸ್ ಟಿಡಿ ಬೂತ್ ವೊಂದರಿಂದ ಪದೇಪದೇ ಫೋನ್ ಕರೆ ಬಂದಿದೆ ಎನ್ನಲಾಗಿದೆ. ಕರೆ ಮಾಡಿರುವ ವ್ಯಕ್ತಿ ವಿದ್ಯಾರ್ಥಿ ಎನ್ನುವ ಮಾಹಿತಿ ದೊರೆತಿದೆ. ವಿದ್ಯಾರ್ಥಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ವಿದ್ಯಾರ್ಥಿ ಹಿನ್ನೆಲೆಯನ್ನು ತಿಳಿದುಕೊಳ್ಳಲು ಎಸ್ ಟಿಡಿ ಮಾಲೀಕನನನ್ನು ಬಂಧಿಸಲಾಗಿದೆ. ವಿದ್ಯಾರ್ಥಿಗೆ ಸಹಕರಿಸಿ ಇನ್ನೊಬ್ಬ ವ್ಯಕ್ತಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ.

ಹಿರಿಯ ಅಧಿಕಾರಿಗಳ ಸಭೆ

ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ನಗರಕ್ಕೆ ಆಗಮಿಸಿರುವ ದೆಹಲಿ ಪೊಲೀಸರು ಇಂದು ಪಶ್ಚಿಮ ವಲಯ ಐಜಿಪಿ ನೇತೃತ್ವದಲ್ಲಿ ಸಭೆ ನಡೆದಿದೆ. ಕರ್ನಾಟಕದಲ್ಲಿ ಬೇರುರಿರುವ ಉಗ್ರ ತಾಣವನ್ನು ಬೇಧಿಸುವ ಕುರಿತು ಗಂಭೀರ ಚರ್ಚೆ ನಡೆದಿದೆ. ಹಾಗೂ ಇತ್ತೀಚೆಗೆ ರಾಜ್ಯದಲ್ಲಿ ಬಂಧಿಸಲಾಗಿರುವ ಉಗ್ರರು ಕಳೆದ ಎರಡು ತಿಂಗಳಲ್ಲಿ ದೇಶದಲ್ಲಿ ನಡೆದ ಸ್ಫೋಟದಲ್ಲಿ ಕೈವಾಡ ಇರುವ ಕುರಿತು ಚರ್ಚೆ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)

20 ಕಡೆ ಸ್ಫೋಟ ಸಂಚು ಬಯಲು
ದಿಲ್ಲಿ ಸ್ಫೋಟಕ್ಕೆ ಕರ್ನಾಟಕದ ಸ್ಫೋಟಕಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X