ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಆಸ್ಪತ್ರೆ ಪಾಲಾದ 13 ಸಾವಿರ ಮಕ್ಕಳು

By Staff
|
Google Oneindia Kannada News

ಚೀನಾ, ಸೆ.22: ಚೀನಾ ದೇಶದಾದ್ಯಂತ ಹಾಲು ಹಾಲಾಹಲವಾಗಿ ಪರಿಣಮಿಸಿ 53,000ಕ್ಕೂ ಅಧಿಕ ಮಕ್ಕಳು ಅಸ್ವಸ್ಥರಾಗಿದ್ದಾರೆ. ಹಾಲಿನಲ್ಲಿ ಮೆಲಮಿನ್ ಎನ್ನುವ ಕೈಗಾರಿಕಾ ರಸಾಯನಿಕ ಸೇರಿದ್ದೇ ಇಷ್ಟಕ್ಕೆಲ್ಲಾ ಅವಾಂತರಕ್ಕೆ ಕಾರಣ ಎಂದು ಚೀನಾ ಅಧಿಕಾರಿಗಳು ದೃಢಪಡಿಸಿದ್ದಾರೆ.

ತೀವ್ರವಾಗಿ ಅಸ್ವಸ್ಥಗೊಂಡಿರುವ13,000 ಮಂದಿ ಮಕ್ಕಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಚೀನಾ ಆರೋಗ್ಯ ಸಚಿವಾಲಯ ತಿಳಿಸಿದೆ. ಕಲುಷಿತ ಹಾಲನ್ನು ಕುಡಿದು ಇದುವರೆಗೂ ನಾಲ್ಕು ಮಂದಿ ಮಕ್ಕಳು ಅಸುನೀಗಿದ್ದಾರೆ. ಚೀನಾದ ಪ್ರಧಾನಿ ವೆನ್ ಜಿಯಾಬೊ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥ ಮಕ್ಕಳ ಪರಿಸ್ಥಿತಿಯನ್ನು ಕಂಡು ಖೇದ ವ್ಯಕ್ತಪಡಿಸಿದ್ದಾರೆ.

ಅಸ್ವಸ್ಥಗೊಂಡ ಮಕ್ಕಳಲ್ಲಿ 104 ಮಂದಿಯ ಪರಿಸ್ಥಿತಿ ಚಿಂತಾಜನಕವಾಗಿದೆ. ವಾರದ ಹಿಂದಷ್ಟೇ ಚೀನಾದಲ್ಲಿ 39,965 ಮಂದಿ ಮಕ್ಕಳು ಕಲುಷಿತ ಹಾಲು ಸೇವಿಸಿ ಅಸ್ವಸ್ಥರಾಗಿದ್ದರು. ಬೈಲನು ಕಂಪನಿಗೆ ಸೇರಿದ ಹಾಲಿನ ಪುಡಿಯಲ್ಲಿ ಪ್ಲಾಸ್ಟಿಕ್ ಗೆ ಉಪಯೋಗಿಸುವ ಮೆಲಮಿನ್ ಬಳಸಿದ ಕಾರಣ ಸಾವಿರಾರು ಸಂಖ್ಯೆಯ ಮಕ್ಕಳು ಅಸ್ವಸ್ಥರಾಗಿದ್ದಾರೆ. ಕಲುಷಿತ ಹಾಲಿನ ಕಾರಣ ಚೀನಾದಲ್ಲಿ ಭಾರೀ ಕೋಲಾಹಲ ಉಂಟಾಗಿದೆ. ಚೀನಾ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಹಲವಾರು ದೇಶಗಳು ನಿಷೇಧಿಸಿವೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X