ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ದಸರಾಗೆ ಗಜರಾಜನ ಆಗಮನ

By Super
|
Google Oneindia Kannada News

ಮೈಸೂರು, ಸೆ.19: ದಸರಾ ಉತ್ಸವದಲ್ಲಿ ಭಾಗವಹಿಸಲು ನಾಗರಹೊಳೆ ಅರಣ್ಯ ಪ್ರದೇಶದಿಂದ ಗಜರಾಜನ ಎರಡನೆ ತಂಡ ಮೈಸೂರಿಗೆ ಗುರುವಾರ ಆಗಮಿಸಿತು. ಎರಡನೇ ತಂಡದಲ್ಲಿರುವ ಆರು ಆನೆಗಳಿವೆ.

ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸಲು ಬಂದಿರುವ ಮೊದಲ ತಂಡದ ಆನೆಗಳು ಅರಮನೆ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿವೆ. ಗುರುವಾರ ಆಗಮಿಸಿದ ಎರಡನೆ ತಂಡ ಬಲರಾಮ ಮತ್ತ್ತವರ ಕಂಪನಿಯನ್ನು ಕಲೆತವು. ಪ್ರಸ್ತುತ ಈ ಆನೆಗಳೆಲ್ಲಾ ದಸರಾ ಉತ್ಸವದ ಅಭ್ಯಾಸ ಚಟುವಟಿಕೆಯಲ್ಲಿ ನಿರತವಾಗಿವೆ.

ತಂಡದ ಮುಖ್ಯಸ್ಥನಾದ ಶ್ರೀರಾಮ ಇದುವರೆಗೂ 11 ದಸರಾ ಉತ್ಸವಗಳಲ್ಲಿ ಭಾಗವಹಿಸಿದ್ದಾನೆ. ತಂಡದಲ್ಲಿ ಎಲ್ಲರಿಗಿಂತ ಬುದ್ಧಿವಂತ ಇವನೆ. 52 ವರ್ಷದ ಪ್ರಶಾಂತ ದಸರಾ ಮೆರವಣಿಗೆಯಲ್ಲಿ 5 ಬಾರಿ ಭಾಗವಹಿಸಿದ್ದಾನೆ. ಎಲ್ಲರಿಗಿಂತಲೂ ಚಿಕ್ಕವನಾದ ವಿಕ್ರಂ(36)ಗೆ ಏಳು ಸಲ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ ಅನುಭವವಿದೆ. ಪ್ರಸ್ತುತ ದುಬಾರೆ ಆನೆ ಶಿಬಿ ದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ.

ಇನ್ನು ಕವಿತಾ(54) ಆರು ಸಲ ಭಾಗವಹಿಸಿದ್ದರೆ, ರೇವತಿ(66) ಹತ್ತು ಸಲ ದಸರಾ ಉತ್ಸವದಲ್ಲಿ ಭಾಗವಹಿಸಿದ್ದಾಳೆ. 42 ವರ್ಷದ ಹರ್ಷನಿಗೆ ಮುಂದೆ ಅಂಬಾರಿ ಹೊರುವ ಎಲ್ಲ ಅರ್ಹತೆಗಳು ಇವೆ. ಆತ ಇದುವರೆಗೂ ಒಂಬತ್ತು ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾನೆ. ಶುಕ್ರವಾರದಿಂದ ಈ ಗಜಪಡೆ ತಮಗೆ ನಿರ್ವಹಿಸಿದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಲಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X