ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿಗಾಗಿ ರಾಜ್ಯದ ನಕ್ಷೆ ತಿರುಚಿಲ್ಲ : ಜನಾರ್ದನರೆಡ್ಡಿ

By Staff
|
Google Oneindia Kannada News

ಬಳ್ಳಾರಿ, ಸೆ. 19 : ಗಣಿಗಾರಿಕೆಗಾಗಿ ರಾಜ್ಯದ ಗಡಿ ನಕ್ಷೆಯನ್ನೆ ತಿರುಚಲಾಗಿದೆ ಎಂದು ಕಾಂಗ್ರೆಸ್ ನಾಯಕ ಎಂ ದಿವಾಕರ್ ಬಾಬು ಮಾಡಿರುವ ಆರೋಪವನ್ನು ಪ್ರವಾಸೋಧ್ಯಮ ಸಚಿವ ಜನಾರ್ದನ ರೆಡ್ಡಿ ತಳ್ಳಿಹಾಕಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ನಿಷ್ಪಕ್ಷಪಾತವಾಗಿ ಸರ್ವೇ ಕಾರ್ಯ ನಡೆದಿದೆ. ದಿವಾಕರ್ ಬಾಬು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಸತ್ಯಕ್ಕೆ ದೂರವಾದುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪರಾಧಿ ಹಿನ್ನೆಲೆಯ ರಾಜಕಾರಣಿ ಮಾಡಿರುವ ಆರೋಪಕ್ಕೆ ಬೆಲೆ ಇಲ್ಲ ಎಂದರು. ದಿವಾಕರ್ ಬಾಬು ಬಗ್ಗೆ ಗೊತ್ತಿರುವ ಸಂಗತಿ. ಅವರು ಮಾಡಿರುವ ಆರೋಪಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಗಣಿಗಾರಿಕೆಗೆ ಸಚಿವರು ಅಡ್ಡಿ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ, ಕಾನೂನಿನ ಚೌಕಟ್ಟು ಮೀರಿ ನಡೆದರೆ ಉಗ್ರ ಕ್ರಮ ಕೈಗೊಳ್ಳಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಎಚ್ಚರಿಕೆ ನೀಡಿದರು. ಬಳ್ಳಾರಿ ಜಿಲ್ಲೆಯ ಬಗ್ಗೆ ಒಂದು ಕನಸಿದೆ, ಮಾದರಿ ಜಿಲ್ಲೆಯನ್ನಾಗಿ ಹಂಬಲವಿದೆ ಎಂದು ಹೇಳಿದರು.

ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಜನಾರ್ದನರೆಡ್ಡಿ ಮಾಲೀಕತ್ವದ ಓಬಳಾಪುರಂ ಮೈನಿಂಗ್ ಕಂಪನಿ ಹಾಗೂ ಬಳ್ಳಾರಿಯ ಟಪಾಲ್ ನಾರಾಯಣರೆಡ್ಡಿ ಐರನ್ ಓರ್ ಕಂಪನಿ ವಿವಾದದಲ್ಲಿ ಕಾಂಗ್ರೆಸ್ ನಾಯಕ ದಿವಾಕರ್ ಬಾಬು ಮಧ್ಯೆ ಪ್ರವೇಶದಿಂದ ರಾಜಕೀಯ ಬಣ್ಣ ಪಡೆದುಕೊಂಡಿತ್ತು. ಸಚಿವ ಜನಾರ್ದನರೆಡ್ಡಿ ಮಾಲೀಕತ್ವದ ಓಬಳಾಪುರಂ ಮೈನ್ಸ್ (ಆಂಧ್ರ ಗಡಿ) ಹಾಗೂ ಟಪಾಲ್ ನಾರಾಯಣಪ್ಪನಿಗೆ ಸೇರಿದ ಟಿಎನ್ನಾರ್(ರಾಜ್ಯ ಗಡಿ) ನಡುವೆ ವಿವಾದ ತಾರಕಕ್ಕೇರಿದೆ.

ರಾಜ್ಯದ ಗಡಿ ಭಾಗದ ಗುರುತುಗಳನ್ನು ಕಿತ್ತೆಸೆದು, ನಕಾಶೆಯನ್ನೆ ಬದಲಾಯಿಸುತ್ತಿದ್ದಾರೆಂಬ ತುಮಟಿ ಮೈನ್ಸ್ ನ ಗಣೇಶ್ ಅವರ ಸಾಕ್ಷಿ ಸಮೇತ ಗಂಭೀರ ಆರೋಪಕ್ಕೆ ರಾಜ್ಯ ಸರ್ಕಾರ ಕ್ಯಾರೇ ಅನ್ನುತ್ತಿಲ್ಲವಾದ್ದರಿಂದ ಸರ್ಕಾರದ ಕ್ರಮ ಖಂಡಿಸಿ ಹೋರಾಟ ನಡೆಸಲಾಗುವುದು ಎಂದು ದಿವಾಕರ್ ಬಾಬು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪನವರು ಜನಾರ್ದನರೆಡ್ಡಿ ಅವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದ್ದರು.

(ದಟ್ಸ್ ಕನ್ನಡ ವಾರ್ತೆ)
ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಿಷೇಧದ ತೀರ್ಪಿಗೆ ತಡೆ
ಗಣಿಗಾರಿಕೆ ತಡೆಯಲು ಕೇಂದ್ರಕ್ಕೆ ಪತ್ರ : ಯಡಿಯೂರಪ್ಪ
ಗಣಿಗಾರಿಕೆ ರಾಷ್ಟ್ರೀಕರಣಕ್ಕೆ ಹೈಕೋರ್ಟ್ ಸೂಚನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X