ಜಾಗತಿಕ ಐಟಿ ಕ್ಷೇತ್ರದಲ್ಲಿ 'ಪಿಂಕ್ ಸ್ಲಿಪ್ ಮೇಳ'
ಬೆಂಗಳೂರು, ಸೆ. 17 : ಡೋಲಾಯಮಾನವಾಗಿರುವ ಜಾಗತಿಕ ಆರ್ಥಿಕ ಸ್ಥಿತಿ, ಭರಿಸಲಾಗದ ಕೂಡಿಕೆಗಳು, ಹೂಡಿಕೆದಾರರ ಹಿಂಜರಿಕೆ, ಬದಲಾಗುತ್ತಿರುವ ನೇಮಕಾತಿ ನೀತಿಗಳು ಜಗತ್ತಿನಾದ್ಯಂತ ಸಾಫ್ಟ್ ವೇರ್ ಕಂಪನಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಪರಿಣಾಮ, ಎಚ್ ಪಿ, ಟಿಸಿಎಸ್, ಸತ್ಯಂ, ವಿಪ್ರೋ ಕಂಪನಿಗಳು ಭಾರೀ ಪ್ರಮಾಣದಲ್ಲಿ ಕೆಲಸಗಾರರನ್ನು ಪಿಂಕ್ ಸ್ಲಿಪ್ ನೀಡಿ ಮನೆಗೆ ಕಳಿಸಲು ಸಜ್ಜಾಗಿ ನಿಂತಿವೆ.
ವಿಪ್ರೋ
ಕಂಪನಿ
ಸಾವಿರ
ಸಾಫ್ಟ್
ವೇರ್
ಸರದಾರರನ್ನು
ಮನೆಗಟ್ಟಿದ
ಬೆನ್ನಹಿಂದೆಯೇ
ಕ್ಯಾಲಿಫೋರ್ನಿಯಾ
ಮೂಲದ
ಹ್ಯುಲೆಟ್
ಪ್ಯಾಕರ್ಡ್
ಅನಾಮತ್ತು
24
ಸಾವಿರ
ನೌಕರರನ್ನು
ಕೆಲಸದಿಂದ
ತೆಗೆದು,
ಒಟ್ಟಾರೆ
ಗಾತ್ರವನ್ನು
ಕುಗ್ಗಿಸಿಕೊಳ್ಳಲು
ಸಿದ್ಧವಾಗಿದೆ.
ಎಲೆಕ್ಟ್ರಾನಿಕ್
ಡೇಟಾ
ಸಿಸ್ಟಂಸ್
(ಇಡಿಎಸ್)
ಜೊತೆ
2008
ಮೇ
ತಿಂಗಳಲ್ಲಿ
ಕೂಡಿಕೆಯಾದ
ನಂತರ
ಎಚ್
ಪಿ
ಗಾತ್ರ
ದುಪ್ಪಟ್ಟಾಗಿತ್ತು.
ಆದರೆ
ಈ
ಪ್ರಕ್ರಿಯೆ
ಏಕಾಏಕಿ
ನಡೆಯದೇ
ಮುಂದಿನ
ಮೂರು
ವರ್ಷಗಳಲ್ಲಿ
ನಡೆಯಲಿದೆ.
ಇದರಿಂದಾಗಿ
ವಾರ್ಷಿಕ
1.8
ಬಿಲಿಯನ್
ಡಾಲರ್
ಉಳಿತಾಯವಾಗುತ್ತದೆಂಬುದು
ಎಚ್
ಪಿಯ
ಲೆಕ್ಕಾಚಾರ.
ಇವುಗಳಲ್ಲಿ
ಅರ್ಧದಷ್ಟು
ನೌಕರರು
ಅಮೆರಿಕದವರೇ
ಆಗಿರುತ್ತಾರೆ
ಎಂಬುದು
ಗಮನಾರ್ಹ.
ಕೆಲಸ
ಕಳೆದುಕೊಂಡ
ಕೆಲವರಿಗೆ
ವಿಶೇಷ
ಪ್ಯಾಕೇಜ್
ನೀಡಿ
ಮನೆಗೆ
ಕಳಿಸಲಿದೆ,
ಇನ್ನು
ಕೆಲವರನ್ನು
ಇತರ
ಕೆಲಸಗಳಿಗೆ
ಎಚ್
ಪಿ
ನಿಯೋಜಿಸಿಕೊಳ್ಳಲಿದೆ.
ಸತ್ಯಂ ಕಂಪ್ಯೂಟರ್ಸ್ ತನ್ನ ಕೆಲಸಗಾರರನ್ನು ಮನೆಗೆ ಕಳಿಸಲು ವಿನೂತನ ದಾರಿಗಳನ್ನು ಕಂಡುಕೊಂಡಿದೆ. ಸುಮಾರು ಒಂದೂವರೆ ಸಾವಿರ ನೌಕರರನ್ನು ಕೆಲಸ ನಿರ್ವಹಣೆ ಸುಧಾರಣಾ ಪಟ್ಟಿಯಲ್ಲಿ ಸೇರಿಸಿದೆ. ಇವರಿಗೆ ಕೆಲಸ ಸುಧಾರಿಸಿಕೊಳ್ಳಲು ಹೆಚ್ಚಿನ ಅವಧಿಯನ್ನೂ ನೀಡಿಲ್ಲ. ಇನ್ನು ಮೂರುವರೆ ಸಾವಿರ ಕೆಲಸಗಾರರಿಗೆ ಪ್ರಸ್ತುತ ವರ್ಷದಲ್ಲಿ ಪಗಾರದಲ್ಲಿ ಹೆಚ್ಚಳ ಮಾಡಿಲ್ಲ. ಇದರ ಅರ್ಥ, ಆ ನಾಲ್ಕುವರೆ ಸಾವಿರ ಜನರು ಮನೆಗೆ ಹೋಗುವುದು ನಿಶ್ಚಿತವಾಗಿದೆ. ಇವರಲ್ಲನೇಕರು ಈಗಾಗಲೇ ಜಾಗ ಖಾಲಿ ಮಾಡಿದ್ದಾರೆ. ಉಳಿದವರಿಗೂ ಕೆಲಸ ತಪ್ಪಿಸದಿರುವಂತೆ, ಕಟ್ಟುನಿಟ್ಟಾಗಿ ಡ್ರೆಸ್ ಕೋಡ್ ನಲ್ಲಿ ಬರುವಂತೆ ಕಟ್ಟಪ್ಪಣೆ ಮಾಡಿದೆ. ಈ ನಿಯಮ ಉಲ್ಲಂಘಿಸಿದವರ ವಿರುದ್ಧ ಕಟ್ಟುನಿಟ್ಟಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಕಳೆದ ವಾರವಷ್ಟೇ ರಾಷ್ಟ್ರಾದ್ಯಂತ 400 ನೌಕರರಿಗೆ ಯಾವುದೇ ಮುನ್ನೆಚ್ಚರಿಕೆ ನೀಡದೆ ಪಿಂಕ್ ಸ್ಲಿಪ್ ನೀಡಿದೆ.
ಬದಲಾಗುತ್ತಿರುವ ಮಾರುಕಟ್ಟೆ ಸ್ಥಿತಿಗತಿಯಿಂದಾಗಿ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್, ವಿಪ್ರೋ, ಕೀನ್ ಮೊದಲಾದ ಕಂಪನಿಗಳು ಐಟಿ ಮತ್ತು ಸೇವಾಧಾರಿತ ಐಟಿ ಕ್ಷೇತ್ರಗಳಲ್ಲಿ ನೌಕರರ ನೇಮಕಾತಿ, ತರಬೇತಿ ನೀಡುವ ವಿಷಯದಲ್ಲಿ ನಿಧಾನ ಪ್ರಗತಿಯನ್ನು ತೋರಿಸುತ್ತಿವೆ. ವಿಷಮ ಸ್ಥಿತಿಯನ್ನು ನಿಭಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ ತಾಜಾ ಮುಖಗಳನ್ನು ತೆಗೆದುಕೊಳ್ಳುವ ಬದಲು ನುರಿತ ಕೆಲಸಗಾರರನ್ನು ಸೇರಿಸಿಕೊಳ್ಳಲು ಮುಂದಾಗುತ್ತಿವೆ. ಕಳೆದ ವರ್ಷಕ್ಕಿಂತ ಪ್ರಸ್ತುತ ವರ್ಷ ಕೆಲಸಗಾರರನ್ನು ತೆಗೆದುಕೊಳ್ಳುವ ಪ್ರಮಾಣ ಶೇ. 25ರಷ್ಟು ಇಳಿದಿದೆ. ಇದರಿಂದಾಗಿ ಈಗಷ್ಟೇ ಕಾಲೇಜು ಮೆಟ್ಟಲಿಳಿದು ಬಂದಿರುವ ಸಾವಿರಾರು ವಿದ್ಯಾರ್ಥಿಗಳು ಈ ಕಂಪನಿಗಳನ್ನು ಬಿಟ್ಟು ಬೇರೆ ಕಂಪನಿಗಳತ್ತ ಮುಖ ಮಾಡುವಂತಾಗಿದೆ.
ಪ್ರತಿವರ್ಷ 18 ಸಾವಿರ ಸೌಕರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ ಟಿಸಿಎಸ್ ಈ ವರ್ಷ ಸಾರಾಸಗಟಾಗಿ ನೇಮಕಾತಿ ಮಾಡಿಕೊಳ್ಳುವುದನ್ನು ನಿಲ್ಲಿಸಿದೆ. ಪ್ರತಿವರ್ಷ ಹಿಂದಿನ ವರ್ಷಕ್ಕಿಂತ ಶೇ.30ರಿಂದ 40ರಷ್ಟು ಹೆಚ್ಚಿಗೆ ಜನರನ್ನು ಸೇರಿಸಿಕೊಳ್ಳುತ್ತಿದ್ದ ಅಂತಾರಾಷ್ಟ್ರೀಯ ಐಟಿ ಕಂಪನಿ ಕೀನ್ ಕೂಡ ಈ ಬಾರಿ ಕಳೆದವರ್ಷದಷ್ಟೇ ನೌಕರನ್ನು ಸೇರಿಸಿಕೊಳ್ಳಲಿದೆ. ಅಲ್ಲದೆ, ಅಗತ್ಯ ಬಿದ್ದರೆ ಮಾತ್ರ ಕೆಲಸಗಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದೆ. ವಿಪ್ರೋ ಕೂಡ ನೇಮಕಾತಿ ಪ್ರಕ್ರಿಯೆಯನ್ನು ಕಠಿಣಗೊಳಿಸಿದೆ. ಗಾತ್ರದ ಬದಲಾಗಿ ಗುಣಮಟ್ಟ ಕಾಪಾಡಿಕೊಳ್ಳುವತ್ತ ಚಿತ್ತ ಹರಿಸಿದೆ.
(ದಟ್ಸ್
ಕನ್ನಡ
ವಾರ್ತೆ)
ಪೂರಕ
ಓದಿಗೆ:
ಒಂದು
ಸಾವಿರ
ನೌಕರರಿಗೆ
ಗೇಟ್
ಪಾಸ್
ಕೊಟ್ಟ
ವಿಪ್ರೊ
ಎಂಫಾಸಿಸ್ನಲ್ಲಿ
260
ನೌಕರರಿಗೆ
ಪಿಂಕ್
ಸ್ಲಿಪ್
ಪ್ರಬಂಧ
:
ಸಂಜೀವನ
ಪಿಂಕ್
ಸ್ಲಿಪ್
ಪ್ರಸಂಗ