ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಜಿರೆ, ಬಾಳೆಹೊನ್ನೂರಿನಲ್ಲೂ ಚರ್ಚ್ ಧ್ವಂಸ

By Staff
|
Google Oneindia Kannada News

ಉಜಿರೆ, ಸೆ. 17 : ಮಂಗಳೂರಿನಿಂದ ಆರಂಭವಾಗಿರುವ ಕೋಮುಗಲಭೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಪರಿಸ್ಥಿತಿ ನಿಯಂತ್ರಿಸಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡರೂ ಪ್ರಯೋಜನವಾಗಿಲ್ಲ. ಇಂದು ಮತ್ತೆ ಉಜಿರೆಯಲ್ಲಿನ ಸೇಂಟ್ ಜಾರ್ಜ್ ಚರ್ಚ್ ಮೇಲೆ ದಾಳಿ ನಡೆದಿದ್ದು ಪಿಠೋಪಕರಣಗಳನ್ನು ಧ್ವಂಸಗೊಳಿಸಿ, ಅಲ್ಲಿದ್ದ ಪುಸ್ತಕಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿರುವ ಚರ್ಚ್ ಮೇಲೆಯೂ ದಾಳಿ ನಡೆದಿದ್ದು, ಪಿಠೋಪಕರಣ ಹಾಗೂ ಮೂರ್ತಿಯನ್ನು ಧ್ವಂಸಗೊಂಡಿರುವ ಘಟನೆ ಜರುಗಿದೆ. ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿದ್ದು, ದಾಳಿ ನಡೆಸಿರುವವವರ ಬಗ್ಗೆ ಮಾಹಿತಿ ದೊರೆತಿಲ್ಲ.

ಚರ್ಚ್ ದಾಳಿಯ ಹಿನ್ನೆಲೆಯಲ್ಲಿ ಉಜಿರೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು. ರೊಚ್ಚಿಗೆದ್ದ ಕ್ರೈಸ್ತ ಸಮುದಾಯದವರು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹಾಗೂ ಇಬ್ಬರನ್ನು ಥಳಿಸಿರುವ ಬಗ್ಗೆಯೂ ವರದಿಯಾಗಿದೆ. ಘಟನೆ ತಿಳಿಯುತ್ತಿದಂತೆಯೇ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ನಂತರ ಯಾವುದೇ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿಲ್ಲ.

ಕೋಲಾರದಲ್ಲಿ ಚರ್ಚ್ ಮೇಲೆ ದಾಳಿ

ಮಂಗಳೂರು ಚರ್ಚ್ ಮೇಲಿನ ದಾಳಿ ಪ್ರಕರಣ ರಾಜ್ಯಾದ್ಯಂತ ಆವರಿಸತೊಗಿದ್ದು, ಇಂದು ಕೋಲಾರ ಚರ್ಚ್ ಮೇಲೆ ದಾಳಿ ನಡೆದಿದೆ. ಚರ್ಚ್ ಪಿಠೋಪಕರಣ ಹಾಗೂ ಏಸು ಮೂರ್ತಿಯನ್ನು ಭಗ್ನಗೊಳಿಸಲಾಗಿದೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ, ಜಿಲ್ಲಾ ವರಿಷ್ಠಾಧಿಕಾರಿ ಪರಿಶೀಲನೆ ನಡೆಸಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ.

ಕಳೆದ ನಾಲ್ಕು ದಿನಗಳಿಂದ ಮತಾಂತರಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಗಲಭೆ ನಾಲ್ಕನೇ ದಿನವೂ ಮುಂದುವರೆದಿದೆ. ಭಾನುವಾರದಿಂದ ಆರಂಭವಾಗಿರುವ ಚರ್ಚ್ ಗಳ ಮೇಲಿನ ದಾಳಿ ರಾಜ್ಯದ ಅನೇಕ ಕಡೆಗೆ ಮುಂದುವರೆದಿದೆ. ಮತಾಂತರ ಮಾಡಲಾಗುತ್ತಿದೆ ಎಂದು ಭಜರಂಗದಳದ ಕಾರ್ಯಕರ್ತರು ಭಾನುವಾರ ಮಂಗಳೂರಿನಲ್ಲಿ ಅನೇಕ ಚರ್ಚ್ ಗಳ ಮೇಲೆ ದಾಳಿ ನಡೆಸಿದ್ದರು. ಎರಡು ಕೋಮಿನ ನಡುವೆ ನಡೆದ ಸಂಘರ್ಷದಲ್ಲಿ ಸುಮಾರು 10 ಜನರು ಚೂರಿ ಇರಿತಕ್ಕೆ ಒಳಗಾಗಿದ್ದಾರೆ. 171 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಭಜರಂಗದಳ ಕಾರ್ಯಕರ್ತರಿಗೆ ಚೂರಿ ಇರಿತ ಖಂಡಿಸಿ ಭಜರಂಗದಳ ಮಂಗಳೂರು ಬಂದ್ ಕರೆ ನೀಡಿತ್ತು. ಪರಿಸ್ಥಿತಿ ಹತೋಟಿಗೆ ತರುವ ಪ್ರಯತ್ನ ಮುಂದುವರಿದಿದೆ.

(ದಟ್ಸ್ ಕನ್ನಡ ವಾರ್ತೆ)
ಕಾನೂನು ಕೈಗೆತ್ತಿಕೊಂಡರೆ ಉಗ್ರ ಕ್ರಮ:ಬಿಎಸ್ ವೈ
ಮಂಗಳೂರು ಮತ್ತೆ ನಾಲ್ವರಿಗೆ ಚೂರಿ ಇರಿತ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X