ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರಿಸ್ಕೋಸಿಟಿ-ಬೆಂಗಳೂರು ಅವಳಿ ನಗರ

By Staff
|
Google Oneindia Kannada News

ಬೆಂಗಳೂರು, ಸೆ. 12 : ಬೆಂಗಳೂರು ನಗರಕ್ಕೆ ಸಿಲಿಕಾನ್ ಸಿಟಿ ಎಂಬ ಮಾತು ಬರೀ ಮಾತಾಗಿ ಕಾಗದದಲ್ಲಿ ಉಳಿಯುವುದಿಲ್ಲ. ಈ ಖ್ಯಾತಿ ಮುಂದಿನ ದಿನಗಳಲ್ಲಿ ನಿಜವಾಗಲಿದೆ. ಜಗತ್ತಿನ ತಂತ್ರಜ್ಞಾನ ನಗರವೆಂದೇ ಪ್ರಸಿದ್ಧಿ ಪಡೆದಿರುವ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಬೆಂಗಳೂರಿಗೆ ಅವಳಿ ನಗರವೆಂಬ ಸ್ಥಾನಮಾನ ನೀಡಲು ಚಿಂತನೆ ನಡೆಸಿದೆ.

ಅವಳಿ ನಗರ ಗೌರವದಿಂದಾಗಿ ತಾಂತ್ರಿಕವಾಗಿ ಅತ್ಯಾಧುನಿಕ ನಗರಗಳಾಗಿರುವ ಈ ಎರಡೂ ನಗರಗಳು ವ್ಯಾಪಾರ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಹಲವಾರು ವಿಷಯದಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳಲಿವೆ. ಈ ಸ್ಥಾನಮಾನ ನೀಡಲು ಈಗಾಗಲೇ ಸ್ಯಾನ್ ಪ್ರಾನ್ಸಿಸ್ಕೋ ಸರ್ಕಾರ ಸಮಿತಿಯೊಂದನ್ನು ರಚಿಸಿದೆ.

ಬೆಂಗಳೂರಿಗೆ ಅವಳಿ ನಗರ ಸ್ಥಾನ ನೀಡಲು ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಗೇವಿನ್ ನ್ಯೂಸಮ್ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ದಾರೆ. ಚೀನಾದ ಶಾಂಘೈ ನಗರದ ನಂತರ ಬೆಂಗಳೂರು ನಗರಕ್ಕೆ ಈ ಗೌರವ ದೊರೆಯಲಿದೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಯಡಿಯೂರಪ್ಪ, ಈ ಸಂಬಂಧ ನವೆಂಬರ್-ಡಿಸೆಂಬರ್ ಗೆ ಒಡಂಬಡಿಕೆಗೆ ಸಹಿ ಹಾಕಲು ನಿರ್ಧರಿಸಿದ್ದಾರೆ. ಎರಡು ಸಿಲಿಕಾನ್ ಸಿಟಿಗಳು ಕೈಜೋಡಿಸಿದರೆ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಉತ್ತೇಜನ ದೊರೆಯಲಿದೆ. ನೂತನ ಅವಿಷ್ಕಾರ, ತಾಂತ್ರಿಕತೆ ಅಭಿವೃದ್ಧಿ ಹಾಗೂ ಹಲವು ಕ್ಷೇತ್ರಗಳಲ್ಲಿ ಅವಕಾಶಗಳನ್ನು ಸೃಷ್ಟಿಸಬಹುದಾಗಿದೆ ಎನ್ನಲಾಗಿದೆ.

(ದಟ್ಸ್ ಕನ್ನಡ ವಾರ್ತೆ)
ಅನಿವಾಸಿ ಕನ್ನಡಿಗರೇ, ರಾಜ್ಯದ ಪ್ರಗತಿಗೆ ಕೈಜೋಡಿಸಿ
ಉದ್ಯಮಗಳ ವಿಕೇಂದ್ರೀಕರಣಕ್ಕೆ ಯಡಿಯೂರಪ್ಪ ಒತ್ತು
ಭಾರತದ ಸಾಫ್ಟ್‌‍ವೇರ್ ರಫ್ತು ಶೇ.28ರಷ್ಟು ಏರಿಕೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X