ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ. 13 ರಿಂದ ದಕ್ಷಿಣ ಭಾರತದ ಕಾವ್ಯೋತ್ಸವ ಆರಂಭ

By Staff
|
Google Oneindia Kannada News

ಬೆಂಗಳೂರು, ಸೆ. 12 : ಸಾಹಿತ್ಯ ಆಕಾಡಮಿ ಆಶ್ರಯದಲ್ಲಿ ಈಶಾನ್ಯ ಹಾಗೂ ದಕ್ಷಿಣ ಭಾರತೀಯ ಕಾವ್ಯೋತ್ಸವ ಕಾರ್ಯಕ್ರಮವನ್ನು ನಗರದ ಯುವನಿಕಾ ಸಭಾಂಗಣದಲ್ಲಿ ಸೆ. 13 ಮತ್ತು 14 ರಂದು ನಡೆಯಲಿದೆ.

ಸೆ. 13 ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. ಖ್ಯಾತ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಉದ್ಘಾಟನೆ ನೆರವೇರಿಸುವರು. ಸಾಹಿತ್ಯ ಆಕಾಡೆಮಿ ಉಪಾಧ್ಯಕ್ಷ ಸತೀಂದರ್ ಸಿಂಗ್ ನೂರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು. ದೇಬ ಪ್ರಸಾದ್ ತಾಲೂಕ್ ದಾರ್ (ಆಸ್ಸಾಂ), ಸಿಲ್ವನಸ್ ಲಮಾರೆ (ಇಂಗ್ಲಿಷ್), ಪ್ರತಿಭಾ ನಂದಕುಮಾರ್(ಕನ್ನಡ), ರಫೀಕ್ ಆಹ್ಮದ್(ಮಲಯಾಳಂ), ತಿಲಕ ಬಾಮಾ(ತಮಿಳು), ಕೊಂಡೆಪುಡಿ ನಿರ್ಮಲಾ(ತೆಲುಗು) ಅವರು ಕವಿತಾ ವಾಚನ ಮಾಡಲಿದ್ದಾರೆ.

ಸೆ. 13 ಮಧ್ಯಾಹ್ನ 12 ರಿಂದ 1.30 ವರೆಗೆ ಮೊದಲ ಗೋಷ್ಠಿ

ಸಿರ್ಪಿ ಬಾಲಸುಬ್ರಮಣಿಯಂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಪ್ರಸ್ತುತ ತಮಿಳು ಕಾವ್ಯ ವಿಷಯ ಮೇಲೆ ಕೆ. ಚಲ್ಲಪ್ಪನ್ ಭಾಷಣ ಮಾಡಲಿದ್ದಾರೆ. ಹಿರೇಂದ್ರನಾಥ ದತ್ತ(ಅಸ್ಸಾಮಿ), ಚಂದ್ರಶೇಖರ್ ತಾಳ್ಯ(ಕನ್ನಡ), ರಾಪೇಶ್ ಪೌಲ್(ಮಲಯಾಳಂ), ಚಿಲ್ಲಾರ ಭವಾನಿ(ತೆಲುಗು) ಕವಿತಾ ವಾಚನ ಮಾಡಲಿದ್ದಾರೆ.

ಸೆ. 13 ಮಧ್ಯಾಹ್ನ 3 ರಿಂದ 5 ಗಂಟೆವರೆಗೆ ಎರಡನೇ ಗೋಷ್ಠಿ

ಗೋಷ್ಠಿಯ ಅಧ್ಯಕ್ಷತೆಯನ್ನು ಚಂದ್ರಶೇಖರ್ ಕಂಬಾರ ವಹಿಸಲಿದ್ದಾರೆ. ಪ್ರಸ್ತುತ ಕನ್ನಡ ಕವಿತೆ ವಿಷಯದ ಮೇಲೆ ಎಲ್.ಜಿ.ಮೀರಾ ಭಾಷಣ ಮಾಡಲಿದ್ದಾರೆ. ಲಲಿತಾ ಸಿದ್ದಬಸವಯ್ಯ(ಕನ್ನಡ), ಕುಂಜರಾನಿ ಲೋಂಗ್ ಜಮ್ ಭಾನು(ಮಣಿಪುರಿ), ವೀರಾನ್ ಕುಟ್ಟಿ(ಮಲಯಾಳಂ), ಕಿರಣ್ ಕುಮಾರ್(ನೇಪಾಳಿ), ಎನ್.ಲಕ್ಷ್ಮಿ ಪಾರ್ವತಿ(ತೆಲುಗು) ಅವರು ಕವಿತೆ ವಾಚನ ಮಾಡಲಿದ್ದಾರೆ.

ಸೆ. 14 ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ 11.30 ವರೆಗೆ ಮೂರನೇ ಗೋಷ್ಠಿ

ಈ ಗೋಷ್ಠಿಯ ಅಧ್ಯಕ್ಷತೆಯನ್ನು ಕರಬಿ ದೇಕ ಹಜಾರಿಕಾ(ಅಸ್ಸಾಮಿ) ವಹಿಸಲಿದ್ದಾರೆ. ಪ್ರಸ್ತುತ ಆಶಾನ್ಯ ಕವಿತೆ ವಿಷಯದ ಮೇಲೆ ಕಬಿನ್ ಪೂಕಾನ್ ಭಾಷಣ ಮಾಡಲಿದ್ದಾರೆ. ಉತ್ರಿಶ್ರಿ ಕೆ.ಬಸುಮಂತರಿ(ಬೋಡೊ), ಸುಮತಿಂದ್ರ ನಾಡಿಗ(ಕನ್ನಡ), ಎ.ಸಿ.ಶ್ರೀಹರಿ(ಮಲಯಾಳಂ), ತೇನರಸನ್(ತಮಿಳು), ದೇವಿಪ್ರಿಯ(ತೆಲುಗು) ಕವಿತೆ ವಾಚನ ಮಾಡಲಿದ್ದಾರೆ.

ನಾಲ್ಕನೇ ಗೋಷ್ಠಿ ಮಧ್ಯಾಹ್ನ ಅಂಬಿಕಾ ಅನಂತ್(ತೆಲುಗು) ವಹಿಸುವರು. ಪ್ರಸ್ತುತ ತೆಲುಗು ಕಾವ್ಯ ವಿಷಯದ ಮೇಲೆ ಸಿ.ಮೃಣಾಲಿನಿ ಭಾಷಣ ಮಾಡಲಿದ್ದಾರೆ. ಎಸ್.ಜಿ.ಸಿದ್ದರಾಮಯ್ಯ(ಕನ್ನಡ), ಅನಿತಾ ತಂಬಿ(ಮಲಯಾಳಂ), ರಾಜೇಂದ್ರ ಭಂಡಾರಿ(ನೇಪಾಳಿ), ಟಿ.ಪಾಲಮಲೈ(ತಮಿಳು), ಎ,ವಿದ್ಯಾಸಾಗರ್(ತೆಲುಗು) ಕವಿತಾ ವಾಚನ ಮಾಡಲಿದ್ದಾರೆ.

ಐದನೇ ಗೋಷ್ಠಿ ಮಧ್ಯಾಹ್ನ 2.30 ರಿಂದ 4.30ರ ವರೆಗೆ

ಅಧ್ಯಕ್ಷತೆಯನ್ನು ದೇಶಮಂಗಲಂ ರಾಮಕೃಷ್ಣನ್(ಮಲಯಾಳಂ) ವಹಿಸುವರು. ಪ್ರಸ್ತುತ ಮಲಯಾಳಂ ಕಾವ್ಯ ಬಗ್ಗೆ ಇ.ಪಿ.ರಾಜಗೋಪಾಲನ್ ಭಾಷಣ ಮಾಡಲಿದ್ದಾರೆ. ಅನಂತ ಝಂಜರವಾಡ(ಕನ್ನಡ), ಸುಕನ್ಯಾ ಮಾರುತಿ(ಕನ್ನಡ), ಪಟಾಲ್ ಕನ್ಯಾ ಜಮಾತಿಯ(ಕೊಕ್ ಬ್ರೋಕ್), ಜುಗೇಶ್ವರ್ ವಾಖ್ ವ (ಮಣಿಪುರಿ), ಕವಿಗ್ನರ್ ಪರಿಣಾಮಮ್(ತಮಿಳು), ಕೆ.ಎಸ್.ರಮಣ(ತೆಲುಗು) ಕವಿತಾ ವಾಚನ ಮಾಡಲಿದ್ದಾರೆ.

(ದಟ್ಸ್ ಕನ್ನಡ ಸಭೆ ಸಮಾರಂಭ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X