ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

80 ಲಕ್ಷ ರು. ಮೌಲ್ಯದ ಬ್ರೌನ್ ಶುಗರ್ ವಶ

By Staff
|
Google Oneindia Kannada News

ಬೆಂಗಳೂರು, ಸೆ. 12 : ಮಹತ್ವದ ಕಾರ್ಯಚರಣೆಯೊಂದರಲ್ಲಿ 80 ಲಕ್ಷ ರುಪಾಯಿ ಮೌಲ್ಯದ 870 ಗ್ರಾಂ ಬ್ರೌನ್ ಶುಗರ್ ವಶಪಡಿಸಿಕೊಳ್ಳುವಲ್ಲಿ ಉಪ್ಪಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಶುಕ್ರವಾರ ನಡೆದಿದೆ.

ನಾಗಾವಾರದ ಸಯ್ಯದ್(19) ಹಾಗೂ ದೇವನಹಳ್ಳಿ ಅಜೀಂ ಪಾಷಾ(23) ಬಂಧಿತ ಆರೋಪಿಗಳು. ಆರೋಪಿಗಳು ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ಬ್ರೌನ್ ಶುಗರ್ ಮಾರುತ್ತಿರುವಾಗ ಉಪ್ಪಾರ ಪೇಟೆ ಪೊಲೀಸರು ಬಂಧಿಸಿದ್ದಾರೆ. ಹೊಸಕೋಟೆಯ ಶೌಕತ್ ಅಲಿ ಎಂಬಾತ ಬ್ರೌನ್ ಶುಗರ್ ನನ್ನು ಒದಗಿಸಿ ಮಾರಾಟ ಮಾಡಲು ಹಚ್ಚಿದ್ದ ಎಂದು ಬಂಧಿತರು ವಿಚಾರಣೆ ವೇಳೆಯಲ್ಲಿ ಬಾಯಿಬಿಟ್ಟಿದ್ದಾರೆ.

ಶೌಕತ್ ಅಲಿ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದು, ಈ ಇಬ್ಬರು ಆರೋಪಿಗಳು ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ನಕಲಿ ಸಾಫ್ಟ್ ವೇರ್ ಜಾಲ ಭೇದಿಸಿದ ಸಿಸಿಬಿ
ಆನ್ ಲೈನಲ್ಲಿ ಹುಲಿಗಳ ಮಾರಾಟ; ಕ್ರಮಕ್ಕೆ ಆಗ್ರಹ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X